ಸಹಕಾರ ತತ್ವದ ಉದಾತ್ತ ಧ್ಯೇಯದೊಂದಿಗೆ ಸಹಕಾರ ಸಂಘ ಮುನ್ನಡೆದಿದೆ : ಎಚ್.ಡಿ.ಮಂಜುನಾಥ್ ಗೌಡ

ಯಲಹಂಕ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ‌ ಮಹಾಸಭೆ :

ಯಲಹಂಕ : ಯಲಹಂಕ ಉಪನಗರ 5ನೇ ಹಂತದಲ್ಲಿನ ‘ಸಹಕಾರ ಭವನ’ದಲ್ಲಿ ಮಂಗಳವಾರ ಆಯೋಜಿಸಿದ್ದ ‘ಯಲಹಂಕ ತಾಲ್ಲೂಕು ವ್ಯವಸಾಯೋತ್ಪನ್ನ‌ ಮಾರಾಟ ಸಹಕಾರ ಸಂಘ’ದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಸಹಕಾರ ಸಂಘದ ಅಧ್ಯಕ್ಷ ಎಚ್.ಡಿ.ಮಂಜುನಾಥ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಸಹಕಾರ ತತ್ವದ ಉದಾತ್ತ ಧ್ಯೇಯದೊಂದಿಗೆ ಸಹಕಾರ ಸಂಘ ಮುನ್ನಡೆಯುತ್ತಿದೆ. ವ್ಯಕ್ತಿಗಾಗಿ ಸಮಾಜ, ಸಮಾಜಕ್ಕಾಗಿ ಸಹಕಾರ ಎಂಬ ತತ್ವದ ಆಧಾರದ ಮೇಲೆ ಯಲಹಂಕ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು  ತನ್ನ ಸದಸ್ಯರುಗಳಿಗೆ ಕಳೆದ ಹಲವು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ್ಧು, ಗ್ರಾಹಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಸಹಕಾರ ಸಂಘವು ಮುಂದಿನ‌ ದಿನಗಳಲ್ಲಿ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ‌ ಹಿರಿಯ ಮುಖಂಡರಾದ ದೊಡ್ಡ ಬಸವರಾಜು, ಯಲಹಂಕ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಶ್ರೀನಿವಾಸಯ್ಯ ಕೆ.,   ರಮೇಶ್ ಟಿ., ಜಗನ್ನಾಥ್ ಡಿ., ಬಿ.ಸಿ.ಪಿಳ್ಳೇಗೌಡ, ಪಟಾಲಪ್ಪ ಪಿ., ರವಿಕುಮಾರ್ ಸಿ.ಎಂ., ರಘು ಸಿ.ಎನ್., ಜಾನಕಮ್ಮ, ಉಷಾ ಎನ್., ಪ್ರಕಾಶ್ ಎನ್.,ಕಾರ್ತೀಕ್‌ ಜಿ.ಕೆ., ಕಾರ್ಯದರ್ಶಿ ಶಶಾಂಕ್ ಎಸ್., ವ್ಯವಸ್ಥಾಪಕ ಅಭಿಲಾಷ್ ಎ.ವಿ. ಸೇರಿದಂತೆ ಸಿಬ್ಬಂದಿಗಳಿದ್ದರು.

Leave a Reply

Your email address will not be published. Required fields are marked *