







ಯಲಹಂಕ : ಧರ್ಮ ಸೇವಾ ಸಂಸ್ಥೆಯ ಸಂಸ್ಥಾಪಕ ಧರ್ಮದರ್ಶಿ ಎನ್ ಸಿ ನಾಣಯ್ಯನವರ ಆಶೀರ್ವಾದದೊಂದಿಗೆ ಯಲಹಂಕ ಕ್ಷೇತ್ರದ ಶ್ರೀರಾಮನಹಳ್ಳಿಯಲ್ಲಿರುವ ‘ಪೀಪಲ್ ಟ್ರಸ್ಟ್ ಸೇವಾ ಕೇಂದ್ರ’ದ ವತಿಯಿಂದ ಏಪ್ರಿಲ್ 26, 2026ರ ಭಾನುವಾರ 23ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಆಯೋಜಿಸಲಾಗಿದ್ದು, 25 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.
ಪೀಪಲ್ ಟ್ರಸ್ಟ್ ಸೇವಾ ಕೇಂದ್ರದ ಆವರಣದಲ್ಲಿ ಏರ್ಪಡಿಸಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹ ಮಾಡಿಕೊಳ್ಳಲು ಇಚ್ಚಿಸುವ ನವ ವಧು ವರರಿಗೆ ಟ್ರಸ್ಟ್ ವತಿಯಿಂದ ಮಾಂಗಲ್ಯ, ಕಾಲುಂಗುರ, ಮಿಂಚು, ಸೀರೆ, ಕುಪ್ಪಸ, ಶರ್ಟು, ಪಂಚೆ, ವಸ್ತ್ರ, ಹೂವಿನಹಾರ ಸೇರಿದಂತೆ ವಿವಾಹಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು.
ಈ ಸಾಮೂಹಿಕ ವಿವಾಹ ಮಹೋತ್ಸವದ ಪ್ರಯೋಜನ ಪಡೆಯಲಿಚ್ಚಿಸುವವರು ಶ್ರೀರಾಮನಹಳ್ಳಿಯಲ್ಲಿರುವ ಪೀಪಲ್ ಟ್ರಸ್ಟ್ ಸೇವಾ ಕೇಂದ್ರದ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ. ಅರ್ಜಿ ಸಲ್ಲಿಸುವ ವೇಳೆ ವಧು-ವರರ ತಂದೆ ತಾಯಿ ಕಡ್ಡಾಯವಾಗಿ ಹಾಜರಿರಬೇಕು.
ವಿವಾಹ ಮಾಡಿಕೊಳ್ಳಲು ಇಚ್ಚಿಸುವ ಜೋಡಿಗಳಲ್ಲಿ ಗಂಡಿಗೆ ಕಡ್ಡಾಯವಾಗಿ 21 ವರ್ಷ ತುಂಬಿರಬೇಕು, ಹೆಣ್ಣಿಗೆ 18 ವರ್ಷ ತುಂಬಿರಬೇಕು. ವಾಸ ಸ್ಥಳದ ವಿಳಾಸಕ್ಕಾಗಿ ವಧುವರರು ಆಧಾರ್ ಚೀಟಿಯ ಪ್ರತಿ ಅಥವಾ ಚುನಾವಣಾ ಗುರುತಿನ ಚೀಟಿಯ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ವಯೋಮಿತಿ ಮಾಹಿತಿಗಾಗಿ ಶಾಲಾ ವರ್ಗಾವಣೆ ಪತ್ರ(ಟಿ.ಸಿ.) ಅಥವಾ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಯಾವುದೇ ಕಾರಣಕ್ಕೂ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಮದುವೆ ಶಾಸ್ತ್ರಕ್ಕೆ ಅಗತ್ಯವಿರುವ ಅವರವರ ಸಂಪ್ರದಾಯದ ಕಳಸ ಮತ್ತು ಕಳಸದ ಸಾಮಗ್ರಿಗಳನ್ನು ಅವರೇ ತರಬೇಕು. ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ವಧು-ವರರು ಏಪ್ರಿಲ್ 25ರ ಶನಿವಾರ ಸಂಜೆ 6 ಗಂಟೆಯೊಳಗೆ ಪೀಪಲ್ ಟ್ರಸ್ಟ್ ನ ಆವರಣದಲ್ಲಿ ಹಾಜರಿರಬೇಕು. 25 ಜೋಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವ ದೆಸೆಯಲ್ಲಿ ಮೊದಲು ಬಂದು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು, ನಂತರ ಬರುವ ಅರ್ಜಿಗಳನ್ನು ನೋಂದಾಯಿಸಿಕೊಳ್ಳಲಾಗು ವುದಿಲ್ಲ. ನೋಂದಣಿ ಶುಲ್ಕ ಪ್ರತಿ ಜೋಡಿಗೆ 500 ರೂ ನಿಗದಿಪಡಿಸಲಾಗಿದೆ. ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಪ್ರಯೋಜನ ವನ್ನು ಯಲಹಂಕ ಮತ್ತು ಸುತ್ತಮುತ್ತಲ ಪ್ರದೇಶದ ಜನತೆ ಪಡೆದುಕೊಳ್ಳಬೇಕೆಂದು ಪೀಪಲ್ ಟ್ರಸ್ಟ್ ನ ‘ಸಾಮೂಹಿಕ ವಿವಾಹ ಸಮಿತಿ’ ವಿನಂತಿಸಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಜಿ.ಪ್ರಕಾಶ್ : 94821 38626
ಎಸ್ ಹೆಚ್ ಅಪ್ಪಣ್ಣ ಗೌಡ್ರು : 95915 35554
