







●ಯಲಹಂಕ ಸುದ್ದಿ. ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ 7.32 ಎಕರೆ ವಿಸ್ತೀರ್ಣ ಹೊಂದಿದ್ದು, 429 ಪ್ರೀಮಿಯಂ ಅಪಾರ್ಟ್ ಮೆಂಟ್ ಗಳನ್ನು ಹೊಂದಿದೆ. 70ಕ್ಕೂ ಹೆಚ್ಚು ಒಳಾಂಗಣ ಮತ್ತು ಹೊರಾಂಗಣ ಸೌಕರ್ಯಗಳನ್ನು ಒಳಗೊಂಡಿದೆ.
● 22,500 ಚದರ ಅಡಿಯ ಬಹು ಮಹಡಿ ಕ್ಲಬ್‌ಹೌಸ್ ಮತ್ತು 11,500 ಚದರ ಅಡಿಯ ಈಜುಕೊಳ ಲಭ್ಯವಿದೆ.
ಬ್ಯಾಟರಾಯನಪುರ : ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಗಳಲ್ಲಿ ಒಂದಾಗಿರುವ ಕಾಸಾಗ್ರ್ಯಾಂಡ್ ಸಂಸ್ಥೆಯು ಬ್ಯಾಟರಾಯನಪುರ ಕ್ಷೇತ್ರದ ಕೋಗಿಲು ಗ್ರಾಮದ ಸಮೀಪ ಹೊಸ ಐಷಾರಾಮಿ ಅಪಾರ್ಟ್ ಮೆಂಟ್ ‘ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ’ ವನ್ನು ಶನಿವಾರ ಉದ್ಘಾಟಿಸಿದೆ.
ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಬಿ+ಜಿ+13 ಮಹಡಿಗಳನ್ನು ಹೊಂದಿದ್ದು, ಇಲ್ಲಿ 429 ಐಷಾರಾಮಿ 3 ಮತ್ತು 4 ಬಿ ಎಚ್ ಕೆ ಫ್ಲಾಟ್ ಗಳಿವೆ. ಆಧುನಿಕ ಜೀವನಶೈಲಿಗೆ ಪೂರಕವಾಗಿ ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ. 7.32 ಎಕರೆ ವಿಸ್ತೀರ್ಣದ ಹಸಿರು ಭೂಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಅಪಾರ್ಟ್ ಮೆಂಟ್ ಯೋಜನೆಯು 70ಕ್ಕೂ ಹೆಚ್ಚು ಪ್ರೀಮಿಯಂ ಗುಣಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸೌಕರ್ಯಗಳನ್ನು ಹೊಂದಿದ್ದು, ಉತ್ತರ ಬೆಂಗಳೂರಿನ ಅತ್ಯಂತ ಆಕರ್ಷಕ ಯೋಜನೆಗಳಲ್ಲಿ ಒಂದಾಗಲಿದೆ. ಇಲ್ಲಿನ ಫ್ಲಾಟ್ ಗಳ ಬೆಲೆ 1.25 ಕೋಟಿ ರೂ.ಗಳಿಂದ ಆರಂಭವಾಗುತ್ತದೆ.
ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಅಪಾರ್ಟ್ ಮೆಂಟ್ ಆಕರ್ಷಕ ವಿನ್ಯಾಸವನ್ನು ಟ ಹೊಂದಿದ್ದು, ಸೊಗಸಾದ ಪ್ರವೇಶ ಕಮಾನು, ಆಧುನಿಕ ಶೈಲಿಯ ಮುಂಭಾಗ ಮತ್ತು ಮರಗಳಿಂದ ಕೂಡಿದ ಮಾರ್ಗಗಳು ಅಪೂರ್ವವಾಗಿ ಮೂಡಿ ಬಂದಿವೆ. ಇಲ್ಲಿ 22,500 ಚದರ ಅಡಿಯ ಬಹು ಮಹಡಿಯ ಕ್ಲಬ್‌ಹೌಸ್ ಮತ್ತು 11,500 ಚದರ ಅಡಿಯ ಈಜುಕೊಳವಿದೆ. ಇದರಲ್ಲಿ ಆಕ್ವಾ ಜಿಮ್, ಜಕೂಝಿ, ಮಕ್ಕಳ ಈಜುಕೊಳ, ರೇನ್ ಡಾನ್ಸ್ ಡೆಕ್ ಮತ್ತು ಪೂಲ್‌ಸೈಡ್ ಪಾರ್ಟಿ ಲಾನ್ ಸೌಲಭ್ಯ ಲಭ್ಯವಿದೆ.
ಮಕ್ಕಳಿಗಾಗಿ ಕ್ಲೈಂಬಿಂಗ್ ವಾಲ್ ಗಳು, ಸ್ಕೇಟಿಂಗ್ ರಿಂಕ್ ಗಳು, ಟ್ರಾಂಪೊಲೀನ್ ಗಳು ಸೇರಿದಂತೆ ಆನಂದದಾಯಕ ಆಟದ ಝೋನ್ ಗಳಿವೆ. ಕ್ರೀಡಾಪ್ರಿಯರಿಗೆ ಪಿಕಲ್ ಬಾಲ್, ಕ್ರಿಕೆಟ್ ಪ್ರಾಕ್ಟೀಸ್ ನೆಟ್ ಗಳು, ವಾಲಿಬಾಲ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟ್ ಗಳು ಲಭ್ಯವಿದೆ. ವಯಸ್ಕರಿಗೆ ಮತ್ತು ಹಿರಿಯರಿಗೆ ಧ್ಯಾನ ಮಂಟಪಗಳು, ಯೋಗ ಲಾನ್, ರಿಫ್ಲೆಕ್ಸಾಲಜಿ ವಾಕಿಂಗ್ ಮಾರ್ಗಗಳು ಸಿದ್ಧವಿದೆ. ರೂಫ್ ಟಾಪ್ ಸ್ಕೈ ಸಿನಿಮಾಸ್, ಕೋ ವರ್ಕಿಂಗ್ ಸ್ಪೇಸ್ ಗಳು, ಆಂಫಿ ಥಿಯೇಟರ್‌ಗಳು, ಸೈಕ್ಲಿಂಗ್ ಟ್ರ್ಯಾಕ್ ಗಳು, ಹೊರಾಂಗಣ ಜಿಮ್ ಗಳು ಹೀಗೆ ಹಲವು ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿದೆ.
ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಹೊಸ ಯೋಜನೆ ಕುರಿತು ‘ಕಾಸಾಗ್ರ್ಯಾಂಡ್’ ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಸಿ.ಜಿ. ಅವರು ಮಾತನಾಡಿ “ಆಧುನಿಕ ಮತ್ತು ಐಷಾರಾಮಿ ಜೀವನಶೈಲಿ ಹೊಂದಿರುವವರಿ ಗಾಗಿಯೇ ರೂಪುಗೊಂಡಿರುವ ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಉದ್ಘಾಟಿಸಿರುವುದು ಸಂತೋಷ ಉಂಟು ಮಾಡಿದೆ. ಇಲ್ಲಿನ ಪ್ರತಿಯೊಂದು ಮನೆಯನ್ನೂ ಸೊಗಸಾಗಿ ಮತ್ತು ಬಹಳ ಯೋಜನಾ ಪೂರ್ವಕವಾಗಿ ನಿರ್ಮಿಸಲಾಗಿದೆ. ಇಲ್ಲಿ ವಾಸಿಸುವವರಿಗೆ ಮನಃಶಾಂತಿ ಒದಸುವ ಉದ್ದೇಶದಿಂದಲೇ ವಿನ್ಯಾಸ ಗೊಳಿಸಲಾಗಿದೆ” ಎಂದು ತಿಳಿಸಿದರು.
ಈ ಅಪಾರ್ಟ್ ಮೆಂಟ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಕೇವಲ 20 ಕಿಮೀ, ಯಲಹಂಕ ರೈಲ್ವೆ ನಿಲ್ದಾಣದಿಂದ ಕೇವಲ 3.5 ಕಿಮೀ, ಶೀಘ್ರದಲ್ಲೇ ಚಾಲನೆಗೊಳ್ಳಲಿರುವ ಮೆಟ್ರೋ ನಿಲ್ದಾಣದಿಂದ ಕೇವಲ 2.8 ಕಿಮೀ ದೂರದಲ್ಲಿದೆ. ಅತ್ಯುತ್ತಮ ಸ್ಥಳದಲ್ಲಿ ನಗರದ ಮಧ್ಯೆಯೇ ವಿನ್ಯಾಸಗೊಂಡಿರುವ ಈ ಯೋಜನೆ ಗ್ರಾಹಕರಿಗೆ ಅಪೂರ್ವ ಸೌಕರ್ಯ ಒದಗಿಸಲಿದೆ.
ಈ ಯೋಜನೆಯು ಕರ್ನಾಟಕ ರೇರಾ ಅಡಿಯಲ್ಲಿ ನೋಂದಾಯಿತವಾಗಿದೆ.
ರೇರಾ ಸಂಖ್ಯೆ – PRM/KA/RERA/1251/472/PR/110925/008086 www.rera.karnataka.gov.in