ವರದಿ:ಮೇಘರಾಜ ವಾಲಿಕಾರ
ಇಂಡಿ : ಕಿರಾಣಿ ಅಂಗಡಿ, ಟೀ ಅಂಗಡಿ, ಹೋಟೆಲ್, ಪಾನ್ ಡಬ್ಟಾಗಳಲ್ಲೂ ಮದ್ಯ ಮಾರಾಟ, ರಾತ್ರೋ ರಾತ್ರಿ ಹಳ್ಳಿಗಳಿಗೆ ಮನಸೋಇಚ್ಛೆ ಸರಬರಾಜು, ಬಾರ್ ಮಾಲೀಕರಾದ ಪ್ರಭಾವಿಗಳು ಆಡಿದ್ದೇ ಆಟ. ಕಡಿಮೆ ಬೆಲೆ ಮದ್ಯ, ಹೆಚ್ಚಿನ ದರಕ್ಕೆ ಮಾರಾಟ.. ಇವು ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದಕ್ಕೆ ಉದಾಹರಣೆಗಳು.
ಪಟ್ಟಣದಲ್ಲಿ ಪರವಾನಗಿ ಪಡೆದ-ಬಹುತೇಕ ಬಾರ್ ಹಾಗೂ ಬ್ರ್ಯಾಂಡಿ ಅಂಗಡಿಗಳು ಪ್ರಭಾವಿಗಳ ಒಡೆತನದಲ್ಲಿವೆ. ಅವರ ಮುಂದೆ ಮಂಡಿಊರಿ ಕುಳಿತ ಅಬಕಾರಿ ಇಲಾಖೆ ಬಹುತೇಕ ಮದ್ಯದಂಗಡಿಗಳಲ್ಲಿ ಅಬಕಾರಿ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ.
ತಾಲೂಕಿನ ವಿಜಯಪುರ ರಸ್ತೆಯಲ್ಲಿ ಇರುವ ಢಾಬಾಗಳಲ್ಲಿ ಮಧ್ಯ ಮಾರಾಟ ಅತೀ ಜೋರು ಮತ್ತು ಇಂಗಳಗಿ ಢಾಬಾ ಗಳು ಮತ್ತು ಕಿರಾಣಿ ಅಂಗಡಿಗಳಲ್ಲಿ,ಹಂಜಗಿ ತಾಂಡಾಗಲ್ಲಿ ಇಂಡಿ ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಜೋರಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ದೂರುತ್ತಾರೆ.
ಪ್ರತಿ ಬಾಟಲ್ಗೆ 30ರಿಂದ 40 ರೂ. ವರೆಗೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇನ್ನು MSIL ಪರವಾನಗಿ ಪಡೆದುಕೊಂಡಿರುವ ಸನ್ನದುದಾರರು ಗ್ರಾಹಕರಿಗೆ ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.MSIL ಸನ್ನದುದಾರರು ಚಿಲ್ಲರೆ ವ್ಯಾಪಾರ ನಡೆಸುವಂತಿಲ್ಲ. ಆದರೆ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಬಾರ್ ಹಾಗೂ ರೆಸ್ಟೋರೆಂಟ್ ಪರವಾನಗಿ ಪಡೆದುಕೊಂಡವರು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ರಾಜಾರೋಷವಾಗಿಯೇ ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದಾರೆ. ಕೆಲವು ಬಾರ್‌ಗಳು ಬೆಳಗ್ಗೆಯೇ ತೆರೆಯುತ್ತವೆ. ಬಾರ್ ಮಾಲೀಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ನೇರವಾಗಿ ಆರೋಪಿಸುತ್ತಾರೆ.
ತಾಲೂಕು ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳ ಮಾಲೀಕರು ಅಬಕಾರಿ ಇಲಾಖೆ ನಿಯಮ ಗಾಳಿಗೆ ತೂರಿ ಮಾರಾಟದಲ್ಲಿ ತೊಡಗಿದ್ದಾರೆ. ಅಕ್ರಮ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿದ್ದಾರೆ.
MSILಯಿಂದ ಮನಸೋಇಚ್ಛೆ ಮದ್ಯ ಸಾಗಾಟ: ಅಧಿಕಾರಿಗಳ ಜಾಣ ಮೌನ