ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ವಿಜಯಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಶಸ್ತಿ :

ರಾಜಾಜಿನಗರದ ನಕ್ಷತ್ರ ಆಡಿಟೋರಿಯಂ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ :

ಬೆಂಗಳೂರು : ‘ವಿಜಯಲಕ್ಷ್ಮಿ ಚಾರಿಟಬಲ್ ಟ್ರಸ್ಟ್’ ಮತ್ತು ‘ಹಸಿರೇ ಉಸಿರು ಟ್ರಸ್ಟ್’ ವತಿಯಿಂದ ನಗರದ ರಾಜಾಜಿನಗರದ ‘ನಕ್ಷತ್ರ ಆಡಿಟೋರಿಯಂ’ನಲ್ಲಿ ಭಾನುವಾರ ಆಯೋಜಿಸಿದ್ದ ‌ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಡಾ.ಲೀಲಾವತಿ ಸದ್ಭಾವನಾ ಪ್ರಶಸ್ತಿ’, ‘ಪದ್ಮಶ್ರೀ ಬಿ.ಸರೋಜಾದೇವಿ ಸದ್ಭಾವನಾ ಪ್ರಶಸ್ತಿ’ ‘ಕರುನಾಡ ಸಾಧಕ ರತ್ನ’, ‘ಮರೆಯದ ಮಾಣಿಕ್ಯ ಪ್ರಶಸ್ತಿ’ ಸೇರಿದಂತೆ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಬೆಟ್ಟಹಲಸೂರು ಗ್ರಾಮದ ಹಿರಿಯ ಮುತ್ಸದ್ದಿ ಎಸ್.ಬಸವರಾಜ್ ಅವರಿಗೆ ‘ಕರುನಾಡ ಸಾಧಕ ರತ್ನ ಪ್ರಶಸ್ತಿ’, ‘ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ’ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ ಅವರಿಗೆ ‘ಮರೆಯದ ಮಾಣಿಕ್ಯ ಪ್ರಶಸ್ತಿ’, ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ‘ನಮ್ಮ ಕರ್ನಾಟಕ ಸೇನೆ’ಯ ರಾಜ್ಯ ಮಹಿಳಾ ಉಪಾಧ್ಯಕ್ಷೆ ಸುಜಾತ ಮತ್ತು ಪ್ರಧಾನ ಕಾರ್ಯದರ್ಶಿ ರತ್ನಮ್ಮ ಅವರಿಗೆ ‘ಸಾಹಸಸಿಂಹ ವಿಷ್ಣುವರ್ಧನ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾಜಿ ಸಚಿವರು, ಯಶವಂತಪುರ ಶಾಸಕರಾದ ಎಸ್.ಟಿ.ಸೋಮಶೇಖರ್, ಖ್ಯಾತ ಗಾಯಕ ಶಶಿಧರ್ ಕೋಟೆ, ‘ಹಸಿರೇ ಉಸಿರು ಟ್ರಸ್ಟ್‌’ನ ಸಂಸ್ಥಾಪಕ‌‌ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ, ವಿಶ್ವಕರ್ಮ ಶ್ರೀನಿವಾಸ್, ಶಾಂತಕುಮಾರ್ ಕೆ. ಸೇರಿದಂತೆ ಇನ್ನಿತರರ ಗಣ್ಯರಿದ್ದರು.

Leave a Reply

Your email address will not be published. Required fields are marked *