ಹೆಸರಘಟ್ಟ ಗ್ರಾ.ಪಂ.ಅಧ್ಯಕ್ಷರಾಗಿ ಎಚ್.ಎಸ್.ರಂಜನಿ ಮಧುಸೂದನ್ ಅವಿರೋಧ ಆಯ್ಕೆ :
ಯಲಹಂಕ : ಕ್ಷೇತ್ರದ ಹೆಸರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅದೇ ಗ್ರಾಮದ ಎಚ್.ಎಸ್.ರಂಜನಿ ಮಧುಸೂದನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೆಸರಘಟ್ಟ ಗ್ರಾ.ಪಂ.ಯಲ್ಲಿ ಒಟ್ಟು 25 ಜನ ಸದಸ್ಯರಿದ್ದು, ಅಧ್ಯಕ್ಷರಾಗಿದ್ದ ಪರಿಮಳ ಶ್ರೀನಿವಾಸ್ ಅವರಿಂದ ತೆರವಾದ ಸ್ಥಾನಕ್ಕಾಗಿ ಸೋಮವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಎಚ್.ಎಸ್.ರಂಜನಿ ಮಧುಸೂದನ್ ಅವರನ್ನು ಹೊರತುಪಡಿಸಿ ಉಳಿದ ಯಾರೂ ಸ್ಪರ್ಧಿಸದ ಕಾರಣದಿಂದಾಗಿ ಎಚ್.ಎಸ್.ರಂಜನಿ ಮಧುಸೂದನ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಗೂ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ಶಿವಾನಂದ ಆರ್., ನಿಕಟಪೂರ್ವ ಅಧ್ಯಕ್ಷರಾದ ಪರಿಮಳ ಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಬಿ.ಅಶ್ವಥ್, ಪುಷ್ಪಲತಾ, ಶ್ರೀನಿವಾಸಮೂರ್ತಿ, ವಸಂತಲಕ್ಷ್ಮಿ, ವಿದ್ಯಾ, ಲತಾ ಕೆ.ಆರ್., ಶಾಂತಾ ಎಚ್.ವಿ., ಅಂಜನಾದೇವಿ, ಬಿಜೆಪಿ ಮುಖಂಡರಾದ ಎಚ್.ಬಿ.ಹನುಮಯ್ಯ, ಪ್ರಕಾಶ್, ಅನ್ನದಾನಿ ವೆಂಕಟೇಶ್, ಸುಬ್ರಮಣಿ, ಗ್ರಾ.ಪಂ.ಸದಸ್ಯರಾದ ಲಕ್ಷ್ಮೀ ನಾರಾಯಣ ಟಿ.ಆರ್(ಪಿ.ಕೆ.ರಾಜಣ್ಣ), ಎಚ್.ವಿ. ಗೋವಿಂದರಾಜು, ಸುಧಾಮಣಿ ಎಂ.ಎಸ್., ಕಲಾವತಿ, ಎಚ್.ಕೆ.ಪ್ರಭಾಕರ್, ಎಚ್.ವಿ.ರೋಹಿತಾಶ್ವ, ಎಚ್.ಎಂ.ವೆಂಕಟೇಶ್, ಮಹಾಲಕ್ಷ್ಮಿ, ಎಚ್.ವಿ.ಶ್ರೀಧರ್, ಎಚ್.ಎನ್.ವನಜಾಕ್ಷಿ, ಎಚ್.ಆರ್.ಸುನಿಲ್ ಕುಮಾರ್, ಶಶಿಕಲಾ ಆರ್, ಎಚ್.ಕೆ.ಪುರುಷೋತ್ತಮ್, ಬಿ.ಎಸ್.ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *