ಶೀಘ್ರದಲ್ಲೇ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ರಿಲಯನ್ಸ್ ಡಿಜಿಟಲ್‌ಗೆ ಕಾಲಿಡಲಿರುವ ರೇ-ಬ್ಯಾನ್ ಮೆಟಾ ಜನರೇಷನ್ 1 ಗ್ಲಾಸ್‌ಗಳು
ರಾಷ್ಟ್ರೀಯ, ನವೆಂಬರ್ 7,2025: ರೇ-ಬ್ಯಾನ್ ಮೆಟಾ ಜೆನರೇಷನ್ 1 ಗ್ಲಾಸ್‌ಗಳು ನವೆಂಬರ್ 21 ರಂದು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ರಿಲಯನ್ಸ್ ಡಿಜಿಟಲ್.ಇನ್‌ನಲ್ಲಿ ಬಿಡುಗಡೆಯಾಗಲಿದ್ದು, ಭಾರತದಾದ್ಯಂತ ಮೆಟಾದ ನೂತನ ಧರಿಸಬಹುದಾದ ತಂತ್ರಜ್ಞಾನವನ್ನು ವ್ಯಾಪಕ ಗ್ರಾಹಕರಿಗೆ ತಲುಪಿಸಲಿದೆ.
ನವೆಂಬರ್ 6 ರಿಂದ, ಗ್ರಾಹಕರು “ನೋಟಿಫೈ ಮಿ” ಅಲರ್ಟ್‍ಗಳಿಗೆ ಸೈನ್ ಅಪ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ರೇ-ಬ್ಯಾನ್ ಮೆಟಾ ಜೆನ್ 1 ಸಂಗ್ರಹವನ್ನು ಖರೀದಿಸುವವರಲ್ಲಿ ಮೊದಲಿಗರಾಗಿರಲು ಸಾಧ್ಯವಾಗುತ್ತದೆ. ಈ ಶ್ರೇಣಿಯು ರೇ-ಬ್ಯಾನ್‌ನ ಐಕಾನಿಕ್ ಶೈಲಿಯನ್ನು ಮೆಟಾದ ಮುಂದುವರಿದ ಹ್ಯಾಂಡ್ಸ್-ಫ್ರೀ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತದೆ, ಇದು ಸುಲಭವಾದ ದೈನಂದಿನ ಚಟುವಟಿಕೆಗಳು ಮತ್ತು ಸಂಪರ್ಕಕ್ಕಾಗಿ ಸಹಾಯ ಮಾಡುತ್ತದೆ.
ಮೆಟಾದ ಭಾರತ ಮತ್ತು ಆಗ್ನೇಯ ಏಷ್ಯಾದ ಉಪಾಧ್ಯಕ್ಷೆ ಸಂಧ್ಯಾ ದೇವನಾಥನ್ ಅವರು ಮಾತನಾಡುತ್ತಾ, “ಮೆಟಾದಲ್ಲಿ, ಕಂಪ್ಯೂಟಿಂಗ್‌ನ ಭವಿಷ್ಯವು ವೈಯಕ್ತಿಕ, ತಡೆರಹಿತ ಮತ್ತು ಸಬಲೀಕರಣದಿಂದ ಕೂಡಿರುತ್ತದೆ ಎಂದು ನಾವು ನಂಬುತ್ತೇವೆ. ದೈನಂದಿನ ಜೀವನದಲ್ಲಿ ಸ್ವಾಭಾವಿಕವಾಗಿ ಹೊಂದಿಕೊಳ್ಳುವ ಸಾಧನಗಳ ಮೂಲಕ ಪ್ರತಿಯೊಬ್ಬರಿಗೂ ವೈಯಕ್ತಿಕ ಸೂಪರ್ ಇಂಟೆಲಿಜೆನ್ಸ್ ಅನ್ನು ತರುವುದು ನಮ್ಮ ಧ್ಯೇಯವಾಗಿದೆ. ಉತ್ತಮವಾಗಿ ಕಾಣುವುದಲ್ಲದೆ, ಸ್ಮಾರ್ಟ್, ಹ್ಯಾಂಡ್ಸ್-ಫ್ರೀ ಸಹಾಯವನ್ನು ಒದಗಿಸುವ AI-ಚಾಲಿತ ಕನ್ನಡಕಗಳೊಂದಿಗೆ, ನೀವು ಪ್ರಸ್ತುತವಾಗಿರಬಹುದು, ಸರಾಗವಾಗಿ ಸಂವಹನ ಮಾಡಬಹುದು ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ಅನುಭವಿಸುವ ವಿಧಾನವನ್ನು ನೂತನವಾಗಿಸಬಹುದು. ರೇ-ಬ್ಯಾನ್ ಮೆಟಾ ಕನ್ನಡಕಗಳು ಧರಿಸಬಹುದಾದ ತಂತ್ರಜ್ಞಾನದ ಮುಂದಿನ ಯುಗವನ್ನು ರೂಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ, ಮತ್ತು ಭಾರತವು ಈ ಪ್ರಯಾಣದ ಪ್ರಮುಖ ಭಾಗವಾಗಿದೆ. ಇದು ಸ್ಮಾರ್ಟ್‌ಫೋನ್‌ ಮೀರಿದ ಕಂಪ್ಯೂಟಿಂಗ್‌ನ ವಿಕಾಸದಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ.” ಎಂದು ಹೇಳಿದರು.
ಸ್ಮಾರ್ಟ್ ನಾವೀನ್ಯತೆಯನ್ನು ಪೂರೈಸಲಿರುವ ರೇ-ಬ್ಯಾನ್ ಮೆಟಾ ಜನರೇಷನ್ 1 ಐಕಾನಿಕ್ ವಿನ್ಯಾಸ
ಲಭ್ಯವಿರುವ ರೇ-ಬ್ಯಾನ್ ಮೆಟಾ ಜೆನ್ 1 ಸಂಗ್ರಹವು ಹಲವು ಫ್ರೇಮ್ ಮತ್ತು ಲೆನ್ಸ್ ರೂಪಾಂತರಗಳನ್ನು ಒಳಗೊಂಡಿದೆ. ಮೆಟಾ AI ಅಂತರ್ನಿರ್ಮಿತವಾಗಿ, ನೀವು “ಹೇ ಮೆಟಾ” ಎಂದು ಸಂಬೋಧಿಸುವ ಮೂಲಕ ಪ್ರಶ್ನೆಗಳನ್ನು ಕೇಳಬಹುದು, ಮಾಹಿತಿಯನ್ನು ಪಡೆಯಬಹುದು ಅಥವಾ ನಿಮ್ಮ ಕನ್ನಡಕವನ್ನು ಹ್ಯಾಂಡ್ಸ್-ಫ್ರೀ ಆಗಿ ನಿಯಂತ್ರಿಸಬಹುದಾಗಿದೆ. ಸಂಗ್ರಹವು ಲಿಖಿತ ಸೂಚಿಯ, ಬಿಸಿಲಿನ ಝಳಕ್ಕೆ ಆಗುವ ಸನ್ ಗ್ಲಾಸ್, ಧ್ರುವೀಕರಿಸಿದ(ಪೋಲರೈಸಡ್) ಮತ್ತು ಪರಿವರ್ತನೆಗಳ ಲೆನ್ಸ್‌ಗಳನ್ನು ಒಳಗೊಂಡಂತೆ ಕ್ಲಾಸಿಕ್ ರೇ-ಬ್ಯಾನ್ ಫ್ರೇಮ್‌ಗಳನ್ನು ಒಳಗೊಂಡಿದ್ದು, ಇವುಗಳು ನಿಮ್ಮ ಜೇಬಿಗೆ ಸುಲಭವಾಗಿ ಹೊಂದಿಕೊಳ್ಳುವ ಚಾರ್ಜಿಂಗ್ ಕೇಸ್‌ನೊಂದಿಗೆ ಲಭ್ಯವಿರಲಿದೆ. ಮೆರಾ ಬಳಕೆಯಲ್ಲಿರುವಾಗಲೆಲ್ಲಾ ಗೋಚರಿಸುವ ಕ್ಯಾಪ್ಚರ್ LED ಬೆಳಗುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಗೌಪ್ಯತೆ ಮತ್ತು ಸ್ಟೈಲ್ ಎರಡನ್ನೂ ಮುಂಚೂಣಿಯಲ್ಲಿರಿಸುತ್ತದೆ.
ಇತ್ತೀಚೆಗೆ, ರೇ-ಬ್ಯಾನ್ ಮೆಟಾ ಕನ್ನಡಕಗಳನ್ನು ಇನ್ನಷ್ಟು ಸ್ಮಾರ್ಟ್, ಹೆಚ್ಚು ವೈಯಕ್ತಿಕ ಮತ್ತು ಭಾರತದಲ್ಲಿ ಬಳಕೆದಾರರಿಗೆ ಹೆಚ್ಚು ಆನಂದದಾಯಕವಾಗಿಸಲು ನಾವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದೇವೆ. ನೀವು ಈಗ ಹಿಂದಿಯಲ್ಲಿ ಮೆಟಾ AI ಜೊತೆ ಮಾತನಾಡಬಹುದು. ನಾವು ದೀಪಿಕಾ ಪಡುಕೋಣೆ ಅವರ ಸೆಲೆಬ್ರಿಟಿ AI ಧ್ವನಿಯನ್ನು ಕೂಡ ಸೇರಿಸಿದ್ದೇವೆ, ಇದು ಸಂವಹನ ನಡೆಸಲು ಪರಿಚಿತ ಮತ್ತು ಆಕರ್ಷಕವಾದ ಮಾರ್ಗವನ್ನು ನೀಡುತ್ತದೆ. ಹಬ್ಬದ ಋತುವಿಗೆ ಸರಿಯಾಗಿ, ಹೊಸ “ರೀಸ್ಟೈಲ್” ವೈಶಿಷ್ಟ್ಯವು ನಿಮ್ಮ ಫೋಟೋಗಳನ್ನು ದೀಪಗಳು, ಬಣ್ಣಗಳು ಮತ್ತು ಹಬ್ಬದ ಥೀಮ್‌ಗಳೊಂದಿಗೆ ತಕ್ಷಣವೇ ಪರಿವರ್ತಿಸಲು “ಹೇ ಮೆಟಾ, ಇದನ್ನು ರೀಸ್ಟೈಲ್ ಮಾಡಿ” ಎಂಬ ಆಜ್ನೆಯ ಮೂಲಕ ಮಾಡಬಹುದಾಗಿದೆ. ಶೀಘ್ರದಲ್ಲೇ, ನಾವು UPI ಲೈಟ್ ಪಾವತಿಗಳನ್ನು ಪರೀಕ್ಷಿಸಲು ಪ್ರಾರಂಭಿಸುತ್ತೇವೆ – ಇಲ್ಲಿ ನೀವು QR ಕೋಡ್ ಅನ್ನು ಸರಳವಾಗಿ ನೋಡಿ, ₹1,000 ಕ್ಕಿಂತ ಕಡಿಮೆ ತ್ವರಿತ ವಹಿವಾಟುಗಳನ್ನು ಸುರಕ್ಷಿತವಾಗಿ ಮಾಡಲು “ಹೇ ಮೆಟಾ, ಸ್ಕ್ಯಾನ್ ಮಾಡಿ ಮತ್ತು ಪಾವತಿಸಿ” ಎಂದು ಹೇಳುವ ಮೂಲಕ ನೆರವೇರಿಸಬಹುದಾಗಿದೆ, ಇವೆಲ್ಲವೂ ನಿಮ್ಮ ಕನ್ನಡಕಗಳ ಮೂಲಕ, ಹ್ಯಾಂಡ್ಸ್-ಫ್ರೀ ಮೂಲಕ ಎಂಬುದು ವಿಶೇಷ.

Leave a Reply

Your email address will not be published. Required fields are marked *