









8.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ :
,ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ, ಶೆಟ್ಟಿಗೆರೆ-ಮುತ್ತುಗದಹಳ್ಳಿ- ಬೇಗೂರು ಮುಖ್ಯರಸ್ತೆ, ಬಾಗಲೂರು ಕಾಲೋನಿ-ರಜಾಕ್ ಪಾಳ್ಯ ಮುಖ್ಯರಸ್ತೆ ಮತ್ತು ಕಂಟ್ರಿಕ್ಲಬ್-ಸಾತನೂರು-ಬಾಗಲೂರು ಮುಖ್ಯರಸ್ತೆ ಸೇರಿದಂತೆ ಸುಮಾರು 8.5 ಕೋಟಿ ರು.ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಕೃಷ್ಣಬೈರೇಗೌಡ ಅವರ ಅನುಪಸ್ಥಿತಿಯಲ್ಲಿ ಅವರ ಧರ್ಮಪತ್ನಿ ಮೀನಾಕ್ಷಿ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದರು.
ಇದೇ ವೇಳೆ ರಸ್ತೆ ಡಾಂಬರೀಕರಣದ ಮಾಪನವನ್ನು ವೀಕ್ಚಿಸಿದ ಮೀನಾಕ್ಷಿ ಕೃಷ್ಣಬೈರೇಗೌಡ ಅವರು ಕಾಮಗಾರಿಯ ಗುಣಮಟ್ಟವನ್ನು ಖುದ್ದು ಪರಿಶಿಲಿಸಿದರು.
ಇದೇ ಸಂಧರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ದಾನೇಗೌಡ, ಸುಷ್ಮಾ ಮುನಿರಾಜು, ಹಿರಿಯ ಕಾಂಗ್ರೆಸ್ ಮುಖಂಡ ಸಿಂಗಹಳ್ಳಿ ವೆಂಕಟೇಶ್, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಬಾಗಲೂರು ಗ್ರಾ.ಪಂ.ಅಧ್ಯಕ್ಷ ಎ.ಕೆಂಪೇಗೌಡ, ದೊಡ್ಡಜಾಲ ಗ್ರಾ.ಪಂ.ಅಧ್ಯಕ್ಷ ಆರ್.ಬೈರೇಗೌಡ, ಕೆಪಿಸಿಸಿ ಸದಸ್ಯ ಶುಕೂರ್ ಅಹಮದ್ ಖಾನ್, ಕಾಂಗ್ರೆಸ್ ಮುಖಂಡರಾದ ರಾಜ್ ಕುಮಾರ್, ಡಿ.ಜಗನ್ನಾಥ್, ಜೈಕುಮಾರ್, ಬೇಗೂರು ಮಂಜುನಾಥ್, ಸಾತನೂರು ಬೈರೇಗೌಡ, ನಟರಾಜ್, ಬಾಗಲೂರು ಗ್ರಾ.ಪಂ.ಸದಸ್ಯರಾದ ಪಿಳ್ಳೇಗೌಡ ಸುಧೀಂದ್ತ, ಬಾಬಾಜಾನ್, ಉಸ್ಮಾನ್ ಘನಿ, ಯುವ ಮುಖಂಡರಾದ ಪ್ರದೀಪ್(ಮುತ್ತು), ಸಿ.ಎ.ಶಿವರಾಜ್, ನವೀನ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಿ.ವೆಂಕಟೇಶ್ ಸೇರಿದಂತೆ ಇನ್ನಿತರರಿದ್ದರು.
