ಡಾ.ವಾಣಿಶ್ರೀ ವಿಶ್ವನಾಥ್ ಅವರ ಜನ್ಮದಿನ :

ಬಿಜೆಪಿ ಮುಖಂಡರು, ಹಿತೈಷಿಗಳು, ಅಭಿಮಾನಿಗಳಿಂದ ಶುಭ ಹಾರೈಕೆ :

ಯಲಹಂಕ : ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಸಹಕಾರ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ವಾಣಿಶ್ರೀ ವಿಶ್ವನಾಥ್ ಅವರ ಜನ್ಮದಿನದ ಪ್ರಯುಕ್ತ ಯಲಹಂಕ ಕ್ಷೇತ್ರದ ಹಲವು ಬಿಜೆಪಿ ಮುಖಂಡರು, ವಾಣಿಶ್ರೀ ವಿಶ್ವನಾಥ್ ಅವರ ಹಿತೈಷಿಗಳು, ಅಭಿಮಾನಿ ಗಳು ಸೇರಿದಂತೆ ಹಲವು ಗಣ್ಯರು ತಮ್ಮ ನೆಚ್ಚಿನ ನಾಯಕಿ ಡಾ.ವಾಣಿಶ್ರೀ ವಿಶ್ವನಾಥ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ (ಪ್ರಭಾರ)ಮುರಾರಿರಾಮು, ಕೆಂಪೇಗೌಡ ವಾರ್ಡ್ ವಾರ್ಡ್ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ, ಜಗದೀಶ್, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಯುವ ಮುಖಂಡರಾದ ಪುರುಷೋತ್ತಮ್, ಅಕ್ಷತ್, ಮಂಜುನಾಥ್, ಮಹಿಳಾ ಮುಖಂಡರಾದ ಲತಾ ಚಂದ್ರಶೇಖರ್, ಡಾ.ಸೌಮ್ಯ, ಅನುಪಮ‌, ಶ್ವೇತ, ಮಂಜಮ್ಮ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *