Jan 20, 2026

ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಚುನಾವಣಾ ಫಲಿತಾಂಶ :

ಎಲ್ಲಾ ನಿರ್ದೇಶಕರು ಅವಿರೋಧ ಆಯ್ಕೆ :

ಯಲಹಂಕ : ಯಲಹಂಕ ಉಪನಗರದಲ್ಲಿರುವ ‘ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘ’ಕ್ಕೆ ಮುಂದಿನ ಐದು ವರ್ಷಗಳ ವರೆಗಿನ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನದ ಆಯ್ಕೆಗಾಗಿ ಸ್ಪರ್ಧಿಸಿದ್ದ ಎಲ್ಲಾ 15 ಅಭ್ಯರ್ಥಿಗಳು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿದ್ದ ಹೆಬ್ಬಾಳದ ಸಿ.ಆರ್‌.ಜಯಪ್ಪರೆಡ್ಡಿ, ರಾಜಾನುಕುಂಟೆ ಗ್ರಾಮದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಇಟಗಲ್ ಪುರ ಗ್ರಾಮದ ಎಂ.ಮೋಹನ್ ಕುಮಾರ್,ಅದ್ದೆವಿಶ್ವನಾಥಪುರದ ರತ್ನಮ್ಮ, ಹೊನ್ನೇನಹಳ್ಳಿ ಗ್ರಾಮದ ರಾಜಣ್ಣ ಎಚ್., ರಾಜಣ್ಣ ಟಿ., ಕಾಚಮಾರಕನಹಳ್ಳಿಯ ಸತೀಶ್ ಕೆ.ವಿ., ಸಿಂಗನಾಯಕನಹಳ್ಳಿ ಗ್ರಾಮದ ಎಸ್.ಎನ್.ಸಂಪತ್ ಕುಮಾರ್, ಚೊಕ್ಕನಹಳ್ಳಿ ಬಡಾವಣೆಯ ವೆಂಕಟರಾಮರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗ ಪ್ರವರ್ಗ ‘ಎ’ ಸ್ಥಾನಕ್ಕೆ ಸೋಮೇಶ್ವರನಗರದ ಕೆ.ಜಿ.ರಾಮಕೃಷ್ಣಯ್ಯ, ಹಿಂದುಳಿದ ವರ್ಗ ಪ್ರವರ್ಗ ‘ಬಿ’ ಸ್ಥಾನಕ್ಕೆ ತಿಮ್ಮಸಂದ್ರ ಗ್ರಾಮದ ಟಿ‌.ಎನ್.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಮೀಸಗಾನಹಳ್ಳಿಯ ನರಸಿಂಹಮೂರ್ತಿ ಜಿ., ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಸಿ.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಮಹಿಳಾ ಮೀಸಲು ಸ್ಥಾನಕ್ಕೆ ಕಲ್ಯಾಣನಗರದ ನೀತಾ ಎಂ.ಎನ್. ಮತ್ತು ಸುಜಾತ ಜಿ.ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರು ಪರಸ್ಪರ ಸಿಹಿ ಹಂಚಿಕೆ ಮೂಲಕ ತಮ್ಮ ಗೆಲುವಿನ ಸಂಭ್ರಮ ಆಚರಿಸಿದರು.

ಪ್ರಕಟಣೆ.  ವೆಂಕಟರಮರೆಡ್ಡಿ ಚೊಕ್ಕನಹಳ್ಳಿ ಕಾಂಗ್ರೆಸ್ ಮುಖಂಡರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout 

Yelahanka Bangalore Karnataka

7349337989.   9845085793

Leave a Reply

Your email address will not be published. Required fields are marked *