
ಶ್ರೀ ಮೊಹಮ್ಮದ್ ರಫೀ ರವರಿಗೆ ಜನತಾದಳ(ಜಾತ್ಯತೀತ) ಪಕ್ಷದ “ಹಿರಿಯ ಉಪಾಧ್ಯಕ್ಷರು”ಯನ್ನಾಗಿ ಆಯ್ಕೆ
ಯಲಹಂಕ ಸುದ್ದಿ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರುವ ಬೆಂಗಳೂರು ಉತ್ತರನಗರ ಜಿಲ್ಲೆ ಜನತಾದಳ(ಜಾತ್ಯತೀತ) ಪಕ್ಷದ “ಹಿರಿಯ ಉಪಾಧ್ಯಕ್ಷರು” ಯನ್ನಾಗಿ ಈ ಕೂಡಲೆ ಜಾರಿಗೆ ಬರುವಂತೆ ಮಹಮ್ಮದ್ ರಫಿ ರವರಿಗೆ ನೇಮಕ ಮಾಡಲಾಗಿದೆ ಹಾಗೆಯೇ ಇವರು ಸತತವಾಗಿ ಪಕ್ಷದ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅನೇಕ ಸಮಾಜ ಸೇವೆಗಳ ಕೆಲಸವನ್ನು ಮಾಡಿರುತ್ತಾರೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಮಹಮ್ಮದ್ ರಫಿ ರವರು ಈ ಗುರುತರವಾದ ಜವಬ್ದಾರಿಯನ್ನು ವಹಿಸಿಕೊಂಡು, ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ, ಬೆಂಗಳೂರು ಉತ್ತರ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಜನತಾದಳ (ಜಾತ್ಯತೀತ) ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತೀರೆಂದು ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿಯತಾ ಕೆಲಸವನ್ನು ಮಾಡಿ ಈ ಭಾಗದಲ್ಲಿ ಪಕ್ಷವನ್ನು ಬಲಿಪಡಿಸಬೇಕೆಂದು ಪಕ್ಷದ ನಾಯಕರು ಕಾರ್ಯಕರ್ತರು ಆಶಿಸುತ್ತವೆ
