














ಶಾಸಕ ಎಸ್ ಆರ್ ವಿಶ್ವನಾಥ್, ಹಲವು ಗಣ್ಯರಿಂದ ಶುಭ ಹಾರೈಕೆ :
ಯಲಹಂಕ : ಬೆಂ.ಉತ್ತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾದೇನಹಳ್ಳಿ ಎಸ್ ಪಿ ಪ್ರಕಾಶ್ ಗೌಡ ಅವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್, ಬಿಜೆಪಿ ಯುವ ಮುಖಂಡ, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಹಿತೈಷಿಗಳು, ಸ್ನೇಹಿತರು ಪ್ರಕಾಶ್ ಗೌಡ ಅವರನ್ನು ಸನ್ಮಾನಿಸಿ, ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಿಬ್ಬೂರು ಜಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಹಿರಿಯ ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಆವಲಹಳ್ಳಿ ಕೇಶವಮೂರ್ತಿ, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಬಿಜೆಪಿ ಮುಖಂಡರಾದ ಶಿವಾನಂದ್, ಆರ್.ಡಿ.ರಾಜಣ್ಣ, ರಘು, ಹರೀಶ್, ವೆಂಕಟೇಶ್, ಗೋವಿಂದರಾಜು, ಕೆ.ಬಾಬು, ಮುನಿಕೃಷ್ಣ, ಅನಿಲ್ ಬೈರಾಪುರ, ಉಲ್ಲಾಸ್, ಗೌತಮ್, ಪರೀಕ್ಷಿತ್ ಸೇರಿದಂತೆ ಇನ್ನಿತರರಿದ್ದರು.
