ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ನಾಗವಾರದಲ್ಲಿ ನೂತನವಾಗಿ ನಿರ್ಮಿಸಿರುವ ಒನ್ ಪಾಯಿಂಟ್ ಕ್ರಿಸ್ ಅಮೆರಿಕನ್ ಹಾಸ್ಪಿಟಲ್ ನಲ್ಲಿ ಉಚಿತ ಪಿಂಕ್ ಆಂಬ್ಯುಲೆನ್ಸ್ ಹಾಗೂ 100 ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಮಮೋಗ್ರಫಿ ಸೇವೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಮಾನ್ಯ ಅವರು ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಉದ್ಘಾಟನೆ ಮತ್ತು ಪಿಂಕ್ ಆಂಬ್ಯುಲೆನ್ಸ್ ಚಾಲನೆಯ ಜತೆಗೆ ಆಸ್ಪತ್ರೆಯು ಬಡವರ ಬಗೆಗಿನ ಕಾಳಜಿಯ ನಿಮಿತ್ತ ಬಿಪಿಎಲ್ ಕಾರ್ಡ್ ಹೊಂದಿರುವ 100 ರೋಗಿಗಳಿಗೆ ಉಚಿತ ಮಮೊಗ್ರಫಿ ಸೇವೆಯನ್ನು ನೀಡುತ್ತಿರುವುದು ಸಂತೋಷದ ಸಂಗತಿ.

ಪಿಂಕ್ ಆಂಬ್ಯುಲೆನ್ಸ್ ಮಾನವೀಯ ಸೇವೆಯು ಆಸ್ಪತ್ರೆಯ 5 ಕಿಮೀ ವ್ಯಾಪ್ತಿಯ ಬಡ ಮಹಿಳೆಯರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುವ ಮಹತ್ವದ ಉದ್ದೇಶ ಹೊಂದಿದ್ದು, ಇದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆಸ್ಪತ್ರೆಯ ವತಿಯಿಂದ ಮಾನವೀಯತೆ ಮೆರೆಯುವ ಇಂತಹ ಇನ್ನೂ ಹೆಚ್ಚಿನ ಸೇವೆಗಳು ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮ ಉದ್ದೇಶಿಸಿ ಒನ್ ಪಾಯಿಂಟ್ ಕ್ರಿಸ್ ಅಮೆರಿಕನ್ ಹಾಸ್ಪಿಟಲ್ ನ ಅಧ್ಯಕ್ಷ ಡಾ. ರಾಬರ್ಟ್ ಕ್ರಿಸ್ಟೋಫರ್ ಮಾತನಾಡಿ ಸಚಿವರು ತಮ್ಮ ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟು, ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ಅನಂತ ಧನ್ಯವಾದಗಳು. ಒನ್ ಪಾಯಿಂಟ್ ಕ್ರಿಸ್ ಅಮೆರಿಕನ್ ಹಾಸ್ಪಿಟಲ್ ಚೆನ್ನೈ ಮತ್ತು ಬೆಂಗಳೂರು ನಗರದ ಸುತ್ತಮುತ್ತ ಇನ್ನೂ 10 ಆಸ್ಪತ್ರೆಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದು, ಇದಕ್ಕಾಗಿ ಸುಮಾರು 1000 ಕೋಟಿ ರು. ಗಳನ್ನು ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದೆ ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ದೊರೆಯಲಿದ್ದು, ಇನ್ನೂ ಹೆಚ್ಚಿನ ಬಡವರಿಗೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ಭರವಸೆ ನೀಡಿದರು.. ,

ಉಚಿತ ಪಿಂಕ್ ಆಂಬ್ಯುಲೆನ್ಸ್ ಮಮೊಗ್ರಫಿ ಸೇವೆಗಳಿಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ :

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.