[17/08, 7:11 pm] Rep Bidar Vagmar: ಆ.19 ರಂದು ಜನ ಸಂಪರ್ಕ ಸಭೆ

ಬೀದರ. ಆಗಸ್ಟ್.17 (ಕರ್ನಾಟಕ ವಾರ್ತೆ)- ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಗುವಿಸಕಂನಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 19 ರಂದು ಬೆಳಿಗ್ಗೆ 11 ಗಂಟೆಗೆ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿರುತ್ತದೆ.
ಜನಸಂಪರ್ಕ ಸಭೆಗಳ ವಿವರ: ಆ.19 ರಂದು ಬೆಳಿಗ್ಗೆ 11 ಗಂಟೆಗೆ ಔರಾದ ಉಪ ವಿಭಾಗ, ಮಧ್ಯಾಹ್ನ 3 ಗಂಟೆಗೆ ಭಾಲ್ಕಿ ಉಪ ವಿಭಾಗದಲ್ಲಿ, ಆ.19 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ಉಪ ವಿಭಾಗದಲ್ಲಿ, ಮಧ್ಯಾಹ್ನ 3 ಗಂಟೆಗೆ ಕಮಠಾಣ ಉಪ ವಿಭಾಗದಲ್ಲಿ ಜನಸಂಪರ್ಕ ಸಭೆಗಳು ನಡೆಯಲಿವೆ.
ಪ್ರಯುಕ್ತ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸಲು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[17/08, 7:11 pm] Rep Bidar Vagmar: ಜೀಮ್ ಸ್ಥಾಪನೆಗೆ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

ಬೀದರ, ಆಗಸ್ಟ್ 17 (ಕರ್ನಾಟಕ ವಾರ್ತೆ)- 2023-24ನೇ ಸಾಲಿನ ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ಅಂತರರಾಷ್ಟಿçÃಯ ಮತ್ತು ರಾಷ್ಟಿçÃಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜೀಮ್ ಸ್ಥಾಪನೆಗಾಗಿ ಸಹಾಯಧನ ನೀಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯದಿನವಾಗಿದ್ದು. ಆಸಕ್ತ ಕ್ರೀಡಾಪಟುಗಳು ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಬೀದರ ಇವರನ್ನು ಸಂಪರ್ಕಿಸುವAತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[17/08, 7:11 pm] Rep Bidar Vagmar: ಬಿಡಾಡಿ ದನಗಳನ್ನು ರಸ್ತೆಗಳ ಮೇಲೆ ಬಿಡದಂತೆ ಸೂಚನೆ

ಬೀದರ. ಆಗಸ್ಟ್.17 (ಕರ್ನಾಟಕ ವಾರ್ತೆ)- ಬೀದರ ನಗರದ ಪ್ರಮುಖ ರಸ್ತೆಗಳ ಮೇಲೆ ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ಬಿಡಾಡಿ ದನಗಳು ಕಂಡುಬAದಿರುತ್ತವೆ. ಕಾರಣ ಸದರಿ ಮಾಲೀಕರು ಕೂಡಲೆ 07 ದಿನದೊಳಗಡೆ ಬಿಡಾಡಿ ದನಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳಲು ಸೂಚಿಸಿದೆ ಮತ್ತು ರಸ್ತೆಗಳ ಮೇಲೆ ಬಿಡಲಾರದೆ ನೋಡಿಕೊಳ್ಳಲು ಕಟ್ಟುನಿಟ್ಟಾಗಿ ಸೂಚಿಸಿದೆ. ಒಂದು ವೇಳೆ ಬಿಡಾಡಿ ದನಗಳು ರಸ್ತೆಗಳ ಮೇಲೆ ಕಂಡು ಬಂದಲ್ಲಿ ತಮ್ಮ ಬಿಡಾಡಿ ದನಗಳನ್ನು ನಗರಸಭೆ ವತಿಯಿಂದ ಹಿಡಿದು ಹಾಕಲಾಗುವುದು ಮತ್ತು ಕರ್ನಾಟಕ ಮುನ್ಸಿಪಾಲ್ 1964 ಕಾಯ್ದೆ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುತ್ತದೆಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *