ಯಲಹಂಕ ದಲ್ಲಿ ಮಡಿವಾಳ ಮಾಚಿದೇವರ ಮೆರವಣಿಗೆ ಯಲಹಂಕದ ಬೀದಿಗಳಲ್ಲಿ ಮೆರವಣಿಗೆ ಮಾಡಿ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ಯಲಹಂಕ ಶಾಸಕರು SR ವಿಶ್ವನಾಥ್ ರವರು ಉಪಸ್ಥಿತರಿದ್ದರು ಹಾಗೂ ಮಡಿವಾಳ ಸಮುದಾಯದ ಸಂದೀಪ್ ಅಧ್ಯಕ್ಷರು ಹಾಗೂ ಇನ್ನು ಅನೇಕ ಎಲ್ಲ ಮುಖಂಡರು ಹಾಗೂ ಯಲಹಂಕ ಕರವೇ ಅಧ್ಯಕ್ಷರು ಕನ್ನಡ ಶಂಕರ್ ರವರು ಗ್ರಾಮಸ್ಥರು ಮುಖಂಡರು ಗಳೊಂದಿಗೆ ಅದ್ದೂರಿ ಯಾಗಿ ಆಚರಿಸಿ ಮಡಿವಾಳ ಮಾಚಿದೇವ ಸಮದಾಯದ ಕೆಲವು ಬೇಡಿಕೆಗಳನ್ನು ಯಲಹಂಕ ತಹಸೀಲ್ದಾರ್ ರವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಏನೆಂದರೆ…
ವಿಷಯ:- ಮಡಿವಾಳ ಮಾಚಿದೇವ ಸಮುದಾಯವು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಈ ನಮ್ಮ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳನ್ನು ಹಾಗೂ ವಸತಿಗಳಿಗೆ ಜಾಗ ಮಂಜೂರು ಮಾಡಿಕೊಡಲು ಒತ್ತಾಯಿಸಿ ದಿನಾಂಕ 7/4/2026 ರಂದು ಸಲ್ಲಿಸುತ್ತಿರುವ ಮನವಿ.
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಡಿವಾಳ ಮಾಚಿದೇವ ಚಾರಿಟಬಲ್ ಟ್ರಸ್ಟ್‌ನ ವತಿಯಿಂದ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ನಮ್ಮ ಸಮುದಾಯದಲ್ಲಿ ಅತ್ಯಂತ ಹಿಂದುಳಿದ ಬಡವರಿದ್ದು ಸಾಕಷ್ಟು ಜನರು ಸ್ವಂತ ಸೂರು ಇಲ್ಲದೆ ಅನೇಕ ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾ ಬರುತ್ತಿರುತ್ತಾರೆ. ಅನೇಕ ರೀತಿಯಲ್ಲಿ ಈ ನಮ್ಮ ಸಮುದಾಯವು ಅವಕಾಶ ವಂಚಿತರಾಗಿರುತ್ತಾರೆ. ಹೆಚ್ಚು ಜನರು ತಮ್ಮ ಕುಲಕಸುಬನ್ನೇ ಜೀವನಾಧಾರವಾಗಿ ಮಾಡಿಕೊಂಡು ಬಂದಿರುತ್ತಾರೆ. ಈ ನಮ್ಮ ಸಮುದಾಯದ ಜನರಿಗೆ ಇಲ್ಲಿಯ ತನಕ ಸರ್ಕಾರದಿಂದಾಗಲೀ, ಇಲಾಖೆಗಳಿಂದಾಗಲೀ ಯಾವುದೇ ಸವಲತ್ತುಗಳು, ಸೌಲಭ್ಯಗಳು ದೊರೆತಿರುವುದಿಲ್ಲ.
ಆದುದರಿಂದ ತಾವುಗಳು ಈ ಮಡಿವಾಳ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಿ ಸರ್ಕಾರದಿಂದ, ಇಲಾಖೆಗಳಿಂದ ಬರುವಂತಹ ಸವಲತ್ತುಗಳನ್ನು ನೇರವಾಗಿ ನಮ್ಮ ಸಮುದಾಯದ ಜನರಿಗೆ ಒದಗಿಸಿ ಹಾಗೂ ಮಡಿವಾಳ ಸಮುದಾಯಕ್ಕೆ ಸಂಬಂಧಪಟ್ಟ ಕುಲಗುರು ಮಡಿವಾಳ ಮಾಚಿದೇವರ ಜಯಂತಿಯನ್ನು ದೊಡ್ಡಮಟ್ಟದಲ್ಲಿ ಆಚರಿಸಲು ಅನುವು ಮಾಡಿಕೊಡಬೇಕು ಹಾಗೂ ಈ ಮಡಿವಾಳ ಮಾಚಿದೇವ ಸಮುದಾಯಕ್ಕೆ ಸೂಕ್ತ ಸ್ಥಳದಲ್ಲಿ ವಸತಿ ಸೌಕರ್ಯಕ್ಕಾಗಿ ಜಾಗ ಮಂಜೂರು ಮಾಡಿಕೊಡಬೇಕೆಂದು ಕೋರುತ್ತೇವೆ. ಎಂದು ಯಲಹಂಕ ಭಾಗದ ಅನೇಕ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು ವಿಶೇಷವಾಗಿ ರಕ್ಷಕ್ ಬುಲೆಟ್ ರವರು ಕಾರ್ಯಕ್ರಮಕ್ಕೆ ಬಂದು ಅವರು ಸಹ ಜೊತೆಗೂಡಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಯಶಸ್ವಿಯಾಯಿತು

ಪತ್ರಿಕೆಗೆ.   ಪ್ರೋತ್ಸಾಹಕರು

ಕನ್ನಡ ಶಂಕರ್ ಯಲಹಂಕ.  ಕನ್ನಡ ರಕ್ಷಣೆ ವೇದಿಕೆ ಅಧ್ಯಕ್ಷರು

Leave a Reply

Your email address will not be published. Required fields are marked *