










ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದೇವತೆ ಶ್ರೀ ಮುತ್ಯಾಲಮ್ಮದೇವಿ ಜಾತ್ರೆ ಮತ್ತು ರಥೋತ್ಸವ ಬುಧವಾರ ಬೆಳಿಗ್ಗೆ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಪ್ರಯುಕ್ತ ಸೋಮವಾರ ಶಿವದೇವಾಲಯಗಳಿಗೆ ಆರತಿ, ಮಂಗಳವಾರ ದನದೇವರಿಗೆ ಆರತಿ, ಮಂಗಳವಾರ ಶ್ರೀ ಮುತ್ಯಾಲಮ್ಮದೇವಿಗೆ ಆರತಿ, ಅಗ್ನಿಕುಂಡ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ರಥೋತ್ಸವದ ಪ್ರಯುಕ್ತ ಗ್ರಾಮದ ಮಹಿಳೆಯರು ಅಲಂಕೃತವಾದ ಆರತಿ ಹೊತ್ತು ಮುತ್ಯಾಲಮ್ಮದೇವಿ ದೇವಾಲಯದ ಬಳಿಗೆ ಆಗಮಿಸಿ ದೇವಿಗೆ ಆರತಿ ನೆರವೇರಿಸಿದರು. ರಥೋತ್ಸವದ ಪ್ರಯುಕ್ತ ನೆರೆದಿದ್ದ ಬೆಟ್ಟಹಲಸೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಶ್ರೀ ಮುತ್ಯಾಲಮ್ಮದೇವಿ ಮತ್ತು ಸತ್ಯಮ್ಮದೇವಿಯ ರಥ ಎಳೆದು ದೇವಿಯರ ಕೃಪೆಗೆ ಪಾತ್ರರಾದರು.
ರಥೋತ್ಸವದ ಈ ದೈವ ಕಾರ್ಯದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಶಾಸಕರು, ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಪಾಲ್ಗೊಂಡು ಹೆಚ್ಚಿನ ಮೆರಗು ನೀಡಿದರು.
ರಥೋತ್ಸವದ ಈ
ಕಾರ್ಯದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಮಾಜಿ ಅಧ್ಯಕ್ಷರಾಧ ಬಿ.ಎಂ.ನಾಗೇಶ್, ಬಿ.ಎಸ್.ಅನಿಲ್ ಕುಮಾರ್, ತಾ.ಪಂ.ಮಾಜಿ ಸದಸ್ಯ ಬಿ.ನಾಗರಾಜ್ ಬಾಬು,ಗ್ರಾ.ಪಂ. ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಗ್ರಾಮದ ಮುಖಂಡರಾದ ಬಿ.ಕೆ.ಮಂಜುನಾಥಗೌಡ, ರವೀಂದ್ರನಾಥಗೌಡ, ನಾರಾಯಣಗೌಡ, ಬಿ.ಎನ್.ಮಂಜುನಾಥ್(ಎಸ್.ಕೆ.ಬಿ.),ಬಿ.ಬಿ.ಉಮೇಶ್(ಎಸ್.ಎಂ.ಎಲ್.ಪಿ.), ಚಿತ್ರಶೇಖರ್, ಬಿ.ಬಸವರಾಜು, ಬಿ.ನಾರಾಯಣ, ಗುರುಪ್ರಸಾದ್, ದೇವರಾಜ್ ಸೇರಿದಂತೆ ಗ್ರಾಮಸ್ಥರು ಹಾಗೂ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿದ್ದರು.
