




ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ :
ಬ್ಯಾಟರಾಯನಪುರ : ಕ್ಷೇತ್ರದ ಮೈಲನಹಳ್ಳಿ ಮತ್ತು ಎಂ.ಹೊಸಹಳ್ಳಿ ಗ್ರಾಮಗಳಲ್ಲಿ 1 ಕೋಟಿ ರು. ಅಂದಾಜು ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಶನಿವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ದಾನೇಗೌಡ, ಕಾಂಗ್ರೆಸ್ ಮುಖಂಡರಾದ ಅಂಜನಪ್ಪ (ಪುಟ್ಟು),ಸಿಂಗಹಳ್ಳಿ ವೆಂಕಟೇಶ್, ಮೈಲನಹಳ್ಳಿ ರಾಜಕುಮಾರ್, ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ಉಪಾಧ್ಯಕ್ಷ ಜೈ ಕುಮಾರ್, ಬೆಂ. ಜಿಲ್ಲಾ ಭೂ ನ್ಯಾಯ ಮಂಡಳಿ ಸದಸ್ಯರಾದ ಬಿ.ಕೆ. ನಾರಾಯಣಸ್ವಾಮಿ, ಯಲಹಂಕ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಾಗರಾಜ್, ಮಾರೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಎಂ ಮುನಿರಾಜಪ್ಪ, ಪಿ.ರಾಹುಲ್, ಎಪಿಎಂಸಿ ಮಾಜಿ ನಿರ್ದೇಶಕರಾದ ಹೊಸಹಳ್ಳಿ ಎಚ್ ಎಸ್ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರಾದ ಯಡಿಯೂರು ಶಾಂತಕುಮಾರ್, ಹೇಮಂತ್ ಕುಮಾರ್, ಗೋಪಾಲಪುರ ಸತೀಶ್, ಅವಿನಾಶ್, ಮಾರೆನಹಳ್ಳಿ ಆನಂದಕುಮಾರ್, ನಂಜಪ್ಪ ಸೇರಿದಂತೆ ಇನ್ನಿತರರಿದ್ದರು.
