








ಬೆಂಗಳೂರು: ಯಲಹಂಕದ ಸಂಪಿಗೆಹಳ್ಳಿ ವಾರ್ಡ್ ವ್ಯಾಪ್ತಿಯ ಅಗ್ರಹಾರ ಬಡಾವಣೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ದಿನಾಂಕ 18.05.2026 ರಂದು ಕಲಾವತಿ ಮುನಿಸ್ವಾಮಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು.
ಪ್ರಸಿದ್ಧ ಸಮಾಜ ಸೇವಕರು ಹಾಗೂ ಬಿಜೆಪಿ ಮುಖಂಡರಾದ ನರಸಿಂಹಮೂರ್ತಿ ಅಗ್ರಹಾರ ಅವರ ನೇತೃತ್ವದಲ್ಲಿ ಈ ಸಂಪೂರ್ಣ ಕಾರ್ಯಕ್ರಮ ಜರುಗಿತು.
ಗಣ್ಯರು ಹಾಗೂ ಬಡಾವಣೆಯ ನಿವಾಸಿಗಳ ಸಮ್ಮುಖದಲ್ಲಿ ಕಲಾವತಿ ಮುನಿಸ್ವಾಮಿ ಅವರು ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಬಂದಿದ್ದ ಎಲ್ಲಾ ಹಿತೈಷಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ತಿಂಡಿಗಳನ್ನು ನೀಡಿ ಸಂತೋಷವನ್ನು ಹಂಚಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ. ಆಗಮಿಸಿದ್ದ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಶೇಷ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.
ಈ ಶುಭ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಆತ್ಮೀಯರು ಹಾಗೂ ಬಡಾವಣೆಯ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು, ಕಲಾವತಿ ಮುನಿಸ್ವಾಮಿ ಅವರಿಗೆ ಸುಖ, ಶಾಂತಿ, ಆರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
