ಧರ್ಮದರ್ಶಿ ಶ್ರೀ ಬಿ. ನಾಗರಾಜಪ್ಪನವರ 90ನೇ ಹುಟ್ಟುಹಬ್ಬದ ಸಂಭ್ರಮಾಚರಣೆ
ಬೆಂಗಳೂರು ಯಲಹಂಕ ಪಳ್ಳಿಪಾಳ್ಯ ದಿನಾಂಕ 29 ಜುಲೈ 2026 ರಂದು
ಧರ್ಮದರ್ಶಿಗಳಾದ ಶ್ರೀ ಬಿ. ನಾಗರಾಜಪ್ಪ ರವರ 90 ನೇ ವರ್ಷದ ಜನ್ಮದಿನೋತ್ಸವವನ್ನು ವಿಶೇಷವಾಗಿ ಗುರುಪೂರ್ಣಮಿ ಹಬ್ಬದ ದಿನದಂದು (ಬುಧವಾರ) ಸಂಜೆ 5:00 ಗಂಟೆಗೆ ಬಂಧು-ಮಿತ್ರರು, ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸುಸಂದರ್ಭದಲ್ಲಿ ಶ್ರೀ ಬಿ. ನಾಗರಾಜಪ್ಪನವರಿಗೆ ಬೃಹತ್ ಪುಷ್ಪಹಾರ ಹಾಕಿ, ಹೂಮಳೆ ಗೈಯುವ ಮೂಲಕ ಭವ್ಯವಾಗಿ ಸನ್ಮಾನಿಸಿ, ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮೀನಾಕ್ಷಿ ಕೃಷ್ಣ ಬೈರೇಗೌಡರು. ಹೂ ಗೋಚ ನೀಡಿ ಶುಭ ಕೋರಿದರು ಈ ಸಂದರ್ಭದಲ್ಲಿ ಎಚ್ ಎ. ಶಿವಕುಮಾರ್ ಸಂಪಿಗೆಹಳ್ಳಿ ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿ ಅವರ ಸುದೀರ್ಘ ಹಾಗೂ ಆರೋಗ್ಯಕರ ಆಯುಷ್ಯಕ್ಕಾಗಿ ಎಲ್ಲರೂ ಹಾರೈಸಿದರು.

Leave a Reply

Your email address will not be published. Required fields are marked *