











ಜಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಯಕುಮಾರ್ ಹುಟ್ಟುಹಬ್ಬ :
ಮುಖಂಡರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜಯಕುಮಾರ್ ಎಚ್.ಜಿ. ಅವರ ಹುಟ್ಟು ಹಬ್ಬದ ಪ್ರಯುಕ್ತ ಹುತ್ತನಹಳ್ಳಿಯ ಅವರ ಸ್ವಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖಂಡರು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ಹಲವು ಗಣ್ಯರು ಕೇಕ್ ಕತ್ತರಿಸಿ, ಜಯಕುಮಾರ್ ಅವರಿಗೆ ಸನ್ಮಾನಿಸಿ ಜನ್ಮದಿಂದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ. ಮಹೇಶ್ ಕುಮಾರ್, ಕೆಬಿಜಿ ಆಪ್ತ ಕಾರ್ಯದರ್ಶಿ ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ಕೆ. ನಾರಾಯಣಸ್ವಾಮಿ (ಎಲ್ಐಸಿ), ಕನ್ನಮಂಗಲ ಮಂಜುನಾಥ್, ಮಧುಗೌಡ, ದೊಡ್ಡಜಾಲ ಬೈರೇಗೌಡ, ಮೀಸಗಾನಹಳ್ಳಿ ನಾರಾಯಣಗೌಡ, ಸಾತನೂರು ಬೈರೇಗೌಡ, ವಿಶ್ವ, ಪ್ರದೀಪ್(ಮುತ್ತು), ರಾಜೇಶ್, ಪ್ರಕಾಶ್, ಶಿವರಾಜ್ ಸಿ.ಎ., ಮುರಳಿ, ರಾಮೇಗೌಡ, ಬಾಗಲೂರು ಮಧುಸೂದನ್, ಅನಿಲ್, ನವೀನ್, ಬಾಬಾಜಾನ್, ಬಿ.ಎಂ. ಪುಟ್ಟರಾಜ್, ಹುತ್ತನಹಳ್ಳಿ ಮುನೇಗೌಡ, ಹರೀಶ್, ಮುಕುಂದ್, ವಿನಯ್, ಬಾಬು, ಬಸವರಾಜು ಸೇರಿದಂತೆ ಇನ್ನಿತರರಿದ್ದರು.
