ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ‌.ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳ ಮುಖ್ಯೋಪಾದ್ಯಾಯರು ಗ್ರಾ.ಪಂ.ನೂತನ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಉಪಾಧ್ಯಕ್ಷೆ ನಂಜಮ್ಮ ರವರನ್ನು ಭೇಟಿ ಮಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ, ತಮ್ಮ ಶಾಲೆಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ಸ್ಪಂದಿಸಲು ಮನವಿ ಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ನೂತನ ಗ್ರಾ.ಪಂ.ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ ‘ಸರ್ಕಾರಿ ಶಾಲೆಗಳ ಬಗ್ಗೆ ನಮಗೆ ವಿಶೇಷ ಕಾಳಜಿಯಿದೆ. ಬಾಲ್ಯದಲ್ಲಿ ನಾನೂ ಕೂಡ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿ ಬದುಕಿನಲ್ಲಿ ಸಾಗಿ ಬಂದಿದ್ದೇನೆ. ಸರ್ಕಾರಿ ಶಾಲೆಗಳ ಅಗತ್ಯತೆಗಳೇನು, ಯಾವೆಲ್ಲಾ ಸೌಲಭ್ಯಗಳಿಂದ ಸರ್ಕಾರಿ ಶಾಲೆಗಳು ವಂಚಿತವಾಗಿರುತ್ತವೆ, ಅವುಗಳನ್ನು ಹೇಗೆಲ್ಲಾ ನೀಡಿ ಸಹಕರಿಸಬಹುದು ಎಂಬ ಬಗ್ಗೆ ಒಂದಷ್ಟು ಮಾಹಿತಿ, ಇದೆ ಮುಖ್ಯೋಪಾಧ್ಯಾಯರು ತಮ್ಮ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯ, ಸಹಕಾರದ ಬಗ್ಗೆ ಮಕ್ತವಾಗಿ ತಿಳಿಸಿದರೆ, ಅವುಗಳನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ‌ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಪಿ.ಸುಮಾ, ಕಾರ್ಯದರ್ಶಿ ಈರೇಗೌಡ ಸೇರಿದಂತೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಗ್ರಾ.ಪಂ.ಸಿಬ್ಬಂದಿಗಳಿದ್ದರು.

ಮಾರೇನಹಳ್ಳಿ ಗ್ರಾ.ಪಂ. ಅಧ್ಯಕ್ಷರನ್ನು ಭೇಟಿ ಮಾಡಿದ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು :
ಅಗತ್ಯ ಸಹಕಾರಕ್ಕೆ ಮನವಿ :

ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ‌.ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳ ಮುಖ್ಯೋಪಾದ್ಯಾಯರು ಗ್ರಾ.ಪಂ.ನೂತನ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಉಪಾಧ್ಯಕ್ಷೆ ನಂಜಮ್ಮ ರವರನ್ನು ಭೇಟಿ ಮಾಡಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ, ತಮ್ಮ ಶಾಲೆಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ಸ್ಪಂದಿಸಲು ಮನವಿ ಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ನೂತನ ಗ್ರಾ.ಪಂ.ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ ‘ಸರ್ಕಾರಿ ಶಾಲೆಗಳ ಬಗ್ಗೆ ನಮಗೆ ವಿಶೇಷ ಕಾಳಜಿಯಿದೆ. ಬಾಲ್ಯದಲ್ಲಿ ನಾನೂ ಕೂಡ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿ ಬದುಕಿನಲ್ಲಿ ಸಾಗಿ ಬಂದಿದ್ದೇನೆ. ಸರ್ಕಾರಿ ಶಾಲೆಗಳ ಅಗತ್ಯತೆಗಳೇನು, ಯಾವೆಲ್ಲಾ ಸೌಲಭ್ಯಗಳಿಂದ ಸರ್ಕಾರಿ ಶಾಲೆಗಳು ವಂಚಿತವಾಗಿರುತ್ತವೆ, ಅವುಗಳನ್ನು ಹೇಗೆಲ್ಲಾ ನೀಡಿ ಸಹಕರಿಸಬಹುದು ಎಂಬ ಬಗ್ಗೆ ಒಂದಷ್ಟು ಮಾಹಿತಿ, ಇದೆ ಮುಖ್ಯೋಪಾಧ್ಯಾಯರು ತಮ್ಮ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯ, ಸಹಕಾರದ ಬಗ್ಗೆ ಮಕ್ತವಾಗಿ ತಿಳಿಸಿದರೆ, ಅವುಗಳನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ‌ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಪಿ.ಸುಮಾ, ಕಾರ್ಯದರ್ಶಿ ಈರೇಗೌಡ ಸೇರಿದಂತೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಗ್ರಾ.ಪಂ.ಸಿಬ್ಬಂದಿಗಳಿದ್ದರು.

Leave a Reply

Your email address will not be published. Required fields are marked *