ರಾಷ್ಟ್ರೀಯ ಯುವ ಕೌಶಲ್ಯ ದಿನಾಚರಣೆ ,


ಯಲಹಂಕ ಸುದ್ದಿ.  ದಿನಾಂಕ 15.07.2026ರಂದು ಯುವ ಕೌಶಲ್ಯ ದಿನಾಚರಣೆಯನ್ನು ಬೆಂಗಳೂರು ಉತ್ತರ ತಾಲೂಕಿನ ತಿಂಡ್ಲು ಧರಣಿ ಪಾರ್ಟಿಹಾಲ್ ನಲ್ಲಿ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆ ಬೆಂಗಳೂರು,ತಿಂಡ್ಲು
ಫೌಂಡೇಶನ್, ಅಧಿಷ್ಠಾನಂ ಟ್ರಸ್ಟ್, ವಿ ಕಮಿನಿಟಿ ಇನ್ನೂ ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅದಿಷ್ಟಾನಂ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀ ಲೋಕನಾಥ್ ರವರು ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಕಾರ್ಯ ವೈಖರಿ ಗಳು ಮತ್ತು
ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಇನ್ನೂ ಅನೇಕ ನವೀನ ತರಬೇತಿಗಳನ್ನು ಆಯೋಜಿಸುವಂತೆ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗುವಂತ ಬ್ಯಾಂಕ್ ಇತರೆ ಸಂಸ್ಥೆಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುವಂತೆ ಮನವಿ ಮಾಡಿದರು. ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಡಿಎಂ ಶಶಿಕಲಾ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರಾಷ್ಟ್ರೀಯ ಯುವ ಕೌಶಲ್ಯ ದಿನದ ಮಹತ್ವ ಹಾಗೂ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಕೃಷ್ಣಮೂರ್ತಿ ಎಲ್ ರವರು
ಕೌಶಲ್ಯವು ನಿರಂತರ ಪ್ರಕ್ರಿಯೆಯಾಗಿದ್ದು ಆಧುನಿಕತೆಗೆ ತಕ್ಕಂತೆ ನವೀನತೆಯನ್ನು ಅಳವಡಿಸಿಕೊಳ್ಳುವುದರಿಂದ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿದೀಪವಾಗುತ್ತದೆಂದು ಕರೆ ನೀಡಿದರು , ದೊಡ್ಡಮಟ್ಟದಲ್ಲಿ ಉದ್ಯಮಗಳನ್ನು ತೆರೆಯಲು ಹಲವಾರು ಬ್ಯಾಂಕುಗಳಲ್ಲಿ ಸಾಲ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಈ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಾಗೂ ಅರಿವು ಕಾರ್ಯಕ್ರಮಗಳನ್ನು ತರಬೇತಿ ಸಂಸ್ಥೆಗಳಲ್ಲಿ ಆಯೋಜಿಸಲು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಂ ಬಿ ದ್ಯಾಬೇರಿ (ನಿವೃತ್ತ ಐಎಎಸ್ ಅಧಿಕಾರಿ) ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನಿಫ್ತ್ ಬೆಂಗಳೂರು ಇಲ್ಲಿಗೆ ಒಂದು ದಿನದ ಪ್ರಾಯೋಗಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲಾ ಕಲಿಕಾರ್ಥಿಗಳು ಹಾಗೂ ವೃತ್ತಿ ಬೋಧಕರು ಪಾಲ್ಗೊಂಡು ನವೀನ ಶೈಲಿಯ ಕೌಶಲ್ಯಗಳನ್ನು ವಿವರವಾಗಿ ತಿಳಿದುಕೊಂಡರು ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಇಂತಹ ಕೌಶಲ್ಯ ಸಂಸ್ಥೆಗಳಿಗೆ ವೃತ್ತಿ ಬೋಧಕರನ್ನು ಹಾಗೂ ಕಲಿಕಾರ್ಥಿಗಳನ್ನು ಕರೆದೊಯ್ಯಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಅಧಿಷ್ಠಾನ ಟ್ರಸ್ಟನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಕಲ್ಯಾಣಿ ರವರು ಜೆ ಎಸ್ ಎಸ್ ಜನ ಶಿಕ್ಷಣ ಸಂಸ್ಥೆಯಿಂದ ತರಬೇತಿ ಪಡೆದು ಕಲಿಕಾರ್ಥಿಗಳ ಯಶೋಗಾಥೆಯನ್ನು ವಿವರವಾಗಿ ತಿಳಿಸಿದರು ಹಲವಾರು ತರಬೇತಿಗಳ ಫಲಾನುಭವಿಗಳು ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು. ಹಾಗೂ ಅದಿಷ್ಟಾನಂ ಟ್ರಸ್ಟ್ ನ ಸಂಯೋಗ ಸಂಸ್ಥೆಗಳ ಬಗ್ಗೆ ಅವರ ಸಹಕಾರ ಹೀಗೆ ಮುಂದುವರೆಯಲಿ ಇನ್ನು ಹೆಚ್ಚು ಹೆಚ್ಚು ತರಬೇತಿಗಳು ಇಲ್ಲಿ ಆಯೋಜಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿ ಕಮ್ಯುನಿಟಿ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ರವರು ಸ್ತ್ರೀಯರು ಕೇವಲ ಅಡಿಗೆ ಮನೆಗೆ ಸೀಮಿತವಾಗದೆ ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು, ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಡಿಎಂ ಶಶಿಕಲಾ ರವರು ಮಾತನಾಡುತ್ತಾ ರಾಷ್ಟ್ರೀಯವಾ ಕೌಶಲ್ಯ ದಿನದ ಮಹತ್ವ ಹಾಗೂ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ತಿಂಡ್ಲು ಬಾಯ್ಸ್ ಫೌಂಡೇಶನ್ ಮುಖ್ಯಸ್ಥರಾದ ಶ್ರೀ ದಿಲೀಪ್ ರವರು ಮಹಿಳೆಯರ ಸ್ವಾವಲಂಬನೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ನೀಡುವುದಾಗಿ ಭರವಸೆ ನೀಡಿದರು, ಕಾರ್ಯಕ್ರಮದಲ್ಲಿ ಐದು ತರಬೇತಿಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು, ಕೌಶಲ್ಯ ದಿನದ ಪ್ರಯುಕ್ತ ತರಬೇತಿ ಕೇಂದ್ರದಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಕಲಿಕಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಲಿಕಾರ್ಥಿಗಳು, ವೃತ್ತಿ ಬೋಧಕರು ಅನೇಕ ನೃತ್ಯಗಳನ್ನು ಪ್ರದರ್ಶಿಸಿದರು ಕಾರ್ಯಕ್ರಮದಲ್ಲಿ ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆ ಸಿಬ್ಬಂದಿ ವರ್ಗ, ವೃತ್ತಿ ಬೋಧಕರು ಕಲಿಕಾರ್ಥಿಗಳು ಫಲಾ ನುಭವಿಗಳು ಹಾಗೂ ಸಹಯೋಗ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗ ಸೇರಿ ಒಟ್ಟು 150 ಜನ ಭಾಗವಹಿಸಿದ್ದರು.

Leave a Reply

Your email address will not be published. Required fields are marked *