



ಕೋಗಿಲಿನ ಆಕ್ಸ್ಫರ್ಡ್ಆಂಗ್ಲ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಬೆಂಗಳೂರು, ಆಗಸ್ಟ್ 15, 2026: ಆಕ್ಸ್‌ಫರ್ಡ್ ಇಂಗ್ಲಿಷ್ ಸ್ಕೂಲ್ ಮತ್ತು ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ದೇಶಭಕ್ತಿಯ ಭಾವನೆಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಫ್ಲೈಯಿಂಗ್ ಆಫೀಸರ್ ಎ. ಕೆ. ರಾಯ್ ಅವರು ಆಗಮಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಪ್ರೇರಣಾದಾಯಕ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ಪ್ರಕಾಶ್, ಕಾರ್ಯದರ್ಶಿ ಶ್ರೀಮತಿ ಸುಜಾತಾ, ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್, ಪಿಯು ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೋಭಾ ಹಾಗೂ ಶ್ರೀ ನೋಹನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪಾಂ-ಪಾಂ ವ್ಯಾಯಾಮ, ಧ್ವಜ ವ್ಯಾಯಾಮ, ಛತ್ರಿ ವ್ಯಾಯಾಮ, ಡಂಬೆಲ್ಸ್ ವ್ಯಾಯಾಮ, ಲೆಜಿಮ್ ಪ್ರದರ್ಶನ, ಪಿರಮಿಡ್ ಪ್ರದರ್ಶನ ಹಾಗೂ ಸಾಂಸ್ಕೃತಿಕ ನೃತ್ಯಗಳನ್ನು ಅತ್ಯಂತ ಉತ್ಸಾಹದಿಂದ ಪ್ರದರ್ಶಿಸಿದರು. ವಿದ್ಯಾರ್ಥಿಗಳ ಶಿಸ್ತು, ಏಕತೆ, ತಂಡದ ಮನೋಭಾವ ಮತ್ತು ದೇಶಪ್ರೇಮವು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.
ಕಾರ್ಯಕ್ರಮವನ್ನು. ಶ್ರೀಮತಿ ವಿಶಾಲಾಕ್ಷಿ ನಿರೂಪಿಸಿದರು. ಕುಮಾರಿ ಜೆಸ್ಸಿಕಾ ಡ್ಯಾನಿಯಲ್ ಪ್ರಾರ್ಥನೆ ನೆರವೇರಿಸಿದರು. ಮಂಗಳ ವಿಠ್ಠಲ್ ಅವರು ಸ್ವಾಗತ ಕೋರಿದರೆ, ಕುಮಾರಿ ಕೌಸಲ್ಯ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಸಂಕ್ಷಿಪ್ತ ವರದಿ ನೀಡಿದರು. ವಂದನಾರ್ಪಣೆಯನ್ನು ಶ್ರೀಮತಿ ಬೀನಾ ಅವರು ಮಾಡಿದರು.
