ಶ್ರೀ ರಾಯರ ಬೃಂದಾವನ ಫಾರ್ಮ್ ಲ್ಯಾಂಡ್ ಸಹಕಾರನಗರ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪೂಜಾ ಕಾರ್ಯಕ್ರಮ
ಬೆಂಗಳೂರು: ಯಲಹಂಕ ಶ್ರೀ ರಾಯರ ಬೃಂದಾವನ ಫಾರ್ಮ್ ಲ್ಯಾಂಡ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ಸಹಕಾರನಗರದಲ್ಲಿರುವ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಸಡಗರ ಮತ್ತು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಫಾರ್ಮ್ ಲ್ಯಾಂಡಿನ ಸಂಸ್ಥಾಪಕರಾದ ಶ್ರೀಯುತ ಮಂಜುನಾಥ್ ಹಾಗೂ ಅವರ ಕುಟುಂಬದವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪಾಲ್ಗೊಂಡು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಈ ಶುಭ ಸಮಾರಂಭದಲ್ಲಿ ಮಂಜುನಾಥ್ ರವರ ಕುಟುಂಬದವರೊಂದಿಗೆ, ರಾಘವೇಂದ್ರ ರವರು, ಅಶ್ವಥ್ ನಾರಾಯಣ್ ರವರು ಹಾಗೂ ಫಾರ್ಮ್ ಲ್ಯಾಂಡಿನ ಅನೇಕ ಆತ್ಮೀಯ ಬಂಧು-ಮಿತ್ರರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.
ದೀಪಾವಳಿಯ ದ್ಯೋತಕವಾಗಿ ಕಚೇರಿಯನ್ನು ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿದ್ದು, ನೆರೆದಿದ್ದ ಎಲ್ಲರೂ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕಾರ್ಯಕ್ರಮ ಬಂದವರಿಗೆಲ್ಲರಿಗೂ ಸಿಹಿ ತಿಂಡಿ ವಿತರಿಸಿದರು

Leave a Reply

Your email address will not be published. Required fields are marked *