ಬ್ಯಾಟರಾಯನಪುರ : ಗ್ರಾಮ ಮಟ್ಟದಿಂದ ಹಿಡಿದು ಬ್ಲಾಕ್ ಮಟ್ಟದವರೆಗೆ ಎಲ್ಲಾ ಹಂತಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರದ್ದೆಯಿಂದ ಶ್ರಮಿಸಬೇಕು ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ನಿರ್ದೇಶಕ ಎನ್. ಕೆ.ಮಹೇಶ್ ಕುಮಾರ್ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಪ್ರತಿ ಹಂತದಲ್ಲೂ ಪಕ್ಷದ ಸಂಘಟನೆಗೆ ಒತ್ತು ನೀಡಿ :
ಕಾಂಗ್ರೆಸ್ ಕಾರ್ಯಕರ್ತರಿಗೆ ಎನ್ ಕೆ ಮಹೇಶ್ ಕುಮಾರ್ ಸಲಹೆ
ಬ್ಯಾಟರಾಯನಪುರ : ಗ್ರಾಮ ಮಟ್ಟದಿಂದ ಹಿಡಿದು ಬ್ಲಾಕ್ ಮಟ್ಟದವರೆಗೆ ಎಲ್ಲಾ ಹಂತಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರದ್ದೆಯಿಂದ ಶ್ರಮಿಸಬೇಕು ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ನಿರ್ದೇಶಕ ಎನ್. ಕೆ.ಮಹೇಶ್ ಕುಮಾರ್ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಮತ್ತು ಜಿಬಿಎ ಸಚಿವ ಕೃಷ್ಣಬೈರೇಗೌಡ ಅವರ ಸೂಚನೆಯ ಮೇರೆಗೆ ಮುಂಬರುವ ಚುನಾವಣೆ ಮತ್ತು ಮುಂಚೂಣಿ ಘಟಕಗಳ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲು ಶನಿವಾರ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಜಾಲ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾದ ಸ್ಥಿತಿಯಲ್ಲಿದ್ದರೂ ಸಹ, ಇತ್ತೀಚಿಗೆ ಪಕ್ಷ ಸಂಘಟನೆ ಕುರಿತು ಯಾವುದೇ ಸಭೆ, ಸಮಾಲೋಚನೆಗಳನ್ನು ನಡೆಸಲಾಗಿರಲಿಲ್ಲ. ಇಂದಿನ ಸಭೆ ಪಕ್ಷದಲ್ಲಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿರುವ ಪದಾಧಿಕಾರಿಗಳು, ಹಿರಿಯ ಮುಖಂಡರು, ಕಾರ್ಯಕರ್ತರು ಪರಸ್ಪರ ಕಲೆತು ಚರ್ಚೆ ನಡೆಸಲು ಒಂದು ಉತ್ತಮ ವೇದಿಕೆ ಕಲ್ಪಿಸಿದಂತಾಗಿದೆ. ಸಚಿವ ಕೃಷ್ಣ ಭೈರೇಗೌಡ ಅವರು ಸಚಿವರಾಗಿ ತಮಗೆ ವಹಿಸಿರುವ ಖಾತೆಯನ್ನು ಅತ್ಯಂತ ಸಮರ್ಥ ರೀತಿಯಲ್ಲಿ ನಿರ್ವಹಿಸುವ ಮೂಲಕ ರಾಜ್ಯದ ಜನತೆಯ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಕ್ಷೇತ್ರ ಮಟ್ಟದಲ್ಲಿಯೂ ಸಹ ಅವರ ಜನಪ್ರಿಯತೆಗೆ ತಕ್ಕಂತೆ ಕಾಂಗ್ರೆಸ್ ಪಕ್ಷವನ್ನು ಗ್ರಾಮಮಟ್ಟದಿಂದ ಬ್ಲಾಕ್ ಮಟ್ಟದವರೆಗೆ ಅತ್ಯುತ್ತಮ ರೀತಿಯಲ್ಲಿ ಸಂಘಟಿಸುವುದು ಮತ್ತು ಪಕ್ಷದ ಬಲವರ್ಧನೆ ಯನ್ನು ಹೆಚ್ಚಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಅಗತ್ಯ ಕ್ರಮ ವಹಿಸಬೇಕಿದೆ. ಈ ದಿಸೆಯಲ್ಲಿ ನಾವು ತಡ ಮಾಡದೆ ಕಾರ್ಯಪ್ರವೃತ್ತರಾಗಬೇಕು. ಜಾಲ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸುಭದ್ರ ನೆಲೆ ತಂದು ಕೊಡುವುದನ್ನು ನಮ್ಮ ಧ್ಯೇಯವಾಗಿಸಿಕೊಂಡು ಇಂದಿನಿಂದಲೇ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ. ಅಶೋಕನ್ ಅವರು ಮಾತನಾಡಿ ‘ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಮುಂತಾದ ಇಲಾಖೆಗಳ ವಿಷಯದಲ್ಲಿ ನ್ಯಾಯಯುತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸಚಿವ ಕೃಷ್ಣ ಬೈರೇಗೌಡರೊಂದಿಗೆ ಚರ್ಚೆ ನಡೆಸಿ, ಸ್ಥಳೀಯ ಮಟ್ಟದಲ್ಲಿ ಸಮಿತಿ ರಚಿಸಿ, ಸಮಿತಿಯ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅಗತ್ಯ ರೀತಿಯಲ್ಲಿ ಸಹಕರಿಸಲು ಮತ್ತು ಸ್ಪಂದಿಸಲು ಅಗತ್ಯ ಕ್ರಮವಹಿಸುವುದು ತುರ್ತು ಅಗತ್ಯವಾಗಿದೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ಸ್ಪಂದನೆ ಸಿಗುವುದರ ಜೊತೆಗೆ, ಪಕ್ಷಕ್ಕಾಗಿ ಶ್ರಮಿಸಲು ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ದಾನೆಗೌಡ, ನಿರ್ದೇಶಕರಾದ ಜೈಕುಮಾರ್, ಅಮೀರ್ ಜಾನ್, ಕಾಂಗ್ರೆಸ್ ಮುಖಂಡ ಸಿಂಗಹಳ್ಳಿ ವೆಂಕಟೇಶ್, ಮಾರೇನಹಳ್ಳಿ ನಾಗರಾಜ್, ಸುಷ್ಮಾ ಮುನಿರಾಜು, ಬಿ.ಕೆ. ನಾರಾಯಣಸ್ವಾಮಿ, ಮೈಲನಹಳ್ಳಿ ರಾಜಕುಮಾರ್, ಉದಯ ಶಂಕರ್, ಜೆ.ಶ್ರೀನಿವಾಸ್, ಬಾಗಲೂರು ಜಗನ್ನಾಥ್, ಎ.ಕೆಂಪೇಗೌಡ, ಬೈ.ನ.ಮೂರ್ತಿ, ಅಮರ್ ನಾರಾಯಣ, ಬಿ.ಎಂ. ನಾಗೇಶ್, ಬಿ.ಆರ್.ಪ್ರವೀಣ್, ರವೀಂದ್ರನಾಥ್ ಗೌಡ, ನಾರಾಯಣಗೌಡ, ವೀರೇಶ್, ಹೆಚ್.ಎಸ್. ದಯಾನಂದ, ದೊಡ್ಡಜಾಲ ಬೈರೇಗೌಡ, ಗೋವಿಂದರಾಜು, ನಾರಾಯಣಸ್ವಾಮಿ(ವಕೀಲರು),ಮೀಸಗಾನಹಳ್ಳಿ ನಾರಾಯಣಸ್ವಾಮಿ, ತಿರುಮಳಪ್ಪ, ಅಪ್ಪಾಜಿ, ಮಧು ಗೌಡ, ಸಿ.ಎ ಶಿವು, ಮುರಳಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *