
































ಬೆಂಗಳೂರುಯಲಹಂಕ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಶೋಕ್ ಎನ್. ಅವರ ಹುಟ್ಟುಹಬ್ಬದ ಪ್ರಯುಕ್ತ ಚೊಕ್ಕನಹಳ್ಳಿಯ ವೆಂಕಟ್ ರಾಮ ರೆಡ್ಡಿ ಹಾಗೂ ಲಕ್ಷ್ಮೀನಾರಾಯಣ ದೇವರಾಜ್ ರವರು ಸೇರಿದಂತೆ ಇನ್ನು ಈ ಭಾಗದ ಮುಖಂಡರು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಶೋಕ್ ಎನ್. ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಹಾಗೂ ಬೃಹತ್ ಹೂವಿನ ಹಾರ ಹಾಕುವ ಮೂಲಕ ಗೌರವ ಸಮರ್ಪಿಸಲಾಯಿತು. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಅವರ ಸಮರ್ಪಣೆ ಮತ್ತು ಜನಹಿತ ಸೇವೆಯನ್ನು ಮುಖಂಡರು ಹಾಗೂ ಕಾರ್ಯಕರ್ತರು ಈ ವೇಳೆ ಸ್ಮರಿಸಿದರು. ಎಲ್ಲರಿಗೂ ಸಿಹಿ ತಿಂಡಿ ನೀಡಲಾಯಿತು
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ್ ಎನ್. ಅವರು, ಶುಭ ಹಾರೈಸಿದ ವೆಂಕಟ್ ರಾಮ ರೆಡ್ಡಿ ಚೊಕ್ಕನಹಳ್ಳಿ ಹಾಗೂ ಲಕ್ಷ್ಮೀನಾರಾಯಣ್ ದೇವರಾಜ್ ರವರಿಗೆ ಮತ್ತು ಆತ್ಮೀಯ ಎಲ್ಲಾ ಮುಖಂಡರು ಸ್ನೇಹಿತರು ಮತ್ತು ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
