ಯಲಹಂಕ ಉಪನಗರದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಕ್ಯಾನ್ಸರ್ ತಡೆಗಟ್ಟಲು ಪ್ಲಾಸ್ಟಿಕ್ ಬಳಸದಿರಲು ತಜ್ಞರ ಸಲಹೆ

ಯಲಹಂಕ ಉಪನಗರದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ, ಆಯುಷ್ ಇಲಾಖೆ,LCB ಯಲಹಂಕ ಫ್ರೈಡ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಯಲಹಂಕ ಘಟಕ,IMA, ಯಲಹಂಕ ಶಾಖೆ ಹಾಗೂ ವಾಯು ವಿಹಾರಿಗಳ ಸಂಘ ಇವರ ಸಹಯೋಗದಲ್ಲಿ ಅರ್ಥಪೂರ್ಣ ರಾಜ್ಯೋತ್ಸವ ಹಾಗೂ ಕ್ಯಾನ್ಸರ್ ತಜ್ಞರಾದ ಡಾ.ಆದಿತ್ಯರಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಆಯುಷ್ಯ ಇಲಾಖೆಯ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಂ.ಎನ್ ಸಂಜಯ್, ಲಯನ್ಸ್ ಕ್ಲಬ್ ರಾಜ್ಯ ಘಟಕದ ಲಯನ್ ಎ.ಎನ್ ರೈ, ಯಲಹಂಕ ಫ್ರೈಡ್ ನ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ, IPP ಹಾಗೂ ಜಿಲ್ಲಾ ಸಂಚಾಲಕರಾದ ಡಾ. ಕೃಷ್ಣ ನಾಯಕ್ Mfj, ರೆಡ್ ಕ್ರಾಸ್ ಸಂಸ್ಥೆಯ ಚೇರ್ಮೆನ್ ವಾಸುದೇವಪ್ಪ , IMA ಯಲಹಂಕ ಶಾಖೆಯ ಪದಾಧಿಕಾರಿಗಳು, ವಾಯು ವಿಹಾರಿಗಳ ಸಂಘದ ಸಂಗಪ್ಪ ಮುಂತಾದವರು ಆಗಮಿಸಿದ್ದರು. ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಂ ಎನ್ ಸಂಜಯ್ ಧ್ವಜಾರೋಹಣ ಮಾಡಿದರು. ಎಲ್ಲರೂ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ ನಮಿಸಿದರು.

ಗಣ್ಯರೆಲ್ಲರೂ ವೇದಿಕೆ ಅಲಂಕರಿಸಿ ಸಾಮೂಹಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು ಲಯನ್ಸ್ ಕ್ಲಬ್ ನ ಯಲಹಂಕ ಪ್ರೈಡ್ ಅಧ್ಯಕ್ಷರಾದ ಲಯನ್ ಪರೀಕ ಭಾಸ್ಕರ್ ಶೆಟ್ಟಿ ಅವರು ವೇದಿಕೆ ಗಣ್ಯರಿಗೆ ವಂದಿಸಿ, ರಾಜ್ಯೋತ್ಸವ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವೇದಿಕೆ ಗಣ್ಯರು ಅವರವರ ಶೈಲಿಯಲ್ಲಿ ಮಾತನಾಡಿದರು. ತರುವಾಯ ವೇದಿಕೆಗೆ ಆಗಮಿಸಿದ ಹೆಬ್ಬಾಳದಲ್ಲಿರುವ HCG ಕ್ಯಾನ್ಸರ್ ಆಸ್ಪತ್ರೆಯ ತಜ್ಞರಾದ ಡಾ. ಆದಿತ್ಯ ಅವರು ಕ್ಯಾನ್ಸರ್ ಬಗ್ಗೆ ಉಪನ್ಯಾಸ ನೀಡಿದರು ಇಂದು ಕ್ಯಾನ್ಸರ್ ಯಾರಿಗೆ ಬರುತ್ತದೆ ಎಂದು ಹೇಳಲು ಸಾಧ್ಯ ಕಾರಣ ನಮ್ಮ ಜೀವನ ಶೈಲಿ ಎಂದು ಎಲ್ಲರೂ ಸಂಕಲ್ಪ ಮಾಡಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಕ್ಯಾನ್ಸರ್ ನಿಂದ ಪಾರಾಗಬಹುದು ಎಂದು ಹೇಳಿ ಮಾತೆಯರ ಸ್ತನ, ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರು. ಆಗಿಂದಾಗೆ ಪರೀಕ್ಷೆಗೆ ಒಳಪಡುವುದು ಸೂಕ್ತವೆಂದರು. ಹಿರಿಯ ನಾಗರಿಕರಿಗೆ HCG ಕ್ಯಾನ್ಸರ್ ಆಸ್ಪತ್ರೆ ವತಿಯಿಂದವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಯಲಹಂಕ ಉಪನಗರದ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಂ ಎನ್ ಸಂಜಯ್, ಫಾರ್ಮಸಿ ಅಧಿಕಾರಿ ಶ್ರೀಮತಿ ಸುಮತಿ, ಸಿಬ್ಬಂದಿ ವರ್ಗ, ಲಯನ್ಸ್ ಕ್ಲಬ್ ನ ಹಿರಿಯ ಪದಾಧಿಕಾರಿ ಲಯನ್ ಎ.ಎಮ್ ರೈ, ಯಲಹಂಕ ಫ್ರೈಡ್ ಅಧ್ಯಕ್ಷರಾದ ಲಯನ್ ಪರೀಕಾ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ಲಯನ್ ಆರ್.ಕೆ.ಚಂದ್ರಕುಮಾರ್, ಖಜಾಂಚಿ ಅಲಂಗಾರಬಾಬು, IPP ಹಾಗೂ ಜಿಲ್ಲಾ ಸಂಚಾಲಕರು ಡಾ. ಕೃಷ್ಣ ನಾಯಕ್ Mfj,ರೆಡ್ ಕ್ರಾಸ್ ಸಂಸ್ಥೆಯ ಚೇರ್ಮೆನ್ ವಾಸುದೇವಪ್ಪ, IMA ಯಲಹಂಕ ಶಾಖೆಯ ಪದಾಧಿಕಾರಿಗಳು, ವಾಯು ವಿಹಾರಿಗಳ ಸಂಘದ ಸಂಗಪ್ಪ, ಸ್ಥಳೀಯರು ಸ್ನೇಹಿತರು ಕನ್ನಡಾ ಭಿಮಾನಿಗಳು ಮುಂತಾದವರು
ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *