ಶ್ರೀಗಂಧ ಕರುನಾಡ ಕನ್ನಡ ವೈಭವ ವತಿಯಿಂದ
ಕನ್ನಡ ರಾಜ್ಯೋತ್ಸವ
ಯಲಹಂಕ ಸುದ್ದಿ .ಅಗ್ರಹಾರ ಬಡಾವಣೆ
ದಿನಾಂಕ. 22. 11.2026 ರಂದು ಶ್ರೀಗಂಧ ಕರುನಾಡ ಕನ್ನಡ ವೈಭವ ವತಿಯಿಂದ. ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಸ್ಥಳೀಯ ಹಾಗೂ ಸುತ್ತಮುತ್ತಲಿನ ಮುಖಂಡರು ಗ್ರಾಮಸ್ಥರು. ಭಾಗವಹಿಸಿದರು ಸಂಘದ ವತಿಯಿಂದ. ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರಿಗೆ. ಕನ್ನಡ ಶಾಲು ಹೊದಿಸಿ, ಹಾರ ಹಾಕಿ ಸ್ಮರಣಿಕೆ ನೀಡುವ ಮೂಲಕ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, “ಕನ್ನಡ ನಾಡು-ನುಡಿ, ನೆಲ-ಜಲದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಅನೇಕ ಕನ್ನಡ ಅಭಿಮಾನಿಗಳು ಪಾಲ್ಗೊಂಡಿದ್ದರು. ಕನ್ನಡ ರಾಜ್ಯೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.

Leave a Reply

Your email address will not be published. Required fields are marked *