









ಶ್ರೀ ಮುನೇಶ್ವರ ಸ್ವಾಮಿ, ಶ್ರೀ ಅಕ್ಕಯ್ಯಮ್ಮ ದೇವಿ ದೇವಾಲಯದ ಪುನರ್ ಪ್ರತಿಷ್ಠಾಪನೆ :
ಬ್ಯಾಟರಾಯನಪುರ : ಶ್ರೀ ಮೌನೇಶ್ವರ ಸ್ವಾಮಿ ಮತ್ತು ಶ್ರೀ ಅಕ್ಕಯ್ಯಮ್ಮ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಅಕ್ಕಯ್ಯಮ್ಮ ದೇವಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಅಸಂಖ್ಯಾತ ಭಕ್ತರು, ಮುಖಂಡರು, ದಾನಿಗಳು ಹಾಗೂ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ವಿಜೃಂಬಣೆಯಿಂದ ನೆರವೇರಿತು.
ದೇವಾಲಯದ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ಹೋಮ, ಹವನ, ಶ್ರೀ ಮುನೇಶ್ವರ ಸ್ವಾಮಿ ಮತ್ತು ಅಕ್ಕಯಮ್ಮ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಭಕ್ತಿ ಗೀತೆಗಳು ಮತ್ತು ದೇವರನಾಮಗಳ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಅಕ್ಕಯ್ಯಮ್ಮ ದೇವಾಲಯ ಟ್ರಸ್ಟ್ ನ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಜಕ್ಕೂರು ರವಿಕುಮಾರ್ ಅವರು ಮಾತನಾಡಿ ‘ ಸದರಿ ಜಾಗದಲ್ಲಿ ಕಳೆದ ಹಲವು ದಶಕಗಳಿಂದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಅಕ್ಕಯಮ್ಮ ದೇವಿಯ ಹಳೆಯ ದೇವಾಲಯವಿತ್ತು, ಹಳೆಯ ದೇವಾಲಯ ಸ್ವಲ್ಪಮಟ್ಟಿಗೆ ಶಿತ್ತಿಲಾವಸ್ತೆಯಲ್ಲಿ ಇದ್ದುದರಿಂದ ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಅಕ್ಕಯ್ಯಮ್ಮ ದೇವಾಲಯ ಟ್ರಸ್ಟ್, ದಾನಿಗಳು ಮತ್ತು ಗ್ರಾಮಸ್ಥರ ನೆರವು ಮತ್ತು ಸಹಕಾರದೊಂದಿಗೆ ಸುಭದ್ರವಾಗಿ ನಿರ್ಮಿಸಿ, ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಮಹತ್ವದ ಈ ದೇವಾಲಯದ ನಿರ್ಮಾಣಕ್ಕಾಗಿ ತನು ಮನ ಧನಪೂರ್ವಕವಾಗಿ ಸಹಕರಿಸಿರುವ ಎಲ್ಲರಿಗೂ ಅನಂತ ಧನ್ಯವಾದಗಳು ಎಂದರು.
ಶ್ರೀ ಮುನೇಶ್ವರ ಸ್ವಾಮಿ ಮತ್ತು ಶ್ರೀ ಅಕ್ಕಯ್ಯಮ್ಮ ದೇವಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅಳ್ಳಾಳಸಂದ್ರ ಶ್ರೀ ಶನೇಶ್ಚರ ಸ್ವಾಮಿ ಸನ್ನಿಧಾನದ ಮುಖ್ಯಸ್ಥರು, ವೈಜ್ಞಾನಿಕ ವಾಸ್ತು ತಜ್ಞರಾದ ಡಾ. ಆನಂದಕುಮಾರ್ ಗುರೂಜಿ, ಶ್ರೀ ಮುನೇಶ್ವರ ಸ್ವಾಮಿ ಮತ್ತು ಅಕ್ಕಯಮ್ಮ ದೇವಾಲಯ ಟ್ರಸ್ಟ್ ನ ಉಪಾಧ್ಯಕ್ಷ ಚಿಕ್ಕ ಕುಳ್ಳಪ್ಪ, ಕಾರ್ಯದರ್ಶಿ ಪ್ರಜ್ವಲ್ ಎಂ., ಖಜಾಂಚಿ ಅಶ್ವಿನ್ ಕುಮಾರ್, ಟ್ರಸ್ಟಿಗಳಾದ ಜಿ ಅಂಜಿನಪ್ಪ ಈ ಕೃಷ್ಣಪ್ಪ ಜೆ ಕೆ ಮುನಿರಾಜು ಮುನೇಶ್ ಕುಮಾರ್ ಆರ್ ಮದನ್ ಎಂ ಪ್ರಕಾಶ್ ಪದ್ಮನಾಭ ಸಿ ರಾಕೇಶ್ ಎ ಎಸ್ ಸೇರಿದಂತೆ ಹಲವು ಭಕ್ತರು, ಮುಖಂಡರು, ಜಕ್ಕೂರು ಗ್ರಾಮಸ್ಥರಿದ್ದರು.
