ಪಾವಗಡ :- ತಾಲ್ಲೂಕಿನಲ್ಲಿ ವಿವಿಧ ಇಲಾಖೆ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಮಾನ್ಯ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಮತ್ತು ಶಾಸಕ ಹೆಚ್.ವಿ ವೆಂಕಟೇಶ್ ಹಾಗೂ ಮಾಜಿ ಸಚಿವರಾದ
ವೆಂಕಟರಮಣಪ್ಪ ರವರಿಂದ
ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 6 ಜನ ಮಕ್ಕಳಿಗೆ ಹಾಗೂ ರಕ್ತ ಹಿನತೆಯಿಂದ ಬಳಲುತ್ತಿರುವ 4 ಜನ ಗರ್ಭೀಣಿ ಮತ್ತು ಬಾಣಾಂತಿಯರಿಗೆ ಕೆ.ಎಂ.ಎಫ್ ನಿಂದ ನೀಡಲಾದ ಕೊಡುಗೆಯ ಪೌಷ್ಟಿಕಭರಿತ ಆಹಾರದಿಂದ ಕೂಡಿದ ಕೀಟ್ ಗಳನ್ನು ಮತ್ತು ಇಲಾಖೆ ಯೋಜನೆಗಳಾದ ಸುಕನ್ಯ ಸಂವೃದ್ಧಿ ಬಾಂಡ್ ಮತ್ತು ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಬಾವಿಗಳಿಗೆ 2000 ರೂ. ಚೆಕನ್ನು ಹಾಗೂ ಉದ್ಯೋಗಿನಿ ಯೋಜನೆಯಡಿ 7 ಜನ ಫಲಾನುಬಾವಿಗಳಿಗೆ 5.60 ಲಕ್ಷ ರೂಗಳ ಚೆಕ್ ಗಳನ್ನು, ವಿಕಲಚೇತನರ ಶೇಕಡ 5ರಷ್ಟು ಅನುದಾನದಲ್ಲಿ ಪುನರ್ ವಸತಿ ಕಾರ್ಯಕ್ರಮದಡಿ 4 ಜನ ವಿಕಲಚೇತನರಿಗೆ ಲಾಪ್ ಟಾಪ್ ಗಳನ್ನು ವಿತರಿಸಲಾಯಿತು.
ಇದೇ ವೇಳೆ ಇಲಾಖೆಯಿಂದ ಅಯೋಜಿಸಲಾಗಿದ್ದ ಪೋಷಣ್ ಮಸಾಚಾರಣೆ ಪ್ರಯುಕ್ತ ಪೌಷ್ಟಿಕ ಸ್ಟಾಲ್ ಅನ್ನು ಮಾನ್ಯ ಗೃಹಸಚಿವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಕಿಟ್ ನ ಪ್ರಯೋಜನ ಕುರಿತು ಶ್ರೀ ಎಂ.ಎಸ್ ಶ್ರೀಧರ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಇಲಾಖೆ ತುಮಕೂರು ಇವರು ಗೃಹಸಚಿವರಿಗೆ ವಿವರಿಸಿದರು, ಸ್ಟಾಲ್ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಕಾರ್ಯನಿರ್ವಾಹಣಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಶ್ರೀ ರಖೀಬ್ ವುಲ್ಲಾ ಸಿ.ಡಿ.ಪಿ.ಓ ಹಾಗೂ ಮೇಲ್ವಿಚಾರಕಿಯರಾದ ಮಮತ,ಭಾಗ್ಯಲಕ್ಷ್ಮಿ,ಸುಧಾ,ವಿಜಯಲಕ್ಷ್ಮಿ, ಜಯಲಕ್ಷ್ಮೀ ಮತ್ತು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *