ದೊಡ್ಡ ಅರಳಗೆರೆ ಕೆ ನಾಗೇಶ್ ರವರ ಹುಟ್ಟುಹಬ್ಬ ಆಚರಣೆ ಹೊಸಕೋಟೆ : ಸಮಾಜಸೇವಕರಾದ ದೊಡ್ಡ ಅರಳಗೆರೆ ಕೆ ನಾಗೇಶ್ ರವರ ಹುಟ್ಟುಹಬ್ಬವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಬುದುವಾರ ಅವರ ಸ್ನೇಹಿತರು ಅಭಿಮಾನಿಗಳು ಆಚರಿಸಿದರು. ಈ ಸಂದರ್ಭದಲ್ಲಿ ಸ್ನೇಹಿತರು, ಬಂಧುಗಳು, ಮುಖಂಡರುಗಳು, ಅಭಿಮಾನಿಗಳು, ಪೇಟ ತೊಡಿಸಿ ಹೂವಿನ ಹಾರ ಹಾಕುವ ಮೂಲಕ ಕೇಕ್ ಕಟ್ ಮಾಡಿಸಿ ದೇವರ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದು ಹುಟ್ಟು ಹಬ್ಬದ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದರು.
