ಯಲಹಂಕ ಸುದ್ದಿ. ಪಬ್ಲಿಕ್ ಪವರ್

ದಿನಾಂಕ 9-05.2024 ರಂದು ಯಲಂಕ ಕೋಗಿಲು ರಸ್ತೆ ಶ್ರೀನಿವಾಸಪುರದಲ್ಲಿರುವ ಆಕ್ಸಫರ್ಡ್ ಶಾಲಾ ಕಾಲೇಜು ವಿಶ್ವ ತಾಯಂದಿರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಅಂದು ಶಾಲಾ ವಿದ್ಯಾರ್ಥಿಗಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶಾಲಾ ವತಿಯಿಂದ ತಾಯಂದಿರಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ತಾಯಂದಿರಿಗೆ ಸೂಜಿ ಪೋಣಿಸುವ ,ಲೋಟ ಜೋಡಿಸುವ ,ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು .ಗೆದ್ದ ಪ್ರತಿಸ್ಪರ್ಧಿಗಳಿಗೆ ಬಹುಮಾನ ವಿತರಣೆಯನ್ನು ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ರವರು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಕ್ಸಫಡ್೯ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಆಧುನಿಕ ಪ್ರಪಂಚದಲ್ಲಿ ತಾಯಂದಿರಿಗೆ ಸಿಗಬೇಕಾದ ಪ್ರೀತಿ ಗೌರವ ಕಾಳಜಿ ಕಡಿಮೆಯಾಗಿದ್ದು ವೃದ್ದಾಶ್ರಮಕ್ಕೆ ಸೇರಿಸುತ್ತಿರುವುದು ಸಾಮಾಜಿಕ ದುರಂತವಾಗಿದೆ .ಈ ಕಾರ್ಯಕ್ರಮದ ಮುಖ್ಯ ಉದ್ದೇಶ ನಮ್ಮ ಮಕ್ಕಳಲ್ಲಿ ತಾಯಿಯ ನಿಸ್ವಾರ್ಥ ಸೇವೆಗೆ ಗೌರವ ಕೊಡುವುದರೊಂದಿಗೆ ಸ್ವಚ್ಛ ಸಮಾಜ ನಿರ್ಮಾಣ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಕಾರ್ಯಕ್ರಮಕ್ಕೆ ಬಂದ ಎಲ್ಲಾ ತಾಯಂದಿರಿಗೆ ಶುಭ ಕೋರಿದರು .ಕಾರ್ಯಕ್ರಮವು ಸಿಹಿ ಹಂಚುವುದರೊಂದಿಗೆ ಮುಕ್ತಾಯವಾಯಿತು.

Leave a Reply

Your email address will not be published. Required fields are marked *