ಯಲಹಂಕ : ಗ್ರಾಮ ಪಂಚಾಯಿತಿ ಗಳು ಒಂದು ಕುಟುಂಬದ ಮಾದರಿ ಯಲ್ಲಿ ಒಗ್ಗಟ್ಟಾಗಿದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯ ದರ್ಶಿ ಸತೀಶ್ ಕಡತನಮಲೆ ಅಭಿಪ್ರಾಯಪಟ್ಟರು.

ಯಲಹಂಕ ಕ್ಷೇತ್ರದ ಅರಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ 2024-25ನೇ ಮೊದಲನೇ ಸುತ್ತಿನ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು ‘ಗ್ರಾಮಗಳು ಅಭಿವೃದ್ಧಿಯಾದರೆ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ ಎಂದು ಮಹಾತ್ಮ ಗಾಂಧಿಯವರು ದಶಕಗಳ ಹಿಂದೆಯೇ ಗ್ರಾಮಾ ಭಿವೃದ್ಧಿಯ ಮಹತ್ವ ಕುರಿತು ತಿಳಿಸಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆ ಅರಕೆರೆ ಗ್ರಾ.ಪಂ‌.ಯಲ್ಲಿ ಎಲ್ಲಾ ಮೂಲಗಳಿಂದ ಬರುತ್ತಿದ್ದ ವಾರ್ಷಿಕ ವರಮಾನ ಕೇವಲ 83.60 ಲಕ್ಷಗಳಷ್ಟಿತ್ತು,, ಆದರೆ ಇಂದು ಗ್ರಾ.ಪಂ‌. ವಾರ್ಷಿಕ ವರಮಾನದ ಮೊತ್ತ 6.18 ಕೋಟಿ.ರು.ಗಳಷ್ಟಿದೆ, ಇದು ಗ್ರಾಮ ಪಂಚಾಯಿತಿ ಸಾಧಿಸಿ ರುವ ಪ್ರಗತಿಯನ್ನು ತೋರಿಸುತ್ತದೆ. ಶಾಸಕ ಎಸ್ ಆರ್ ವಿಶ್ವನಾಥ್ ರವರ ಸಲಹೆ, ಸಹಕಾರ, ಮಾರ್ಗ ದರ್ಶನದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಸ್ವಚ್ಛ ಸಂಕೀರ್ಣ, ಕೆರೆಗಳ ಅಭಿವೃದ್ಧಿ ಯಂತಹ ಹಲವು ಮಹತ್ವದ ಪ್ರಗತಿ ಕಾರ್ಯಗಳು ಕೈಗೂಡಿವೆ. ಇದಕ್ಕೆ ಗ್ರಾ.ಪಂ‌.ಸದಸ್ಯ ರಲ್ಲಿರುವ ಸಮನ್ವಯತೆಯೂ ಸಹ ಕಾರಣವಾಗಿದೆ. ಈ ದಿಸೆಯಲ್ಲಿ ಗ್ರಾ.ಪಂ.ಸದಸ್ಯರಲ್ಲಿ ಒಂದೇ ಕುಟುಂಬದ ಸದಸ್ಯರಂತೆ ಅನ್ಯೂನ್ಯತೆ ಮತ್ತು ಸಮನ್ವಯತೆ ಇದ್ದರೆ ಇನ್ನೂ ಹೆಚ್ಚಿನ ಪ್ರಗತಿ ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಗವಿಕಲರು, ಹಿರಿಯ ನಾಗರೀಕರು, ಮಹಿಳೆಯರಿಗೆ ಸಹಾಧನದ ಚೆಕ್ ವಿತರಣೆ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಿಸಲಾಯಿತು.

ಗ್ರಾಮಸಭೆಯ ಅಧ್ಯಕ್ಷತೆಯನ್ನು ಅರಕೆರೆ ಗ್ರಾ.ಪಂ. ಅಂಜಿನಮ್ಮ ಚೌಡಪ್ಪ ವಹಿಸಿದ್ದು, ಗ್ರಾಮಸಭೆ ಯಲ್ಲಿ ಗ್ರಾ. ಪಂ.ಉಪಾಧ್ಯಕ್ಷೆ ನೇತ್ರಾವತಿ ಅಂಬರೀಶ್ ಬಾಬು, ಮಾಜಿ ಅಧ್ಯಕ್ಷರಾದ ಕೆ.ಆರ್. ತಿಮ್ಮೇಗೌಡ, ಬಿ.ಸಿ.ಶಶಿಕುಮಾರ್. ಎಸ್ ಎಲ್ ಎನ್ ಗೌಡ, ಮುನಿಲಕ್ಷ್ಮಮ್ಮ ಪರಶುರಾಮ್ ಸದಸ್ಯರಾದ ಮಂಜುಳಾ ಅರಸೇಗೌಡ. ಶಿಲ್ಪ ರಾಜಣ್ಣ. ಮಂಜುಳಾ ಸುರೇಶ್. ಮುನಿಲಕ್ಷ್ಮಮ್ಮ, ಪದ್ಮ ಮುನಿಕೃಷ್ಣಪ್ಪ, ರಾಮಯಲ್ಲಪ್ಪ, ಚನ್ನಪ್ಪ, ಭಾಗ್ಯಮ್ಮ ಈಶ್ವರಾಚಾರ್, ಇ.ಪವನ್ ಕುಮಾರ್. ಪ್ರಕಾಶ್, ಶಾಂತಮ್ಮ, ಭರತ್, ಗಾಯತ್ರಿ ಪ್ರಸನ್ನಕುಮಾರ್, ಕೆ ಎಂ ಅರಸೇಗೌಡ, ಚಿಕ್ಕಮುನಿಯಪ್ಪ ಮಜುನಾಥ್, ಪಿ.ಡಿ.ಓ ಬಿ.ಕೆ. ತಿಮ್ಮಯ್ಯ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.
ಪಂ.ಸಿಬ್ಬಂದಿಗಳು ಹಾಗೂ ಗ್ರಾಮಸ್ಥರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *