ಅರಕೆರೆ ಗ್ರಾ.ಪಂ.ಉಪಾಧ್ಯಕ್ಷರಾಗಿ ಕೆ.ಎಂ.ಅರಸೇಗೌಡ ಅವಿರೋಧ ಆಯ್ಕೆ :

ಯಲಹಂಕ : ಯಲಹಂಕ ಕ್ಷೇತ್ರದ ಅರಕೆರೆ ಗ್ರಾ.ಪಂ.ಉಪಾಧ್ಯಕ್ಷರಾಗಿ ಕಕ್ಕೇಹಳ್ಳಿ ಗ್ರಾಮದ ಕೆ.ಎಂ.ಅರಸೇಗೌಡ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರಕೆರೆ ಗ್ರಾ.ಪಂ.ಯಲ್ಲಿ ಒಟ್ಟು21 ಸದಸ್ಯರಿದ್ದು ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಸ್ಪರ್ಧಿಯಾಗಿ ಯಾರೂ ಸ್ಪರ್ದಿಸದ ಕಾರಣ, ಕೆ.ಎಂ.ಅರಸೇಗೌಡ ಉಪಾಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆಯಾದರು.

ನೂತನ ಉಪಾಧ್ಯಕ್ಷರನ್ನು ಗ್ರಾ.ಪಂ‌.ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾ.ಪಂ.ಸದಸ್ಯರು ಹಾಗೂ ಹಲವು ಮುಖಂಡರು ಗೌರವಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಅರಕೆರೆ ಗ್ರಾ.ಪಂ. ಅಧ್ಯಕ್ಷೆ ಅಂಜಿನಮ್ಮ ಚೌಡಪ್ಪ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ತಾ.ಪಂ. ಮಾಜಿ ಅಧ್ಯಕ್ಷ ಮುನಿದಾಸಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕೆ.ಆರ್. ತಿಮ್ಮೇಗೌಡ, ಬಿ.ಸಿ.ಶಶಿಕುಮಾರ್. ಲಕ್ಷ್ಮೀನಾರಾಯಣ ಗೌಡ, ಮುನಿಲಕ್ಷ್ಮಮ್ಮ ಪರಶುರಾಮ್, ಗ್ರಾ.ಪಂ. ಸದಸ್ಯರಾದ ನೇತ್ರಾವತಿ ಅಂಬರೀಶ್ ಬಾಬು, ಮಂಜುಳಾ ಅರಸೇಗೌಡ, ಶಿಲ್ಪ ರಾಜಣ್ಣ, ಭಾಗ್ಯಮ್ಮ ಈಶ್ವರಾಚಾರ್, ಇ.ಪವನ್ ಕುಮಾರ್, ಮಂಜುನಾಥ್, ಮಂಜುಳಾ ಸುರೇಶ್, ಮುನಿಲಕ್ಷ್ಮಮ್ಮ, ಪದ್ಮ ಮುನಿಕೃಷ್ಣಪ್ಪ, ರಾಮಯಲ್ಲಪ್ಪ, ಚನ್ನಪ್ಪ, ಪ್ರಕಾಶ್, ಶಾಂತಮ್ಮ, ಗಾಯತ್ರಿ, ಚಿಕ್ಕಮುನಿಯಪ್ಪ, ಮುಖಂಡರಾದ ಚೊಕ್ಕನಹಳ್ಳಿ ರಮೇಶ್, ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಂಜೇಗೌಡ, ಪಿ.ಡಿ.ಓ ಬಿ.ಕೆ.ತಿಮ್ಮಯ್ಯ, ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *