ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜನ್ಮದಿನಾಚರಣೆ ಪ್ರಯುಕ್ತ :
ಸತ್ಯಶೋಧನ ರಂಗಸಮುದಾಯ ದಿಂದ ನಾಟಕ ಪ್ರದರ್ಶನ :
ಬ್ಯಾಟರಾಯನಪುರ : ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 139ನೇ ಜನ್ಮದಿನಾಚರಣೆ ಹಾಗೂ ಬಾಬು ಜಗಜೀವನ್ ರಾಮ್ ರವರ 37ನೇ ಪುಣ್ಯ ಸ್ಮರಣೆ ಅಂಗವಾಗಿ ನಗರದ ಜಿಕೆವಿಕೆ ಆವರಣದ ಕುವೆಂಪು ಸಭಾ ಭವನದಲ್ಲಿ ಸತ್ಯಶೋಧನ ರಂಗಸಮುದಾಯ ಹೆಗ್ಗೋಡು ರವರಿಂದ ಪಿ.ಲಂಕೇಶ್ ವಿರಚಿತ ‘ರೊಟ್ಟಿ’, ‘ಅಧಿಕಾರಿಗಳು ಮತ್ತು ಕೆಲಸದವ’ ಕಥೆಗಳನ್ನು ಆಧರಿಸಿದ ರಂಗ ಪ್ರಯೋಗ ಕಾರ್ಯಕ್ರಮ ಏರ್ಪಡಿಸಿದ್ದರು.
ರಂಗ ಪ್ರಯೋಗ ದಲ್ಲಿ ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡಿನ ಪ್ರಾಂಶುಪಾಲರಾದ ಡಾ.ಎಂ.ಗಣೇಶ ಹೆಗ್ಗೋಡು, ನಾಗರಾಜ ಸಿರಸಿ, ರಾಹುಲ್, ವಿಭಾ ನಿಧಿ ಶಿವಂ ರವರು ನಾಟಕದ ಮುಖ್ಯ ಭೂಮಿಕೆಯಲ್ಲಿ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯ ಅಭಿವ್ಯಕ್ತಗೊಳಿಸಿದರು. ನಾಟಕ ಪ್ರದರ್ಶನದ ನಂತರ ನಡೆದ…
