Category: Blog

Your blog category

ಚಿಕ್ಕಬಳ್ಳಾಪುರ: ನಿಮ್ಮ ತಂದೆ ತಾಯಿ ಎಷ್ಟು ಕಷ್ಟ ಪಟ್ಟು ನಿಮ್ಮನ್ನು ಓದಿಸುತ್ತಿದ್ದಾರೆ ಅಂತ ಮೊದಲು ತಿಳಿದುಕೊಳ್ಳಿ, ಇಲ್ಲಿ ಮೊದಲನೇ ವರ್ಷದ ಇಂಜಿನಿಯರಿಂಗ್ ಕೋರ್ಸ್ ಗೆ ಸೇರಲು ಬಂದಿರುವ ನೀವು ಎಲ್ಲರೂ ದುಡ್ಡು ಇದ್ದುಕೊಂಡು ಇಂಜಿನಿಯರಿಂಗ್ ಕೋರ್ಸ್ ಓದಲು ಬಂದಿರುವುದಿಲ್ಲ, ಸುಮಾರು ವಿದ್ಯಾರ್ಥಿಗಳ ತಂದೆ-ತಾಯಂದಿರು ಅವರ ಸಂಬಂಧಿಕರಿಂದ, ಅಥವಾ ಬ್ಯಾಂಕ್,ಸ್ತ್ರೀ ಶಕ್ತಿ ಸಂಘಗಳಿಂದ ಹಣವನ್ನು ತಂದು ನಿಮ್ಮನ್ನು ಓದಿಸುತ್ತಿದ್ದಾರೆ.ಅದನ್ನು ಅರಿತುಕೊಂಡು ಈ 4 ವರ್ಷವನ್ನು ಶ್ರದ್ಧೆಯಿಂದ ಓದಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಮುಗಿಸಿ ಎಂದು ಶಾಸಕ ಪ್ರದೀಪ್ ಈಶ್ವರ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.ಅವರು ನಾಗಾರ್ಜುನ ಕಾಲೇಜಿನಲ್ಲಿ ಬಿಇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಾರಂಭ -2023 ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯಾವುದೇ ವಿದ್ಯಾರ್ಥಿಯೇ ಆಗಲಿ ತಾನು ಆವರೇಜ್ ವಿದ್ಯಾರ್ಥಿಗಳೆಂದು ನರ್ವಸ್ ಆಗಬೇಡಿ, 4 ವರ್ಷ ಶ್ರದ್ಧೆಯಿಂದ ಓದಿ ಕ್ಯಾಂಪಾಸ್ ಸೆಲೆಕ್ಷನ್ ಆಗಿ ಒಳ್ಳೆ ಕಂಪನಿಗಳಲ್ಲಿ ಕೆಲಸ ಮಾಡಿ. ಒಂದು ವೇಳೆ ಕ್ಯಾಂಪಾಸ್ ಸೆಲೆಕ್ಷನ್ ನಲ್ಲಿ ಕಂಪನಿಗಳಿಗೆ ಆಯ್ಕೆಯಾಗದಿದ್ದರೆ ನೀವೇ ಒಂದು ಸ್ವಂತ ಕಂಪನಿಯನ್ನು ಓಪನ್ ಮಾಡಿ,ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸದ ಕನಸು ಕಾಣಬೇಡಿ ಬದಲಾಗಿ ನೀವೇ ಕಂಪನಿಯ ಸಿಇಒ ಆಗಿ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ನಿಮ್ಮ ನಾಲ್ಕು ವರ್ಷದ ಓದಿಗಾಗಿ ಅಪ್ಪ ಅಮ್ಮ ಎಷ್ಟು ಖರ್ಚು ಮಾಡುತ್ತಾರೆ ಎಂದು ಯೋಚನೆ ಮಾಡಿ, ನಿಮಗೆಲ್ಲಾ ಬರೀ ವಿದ್ಯೆ ಇದ್ದರೆ ಸಾಕು,ದುಡ್ಡು ಬೇಡ ಎಂದು ಹೇಳುತ್ತಾರೆ,ಕರೆನ್ಸಿಗೆ ಅದರದೆ ಆದಂತಹ ಬೆಲೆ ಇದೆ, ವಿದ್ಯೆಯ ಜೊತೆಗೆ ದುಡ್ಡು ಕೂಡ ಮುಖ್ಯ, ನಮ್ಮಂತಹ ಒಳ್ಳೆಯವರು ಒಳ್ಳೆಯ ರೀತಿಯಲ್ಲಿ ದುಡ್ಡನ್ನು ಮಾಡಿಕೊಂಡು ಜೀವನ ನಡೆಸೋಣ ಎಂದು ಹೇಳಿದರು.ಮುಂದುವರೆದುಪ್ರದೀಪ್ ಈಶ್ವರ್ ನಾನು ಕೂಡ ಆವರೇಜ್ ಸ್ಟೂಡೆಂಟ್ ಅಪ್ಪ ಅಮ್ಮ ಇಲ್ಲದೆ ಬೆಳೆದೆ,ಇದೀಗ ಅದೇ ನನ್ನ ಅಮ್ಮನ ಹೆಸರಲ್ಲಿ ನಾಳೆ ಐದು ವೆಂಟಿಲೆಟೆರ್ ಆಂಬುಲೆನ್ಸ್ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡುತ್ತಿದ್ದೇನೆ, 25 ಅನಾಥ ಮಕ್ಕಳಿಂದ ಈ ಆಂಬುಲೆನ್ಸ್ ಉದ್ಘಾಟನೆಯನ್ನು ಮಾಡಿಸುತ್ತೇನೆ.ನಾಳೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಕಲರ್ ಡ್ರೆಸ್ ವಿತರಣೆ ಮಾಡುತ್ತಿದ್ದೇನೆ,
ಇವತ್ತಿನಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷೇತ್ರದ ಜನರಿಗೆ ಪ್ರತ್ಯೇಕ ಕೌಂಟರ್ ಓಪನ್ ಮಾಡಿಸಿದ್ದೇನೆ, ಸರ್ಕಾರಿ ಪ್ರೌಢಶಾಲೆಗಳ ಮಕ್ಕಳು ಔಟ್ ಆಫ್ ಔಟ್ ಬರೋಕೆ ಪ್ರತ್ಯೇಕ ಟುಷನ್ ಮಾಡಿಸುವ ವ್ಯವಸ್ಥೆ ಮಾಡಿದ್ದೇನೆ ಎಂದು ತಿಳಿಸಿದರು.
ಮೋಟಿವೇಷನಲ್ ಸ್ಪೀಕರ್ ನಟ ಪ್ರದೀಪ್ ದೊಡ್ಡಯ್ಯ, ಎಲ್ಲರೂ ಕಷ್ಟ ಪಟ್ಟು ಓದಿ, ಒಂದು ಕಂಪನಿಯನ್ನು ಕಟ್ಟಿ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸಿಕ್ಕ ಒಳ್ಳೆಯ ಅವಕಾಶವನ್ನು ಬಳಸಿಕೊಂಡು ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ
ನಾಗಾರ್ಜುನ ಶಿಕ್ಷಣ ಸಂಸ್ಥೆಯ ಸದಸ್ಯೆ ಶ್ರೀಮತಿ ಭಾನು ಚೈತನ್ಯ ವರ್ಮಾ, ಕಾಲೇಜಿನ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ವಿ. ರವಿಶಂಕರ್, ನಾಗಾರ್ಜುನ ಸಮೂಹ ಸಂಸ್ಥೆಯ ನಿರ್ದೇಶಕರಾದಡಾ.ಎಸ್. ಜಿ .ಗೋಪಾಲಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ: ಭಾರತೀಯ ಜನತಾ ಪಾರ್ಟಿಯುವ ಮೋರ್ಚಾ ಚಿಕ್ಕಬಳ್ಳಾಪುರ ಜಿಲ್ಲೆ ವತಿಯಿಂದ ಲಯನ್ಸ್ ರಕ್ತನಿಧಿ ಯಲಹಂಕ ಇವರ ಸಹಯೋಗದೊಂದಿಗೆ ಇಂದು 
ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಹುತಾತ್ಮ ಯೋಧರ ನೆನಪಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಲಿ ರಲ್ಲಿ ರಕ್ತದಾನ ಶಿಬಿರ
ಹಮ್ಮಿಕೊಳ್ಳಲಾಗಿತ್ತು.ಮಾಜಿ ಶಾಸಕರಾದ ರಾಜಣ್ಣ,ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರೇಗೌಡ,ಆನಂದ್ ಗೌಡ,ನರ್ಮದಾರೆಡ್ಡಿ 
ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜೀತ್ ಎಲ್ಲಾ ದಾನಗಳಲ್ಲಿ ಅತಿ ಶ್ರೇಷ್ಠವಾದ ದಾನ ರಕ್ತದಾನ ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸಕ್ಕೆ ಮುಂದಾಗಬೇಕು,ನಾವು ನೀಡುವ ರಕ್ತ ಇನ್ನೊಬ್ಬರ ಜೀವ ಉಳಿಸೂ ಮಹಾ ಕಾರ್ಯಕ್ಕೆ ಉಪಯೋಗವಾಗುತ್ತದೆ ಹಾಗಾಗಿ ಎಲ್ಲರೂ ರಕ್ತದಾನ ಮಾಡಬೇಕು ಎಂದ ಅವರು ಸತತವಾಗಿ ಹತ್ತು ವರ್ಷಗಳಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು ಪ್ರತಿ ವರ್ಷ ಹೆಚ್ಚು ಯುನಿಟ್ ರಕ್ತ ಸಂಗ್ರಹ ಮಾಡಲಾಗುತ್ತಿದೆ ರಕ್ತದಾನದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ ದೇಹಕ್ಕೆ ಹೊಸ ಉತ್ಸಾಹ ಹುಮ್ಮಸ್ಸು ದೊರೆಯುತ್ತದೆ ರಕ್ತಾದಾನ ನಂತರ 24 ಗಂಟೆಯೊಳಗೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಇನ್ನು ಸಣ್ಣ ಸಣ್ಣ ಕಾಯಿಲೆಗಳಿಂದ ಮುಕ್ತವಾಗಬಹುದಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ

ಪಾವಗಡ :- ತಾಲ್ಲೂಕಿನಲ್ಲಿ ವಿವಿಧ ಇಲಾಖೆ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಮಾನ್ಯ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಮತ್ತು ಶಾಸಕ ಹೆಚ್.ವಿ ವೆಂಕಟೇಶ್ ಹಾಗೂ ಮಾಜಿ ಸಚಿವರಾದವೆಂಕಟರಮಣಪ್ಪ ರವರಿಂದತೀವ್ರ…

ಪ್ರಸಿದ್ಧಿಗಾಗಿ

(ದಿನಾಂಕ : 11.9.2023) ವಿಶೇಷ ಸಂವಾದ : ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇವುಗಳ ಹಾಗೆ ನಾಶವಾಗುವುದೆ ? ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್.…

ಪ್ರಸಿದ್ಧಿಗಾಗಿ

(ದಿನಾಂಕ : 11.9.2023) ವಿಶೇಷ ಸಂವಾದ : ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇವುಗಳ ಹಾಗೆ ನಾಶವಾಗುವುದೆ ? ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್.…

ವಿಶೇಷ ಸಂವಾದ : ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇವುಗಳ ಹಾಗೆ ನಾಶವಾಗುವುದೆ ? ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್. ಸಂಸ್ಥಾಪಕಿ ಭಾರತ ವಾಯ್ಸ್…

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 1,613 ಪ್ರಕರಣ ಇತ್ಯರ್ಥ: ಕೆಜಿಎಫ್: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೆಜಿಎಫ್ ನಗರದ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ನಲ್ಲಿ ಒಟ್ಟು 1613 ಪ್ರಕರಣಗಳು ಇತ್ಯರ್ಥಗೊಂಡವು. ಮೋಟಾರ್ ಅಪಘಾತ ಪರಿಹಾರ ನ್ಯಾಯ ಮಂಡಳಿ ಪ್ರಕರಣ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿತ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನ ಸಂಬಂಧಿಸಿ ಕ್ಲೈಮ್ ಗಳು ವೈವಾಹಿಕ /ಕೌಟುಂಬಿಕ ಪ್ರಕರಣ( ವಿಚ್ಛೇದನ ಹೊರತುಪಡಿಸಿ) ಚೆಕ್ ಬೌನ್ಸ್.ಆಸ್ತಿಯಲ್ಲಿ ಪಾಲು. ದೂರವಾಣಿ ಬಾಕಿ ಬಿಲ್ ಗಳ ಪಾವತಿ. ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಸೇರಿದಂತೆ ರಾಜಿಯಾಗಬಲ್ಲ 7,132 ಪ್ರಕರಣಗಳು ಇನ್ನೂ ಇತ್ಯಾರ್ಥಕ್ಕೆ ಬಾಕಿ ಇದ್ದು, ಶನಿವಾರ ಲೋಕ ಅದಾಲತ್ ಇತ್ಯರ್ಥಕಾಗಿ 1,830 ಪ್ರಕರಣಗಳು ಬಂದಿದ್ದವು. ಅವುಗಳ ಪೈಕಿ 1,613 ಪ್ರಕರಣಗಳು ಇತ್ಯರ್ಥಗೊಂಡು, ಒಟ್ಟು 2.88 ಕೋಟಿ ರೂ ಹಣ ಸಂಗ್ರಹವಾಗಿದೆ. ಈ ಮೆಗಾ ಲೋಕದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಮುಜುಪರ್ ಮಂಜರಿ. ಅಪಾರ ಹಿರಿಯ ಶ್ರೇಣಿ ನ್ಯಾಯಾಧೀಶ .ರಹಿಮ್ ಅಲಿ ಮೌಲ ಸಾಬ್. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು jmfc ಆರ್ ಮಂಜುನಾಥ್. 1ನೇ ಅಪಾರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಎಮ್ ವಿನೋದ್ ಕುಮಾರ್ .ಮಂಜು ಮತ್ತಿತರರಿದ್ದರು.

“ಯಾವ ರಾಜಕೀಯ ಪಕ್ಷಗಳನ್ನು ಅವಲಂಬಿಸಬೇಡಿ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈ ಗುಡಿಸಿ ಕೊಳ್ಳಿ -ನಟ ಚೇತನ್ “

(ವರದಿಗಾರರು ವೈ ಜಿ ನರಸಿಂಹ ಮೂರ್ತಿ ಬಯಲು ಸಿಂಹ ಪೀಣ್ಯ ದಾಸರಹಳ್ಳಿ ) ಪೀಣ್ಯ ದಾಸರಹಳ್ಳಿ : ಈಗಿನ ಪರಿಸ್ಥಿತಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿ ಗಳು ಸಂವಿಧಾನ ಗಾಳಿ ತೂರಿ ಪ್ರಜಾಪ್ರಭುತ್ವ ಅಧೋಗತಿಗೆ ತೆಗೆದು ಕೊಂಡು ಹೋಗುತ್ತಿ ದ್ದಾರೆ…