

ನಿರುತ್ತೈ ನಿೃತ್ಯಾಲಯ , ಇನಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ,ಚೆನ್ನೈ ಹಾಗೂ ವಿಂಟರ್ ಮೀಡಿಯಾ, ಚೆನ್ನೈ ರವರು ಆಯೋಜಿಸಿದ್ದ “ನವರಾತ್ರೀ ಡ್ಯಾನ್ಸ್ ಫೆಸ್ಟಿವಲ್ -2024, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಬಟು ಕೇವ್ಸ್ , ಮಲೇಷಿಯಾ” ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಲಯ ತಂಡವು ದಿನಾಂಕ 9 ಅಕ್ಟೋಬರ್ ರಂದು ಯಶಸ್ವಿಯಾಗಿ ನೃತ್ಯ ಪ್ರದರ್ಶಿಸಿದರು. ಗುರುಗಳಾದ ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಅಂತರರಾಷ್ಟ್ರೀಯ ಕಾರ್ಯಕ್ರಮವು ಎಲ್ಲಾ ಕಲಾರಸಿಕರ ಮನ ಸೆಳೆಯಿತು. ನೃತ್ಯ ಪ್ರದರ್ಶನವನ್ನು ಶ್ರೀ ಕೃಷ್ಣ ಕಲಾಲಯದ ಹಿರಿಯ ವಿದ್ಯಾರ್ಥಿಗಳಾದ ಚೈತ್ರ, ಲೇಖನ, ಕೀರ್ತನ ಪ್ರಭಾಕರ್, ಕೀರ್ತನ ರವಿಶಂಕರ್, ಕೀರ್ತನ ರವಿಕುಮಾರ್, ಲಿಖಿತ. ಕೆ. ಜೆ, ಮಾನ್ಯ , ಲಿಖಿತ.ಎಸ್ , ಪಂಚಮಿ ಹಾಗೂ ಮೋಹಿತ ನೀಡಿದರು. ಶ್ರೀಮತಿ ಗಾಯತ್ರೀ (ಪ್ರೆಸಿಡೆಂಟ್ ಆಫ್ ಭರತನಾಟ್ಯ, ಮಲೇಷಿಯಾ) ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಮಕ್ಕಳ ನೃತ್ಯ ಪ್ರದರ್ಶನವನ್ನು ಮೆಚ್ಚಿ ಕೊಂಡಾಡಿದರು. ಶ್ರೀ ಕೃಷ್ಣ ಕಲಾಲಯದ ಕೊಆರ್ಡಿನೇಟರ್ಸ್ ಗಳಾದ ಶ್ರೀಯುತ ಮೋಹನ್ ಕುಮಾರ್, ಶ್ರೀಮತಿ ಲತಾ, ಶ್ರೀಮತಿ ಸರಿತ ಹಾಗೂ ಶ್ರೀಮತಿ ರತ್ನ ರವರು ಉಪಸ್ಥಿತರಿದ್ದರು.
