ಒನ್ ಹೆಲ್ತ್ ಭಾಗವಾಗಿ #BITE FREE LOCALITY ಮತ್ತು ಸಹಬಾಳತ್ವೆ ಅಡಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ನಾವು ಮಾಡುತ್ತಿರುವುದರಿಂದ ಈ ದಿನವನ್ನು ಪಾಲಿಕೆಯು ಯು ಒಂದು ಪ್ರಮುಖ ಮೈಲಿಗಲ್ಲನ್ನಾಗಿ ಗುರುತಿಸುತ್ತದೆ.

ಆಹಾರ ಸಂಗ್ರಹಿಸಬಹುದಾದ ಆಯ್ದ ಸ್ಥಳಗಳಿಗಿಂತ ದೊಡ್ಡ ಪ್ರದೇಶಗಳನ್ನು ಒಳಗೊಳ್ಳಲುವ ಸಮಾಜದ ವಿವಿಧ ಪಾಲುದಾರರನ್ನು ಒಟ್ಟುಗೂಡಿಸುವ ಮೂಲಕ ಸಹಬಾಳ್ವೆಗೆ ಒತ್ತು ನೀಡುವ ಇಂತಹ ಯೋಜನೆಯನ್ನು ದೇಶದಲ್ಲಿಯೇ ಪ್ರಾರಂಭಿಸಿದ ಬಹುಶಃ ಮೊದಲ ಪಾಲಿಕೆ ಬಿಬಿಎಂಪಿಯಾಗಿದೆ.

ಈ ಯೋಜನೆಯಡಿಯಲ್ಲಿ, ಪೌರಕಾರ್ಮಿಕರು, ಹೋಟೆಲ್ ಮಾಲೀಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಸಂಘಟಿತರಾಗುತ್ತಾರೆ ಮತ್ತು ಸಮುದಾಯ ನಾಯಿಗಳಿಗೆ ಆಹಾರದ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡುವುದನ್ನು ಸಕ್ರಿಯಗೊಳಿಸುತ್ತಾರೆ.

ಪಾಲಿಕೆಯು ನಾಯಿಗಳಿಗೆ ಮಸಾಲೆ, ಎಣ್ಣೆ ಅಥವಾ ಇತರೆ ಉದ್ರೇಕಕಾರಿಗಳಲ್ಲದ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಒದಗಿಸುವ ಆಯಾ ಪ್ರದೇಶಗಳಲ್ಲಿನ ಹೋಟೆಲ್‌ಗಳಿಗೆ ಆಹಾರದ ಅವಶ್ಯಕತೆಗಳನ್ನು Curating ಮಾಡಲು ತಿಳಿಸಲಾಗಿದೆ.

ಪಾಲಿಕೆಯು ಶ್ವಾನ ಮಹೋತ್ಸವ [ಕುಕುರ್ ತಿಹಾರ್] ಆಚರಿಸುವ ಮೂಲಕ ಅಕ್ಟೋಬರ್ 17, 2024 ರಂದು ಪ್ರಾರಂಭಿಸುತ್ತದೆ ಮತ್ತು ಸಮುದಾಯದ ನಾಯಿಗಳಿಗೆ ಆಹಾರ ನೀಡುವ ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಸೇರಲು ಈ ಪ್ರದೇಶಗಳಲ್ಲಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.

ಈ ಸಂಭ್ರಮಾಚರಣೆಯಲ್ಲಿ ಬಿಬಿಎಂಪಿಯಿಂದ ಅನ್ನಸಂತರ್ಪಣೆ ನಡೆಯುವ ವಾರ್ಡ್‌ಗಳು:

  • ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್ ಚೌಕ, ಹಡ್ಸನ್ ವೃತ್ತ.
  • ಸದಾಮಂಗಲ ರಸ್ತೆ ಮತ್ತು ಗ್ರಾಮದೇವತೆ ದೇವಸ್ಥಾನ, ಹೂಡಿ.
  • ಗುಬ್ಬಲಾಲ ಮುಖ್ಯ ರಸ್ತೆ, ಕೋಣನಕುಂಟೆ, ಸುಬ್ರಹ್ಮಣ್ಯಪುರ, ವಸಂತಪುರ – ಆಯ್ದ ಸ್ಥಳಗಳು.
  • ಬಿಸಿಬಿಸಿ ಲೇಔಟ್, ಆರ್.ಆರ್ ನಗರ
  • ಬಾಗಲಗುಂಟೆ, ಮಂಜುನಾಥ ನಗರ ಮುಖ್ಯ ರಸ್ತೆ
  • ಸಿದ್ದಾಪುರ ವಾರ್ಡ್, ಗುಟ್ಟೆಪಾಳ್ಯ
  • ಟೆಲಿಕಾಂ ಲೇಔಟ್, ಜಕ್ಕೂರ್,
  • ಗಾಯತ್ರಿ ನಗರ, ಬಹು ಸ್ಥಳಗಳು.

ನಾಗರಿಕರು ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಆಚರಣೆಯಲ್ಲಿ ಪಾಲ್ಗೊಳ್ಳಬಹುದು ಅಥವಾ ನಿಮ್ಮ ಬೀದಿಗಳು ಮತ್ತು ಸಾಕು ನಾಯಿಗಳಿಗೆ ಸಣ್ಣ ಹಬ್ಬವನ್ನು ಮಾಡುವ ಮೂಲಕ ನಿಮ್ಮ ಪ್ರದೇಶಗಳಲ್ಲಿ ಏಕಕಾಲದಲ್ಲಿ ಆಚರಿಸಬಹುದು, ಅವುಗಳಿಗೆ ಆಹಾರ ನೀಡಿ ಮತ್ತು ಆಚರಣೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಪಾಲಿಕೆಗೆ ಕಳುಹಿಸಿದಲ್ಲಿ ಇವುಗಳನ್ನು ನಾವು ನಿಮ್ಮ ಬೀದಿಗಳಲ್ಲಿ ಪ್ರದರ್ಶಿಸಬಹುದು.

ಅಧಿಕಾರಿಗಳು ಮತ್ತು ಪೌರಕಾರ್ಮಿಕರೊಂದಿಗೆ ಈ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೋಸ್ಕರ ನಡೆಸುವ ಮೊದಲ ಪರಸ್ಪರ ಕ್ರಿಯೆಯಾಗಿದ್ದು , ನಾಗರೀಕರು ತಮ್ಮ ನಾಯಿಗಳನ್ನು ತರದಂತೆ ಅಥವಾ ಆಹಾರ ಚಟುವಟಿಕೆಯಲ್ಲಿ ಯಾವುದೇ ರೀತಿಯ ಅಡಚಣೆಯನ್ನು ಉಂಟುಮಾಡದಂತೆ ನಾವು ನಾಗರಿಕರಿಗೆ ಸಲಹೆ ನೀಡುತ್ತೇವೆ.

ನಾಯಿಗಳಿಗೆ ಗುಲಾಲ್ ಅಥವಾ ಯಾವುದೇ ರೀತಿಯ ಬಣ್ಣಗಳನ್ನು ಹಾಕುವುದನ್ನು ತಪ್ಪಿಸಿ ಹಾಗೂ ಅವುಗಳನ್ನು ಬಲವಂತವಾಗಿ ಪಾಲ್ಗೊಳಿಸುವುದನ್ನು ತಪ್ಪಿಸಲು ಕ್ರಮವಹಿಸುವುದು.

ಪ್ರಾಣಿ ಕಲ್ಯಾಣ ಯೋಜನೆಗಳ ಭಾಗವಾಗಲು ಬಿಬಿಎಂಪಿ ಗೆ 200 ಕ್ಕೂ ಹೆಚ್ಚು ನೋಂದಣಿಗಳನ್ನು ಸ್ವೀಕರಿಸಲಾಗಿದೆ ಮತ್ತು ಬಿಬಿಎಂಪಿ ತಂಡವು ಶೀಘ್ರದಲ್ಲೇ ಈ ನೋಂದಣಿಸಿದ ನಾಗರಿಕರನ್ನು ಸಂಪರ್ಕಿಸಲಿದೆ.

ಕಾರ್ಯಕ್ರಮದ ಸಂಪೂರ್ಣ ವಿವರಗಳು ಮತ್ತು ಸೂಚನೆಗಳನ್ನು ಪರಿಶೀಲಿಸಲು ದಯವಿಟ್ಟು ಸಾಮಾಜಿಕ ಜಾಲತಾಣವಾದ bbmp_animalhusbandry [Instagram] bbmp_ahd [X] ಗೆ ಭೇಟಿ ನೀಡಿ.

ಯಾವುದೇ ಪ್ರಶ್ನೆಗಳಿಗೆ ನೀವು 1533 ಗೆ ಕರೆ ಮಾಡಬಹುದು.

Leave a Reply

Your email address will not be published. Required fields are marked *