



ಯಲಹಂಕ : ರಾಜಾನುಕುಂಟೆ ಗ್ರಾಮ ಪಂಚಾಯಿತಿ, ಪೀಪಲ್ ಟ್ರಸ್ಟ್ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಡಾ.ರೆಡ್ಡಿಸ್ ಫೌಂಡೇಶನ್ ಇವರ ಸಹಯೋಗದೊಂದಿಗೆ ರಾಜಾನುಕುಂಟೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಜಡಿಮಳೆಯ ನಡುವೆಯೂ ಯಶಸ್ವಿಯಾಗಿ ನಡೆಯಿತು.
ಉದ್ಯೋಗ ಮೇಳದಲ್ಲಿ ಆ್ಯಕ್ಸಿಸ್ ಬ್ಯಾಂಕ್, ಗ್ರೋ, ಐ.ಎಫ್.ಬಿ., ಕಲ್ಯಾಣಿ ಮೋಟರ್ಸ್, ಎಚ್.ಡಿ.ಎಫ್.ಸಿ. ಬ್ಯಾಂಕ್, ಲೆನ್ಸ್ ಕಾರ್ಟ್, ನೋಬ್ರೋಕರ್, ಎ.ಯು.ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 20ಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಂಡಿದ್ದು, ತಮ್ಮ ಉದ್ಯೋಗದ ಅಗತ್ಯವನ್ನು ಪೂರೈಸಬಲ್ಲ ಅರ್ಹತೆ ಹೊಂದಿರುವ ಉದ್ಯೋಗಾರ್ಥಿ ಗಳನ್ನು ಸಂದರ್ಶನ ನಡೆಸಿ ಉದ್ಯೋಗದ ಪ್ರಮಾಣ ಪತ್ರ ವಿತರಿಸಿದರು.
ಬೆಳಿಗ್ಗೆ ಯಿಂದಲೂ ಉದ್ಯೋಗ ಹರಸಿ ಬಂದಿದ್ದ ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೊಮೋ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಷಯದಲ್ಲಿ ಪದವಿ ಪಡೆದ ನೂರೈವತ್ತಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ತಮ್ಮ ವಿದ್ಯಾರ್ಹತೆಯ ಪ್ರಮಾಣ ಪತ್ರ ಹಿಡಿದು, ಸರತಿ ಸಾಲಿನಲ್ಲಿ ನಿಂತು ಸಂದರ್ಶನದಲ್ಲಿ ಪಾಲ್ಗೊಂಡ ದೃಶ್ಯ ಕಂಡು ಬಂತು. ಉದ್ಯೋಗ ಮೇಳದಲ್ಲಿ ಸುಮಾರು 100ಕ್ಕೂ ಹೆಚ್ಚು ಉದ್ಯೋಗಾರ್ಥಿ ಗಳಿಗೆ ಉದ್ಯೋಗ ದೊರೆಯುವ ಮೂಲಕ ಯಶಸ್ವಿಯಾಯಿತು.
ಬೃಹತ್ ಉದ್ಯೋಗ ಮೇಳದಲ್ಲಿ ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ, ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಪೀಪಲ್ ಟ್ರಸ್ಟ್ ಗ್ರಾಮಾಭಿವೃದ್ಧಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉತ್ತಯ್ಯ, ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಬೆಟ್ಟೇನಹಳ್ಳಿ ರಾಜಣ್ಣ, ಸಂಚಾಲಕರಾದ ಹೊನ್ನೇನಹಳ್ಳಿ ರಾಜಣ್ಣ, ಎಸ್.ಎಚ್.ಅಪ್ಪಣ್ಣಗೌಡ, ರೇಣುಕಮ್ಮ, ರೆಡ್ಡಿಸ್ ನ ವಿವೇಕ್ ರೆಡ್ಡಿ, ಗುರುಪ್ರಸಾದ್, ವಿನೋದ್ ರಾಜೇಂದ್ರನ್, ಗ್ರಾ.ಪಂ. ಉಪಾಧ್ಯಕ್ಷರಾದ ವೆಂಕಟೇಶ್, ಕೆ.ಎಂ.ಅರಸೇಗೌಡ, ಸದಸ್ಯರಾದ ಸಾದೇನಹಳ್ಳಿ ಚಿಕ್ಕಣ್ಣ, ಸುಜಾತಮ್ಮ, ಹನುಮೇಗೌಡ ಸೇರಿದಂತೆ ಇನ್ನಿತರರಿದ್ದು, ಉದ್ಯೋಗ ಮೇಳಕ್ಕೆ ಅಗತ್ಯ ಸಹಕಾರ ನೀಡಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
R Hanumanthu
kogilu layout
Yelahanka
9845085793
7349337989
9035282296
