ಹರ್ಬಲೈಫ್ ಇಂಡಿಯಾ ಸತತ ಮೂರನೇ ವರ್ಷ ಐರನ್‌ಮ್ಯಾನ್‌ 70.3 ಜೊತೆಗೆ ಸಹಯೋಗ ಮಾಡಿಕೊಂಡಿದೆ

ಬೆಂಗಳೂರು, ಭಾರತ – ಅಕ್ಟೋಬರ್ 25, 2024: ಪ್ರಮುಖ ಆರೋಗ್ಯ ಮತ್ತು ಕ್ಷೇಮ ಕಂಪನಿ,ಸಮುದಾಯ ಮತ್ತು ಪ್ಲಾಟ್ ಫಾರ್ಮ್ ಆಗಿರುವ ಹರ್ಬಲೈಫ್ ಸಂಸ್ಥೆಯು ಐರನ್‌ಮ್ಯಾನ್‌ 70.3 ಇಂಡಿಯಾ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ಕಂಪನಿಯು ಐರನ್‌ಮ್ಯಾನ್‌ ಕಾರ್ಯಕ್ರಮದ ಜೊತೆಗೆ ಸತತ ಮೂರನೇ ವರ್ಷ ಸಹಯೋಗ ಮಾಡಿಕೊಂಡಿದೆ. ಪ್ರೀಮಿಯಂ ಸ್ಪೋರ್ಟ್ ನ್ಯೂಟ್ರಿಷನ್ ಉತ್ಪನ್ನಗಳ ಮೂಲಕ ಕ್ರೀಡಾಪಟುಗಳಿಗೆ ಬೆಂಬಲ ಒದಗಿಸುವ ಹರ್ಬಲೈಫ್‌ನ ಬದ್ಧತೆಗೆ ಪೂರಕವಾಗಿ ಒಪ್ಪಂದ ಮಾಡಿಕೊಂಡಿದೆ.

ಐರನ್‌ಮ್ಯಾನ್‌ 70.3 ಕಾರ್ಯಕ್ರಮವು ವರ್ಲ್ಡ್ ಟ್ರಯಥ್ಲಾನ್ ಕಾರ್ಪೊರೇಷನ್ (ಡಬ್ಲ್ಯೂಟಿಸಿ) ಜೊತೆಗೆ ಸಂಯೋಜಿತವಾಗಿರುವ ಮಹತ್ವದ ಟ್ರಯಥ್ಲಾನ್ ಆಗಿದೆ. ಈ ಟ್ರಯಾಥ್ಲಾನ್ ನಲ್ಲಿ ಒಟ್ಟು 113.0 ಕಿಮೀ ಕ್ರಮಿಸಬೇಕಿದ್ದು, ಅದರಲ್ಲಿ 1.9 ಕಿಮೀ ಈಜು, 90 ಕಿಮೀ ಬೈಕ್ ರೈಡ್ ಮತ್ತು 21.1 ಕಿಮೀ ರೇಸ್ ಸೇರಿದೆ. ರೇಸ್ ಗೋವಾದ ಸುಂದರವಾದ ಪ್ರದೇಶಗಳ ಹಿನ್ನೆಲೆಯಲ್ಲಿ ನಡೆಯಲಿದ್ದು, ಕ್ರೀಡಾಪಟುಗಳಿಗೆ ಅಸಾಧಾರಣ ಅನುಭವ ಒದಗಿಸಲಿದೆ.

ಈ ಕಾರ್ಯಕ್ರಮದಲ್ಲಿ ಹರ್ಬಲೈಫ್ ಕ್ರೀಡಾಪಟುಗಳಿಗೆ ಅವಶ್ಯ ನ್ಯೂಟ್ರಿಷನ್ ಉತ್ಪನ್ನಗಳನ್ನು ಒದಗಿಸುತ್ತದೆ. ಕ್ರೀಡಾಪಟುಗಳು ಡೀಹೈಡ್ರೇಟ್ ಆಗದೇ ಇರುವಂತೆ ಮತ್ತು ಉತ್ತಮ ಪ್ರದರ್ಶನ ನೀಡುವಂತೆ ನೋಡಿಕೊಳ್ಳುತ್ತದೆ. ಈ ಯೋಜನೆಯ ಮೂಲಕ ಹರ್ಬಲೈಫ್ ಆರೋಗ್ಯ ಮತ್ತು ಕ್ಷೇಮಕ್ಕೆ ಬೇಕಾದ ಸಮಗ್ರ ವಿಧಾನದ ಭಾಗವಾಗಿರುವ ವ್ಯಾಯಾಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಅಥವಾ ಆರೋಗ್ಯ ಸಾಧಿಸುವ ನಿಟ್ಟಿನಲ್ಲಿ ಅವಶ್ಯ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಈ ಕುರಿತು ಹರ್ಬಲೈಫ್ ಇಂಡಿಯಾದ ಸೇಲ್ಸ್, ಮಾರ್ಕೆಟಿಂಗ್ ಮತ್ತು ಅಸೋಸಿಯೇಟ್ ಕಮ್ಯುನಿಕೇಷನ್ಸ್ ವಿಭಾಗದ ಉಪಾಧ್ಯಕ್ಷರಾದ ಪಾಂಚಾಲಿ ಉಪಾಧ್ಯ ಅವರು, “ಐರನ್‌ಮ್ಯಾನ್ 70.3 ಇಂಡಿಯಾ ಜೊತೆಗೆ ನಮ್ಮ ಸಹಯೋಗವನ್ನು ಮುಂದುವರಿಸುವ ನಿಜವಾಗಿಯೂ ನಮಗೆ ಗೌರವದ ಸಂಗತಿಯಾಗಿದೆ. ಜೀವನವನ್ನು ಸುಧಾರಿಸುವ ಮತ್ತು ಎಲ್ಲರನ್ನೂ ಒಟ್ಟಾಗಿಸುವ ಕ್ರೀಡೆಗಳ ಪರಿವರ್ತಕ ಶಕ್ತಿಯ ಮೇಲೆ ಹರ್ಬಲೈಫ್ ಸಂಸ್ಥೆಗೆ ನಂಬಿಕೆ ಇದೆ. ತರಬೇತಿ ನೀಡಿ ಕ್ರೀಡಾಪುಟಗಳಿಗೆ ಬೆಂಬಲ ನೀಡುವುದು ಮತ್ತು ವ್ಯಕ್ತಿಗಳಿಗೆ ಬಲ ತುಂಬುವುದು ಮಾತ್ರವೇ ಅಲ್ಲ, ಅವರ ಪ್ರಯಾಣದಲ್ಲಿ ಅವರು ಆರೋಗ್ಯ ಮತ್ತು ಕ್ಷೇಮದ ಕಡೆಗೆ ಗಮನ ಹರಿಸಲು ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತೇವೆ. ಈ ಪಾಲುದಾರಿಕೆಯು ಪೌಷ್ಠಿಕಾಂಶಗಳ ಮೇಲೆ ನಮಗಿರುವ ನಂಬಿಕೆ ಮತ್ತು ಉತ್ತಮ ಜೀವನ ನಡೆಸಲು ಎಲ್ಲರಿಗೂ ನೆರವಾಗುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.

ಯೋಸ್ಕಾದ ಸಿಇಓ ಮತ್ತು ಐರನ್‌ಮ್ಯಾನ್ ಇಂಡಿಯಾ ಬ್ರ್ಯಾಂಡ್‌ ನ ಫ್ರಾಂಚೈಸ್ ಮಾಲೀಕ ದೀಪಕ್ ರಾಜ್ ಅವರು, “ಐರನ್‌ಮ್ಯಾನ್ 70.3 ಗೋವಾ ಜೊತೆಗೆ ಹರ್ಬಲೈಫ್‌ನ ಈ ದೀರ್ಘಕಾಲದ ಒಡನಾಟವು ಸ್ಪೋರ್ಟ್ಸ್ ನ್ಯೂಟ್ರಿಷನ್ ಮೂಲಕ ಕ್ರೀಡಾಪಟುಗಳಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಸಹಾಯ ಮಾಡುವ ಹರ್ಬಲೈಫ್‌ ನ ಬದ್ಧತೆಗೆ ಸಾಕ್ಷಿಯಾಗಿದೆ. ಐರನ್‌ಮ್ಯಾನ್‌ 70.3 ಗೋವಾ ಇಂಡಿಯಾದಂತಹ ಜಾಗತಿಕವಾಗಿ ಪ್ರಸಿದ್ಧಿ ಗಳಿಸಿರುವ ರೇಸ್ ನ ಉಲ್ಲಾಸದ ಜೊತೆ ಹರ್ಬಲೈಫ್ ನ ಹುಮ್ಮಸ್ಸು ಸೇರಿಕೊಂಡಿದೆ. ಕ್ರೀಡಾ ಉತ್ಸಾಹಿಗಳಿಗೆ ನೆರವಾಗುವ ಮತ್ತು ರಾಷ್ಟ್ರದಾದ್ಯಂತ ಫಿಟ್‌ನೆಸ್ ಸಂಸ್ಕೃತಿಯನ್ನು ಬೆಳೆಸುವ ಬದ್ಧತೆಗೆ ಇದು ಸಾಕ್ಷಿಯಾಗಿದೆ. ಐರನ್‌ಮ್ಯಾನ್‌ 70.3 ಗೋವಾ ಇಂಡಿಯಾ ಜೊತೆಗಿನ ನಿರಂತರ ಪಾಲುದಾರಿಕೆ ಮತ್ತು ಬೆಂಲಕ್ಕೆ ಹರ್ಬಲೈಫ್ ಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ” ಎಂದು ಹೇಳಿದರು.

ಭಾರತದಲ್ಲಿ ಸ್ಪೋರ್ಟ್ಸ್ ನ್ಯೂಟ್ರಿಷನ್ ವಿಭಾಗವು ವೇಗವಾಗಿ ಬೆಳೆಯುತ್ತಿದೆ. ಭಾರತೀಯ ಸ್ಪೋರ್ಟ್ಸ್ ನ್ಯೂಟ್ರಿಷನ್ ಮಾರುಕಟ್ಟೆಯು 2023ರಲ್ಲಿ ಸರಿಸುಮಾರು 1.7 ಶತಕೋಟಿ ಯುಎಸ್ ಡಾಲರ್ ಮೌಲ್ಯದ್ದಾಗಿತ್ತು ಮತ್ತು 2032ರ ವೇಳೆಗೆ ಅಂದಾಜು 3.1 ಶತಕೋಟಿ ಯುಎಸ್ ಡಾಲರ್ ಅನ್ನು ತಲುಪುವ ನಿರೀಕ್ಷೆ ಇದೆ ಎಂದು ಐಎಂಎಆರ್ಸಿ ಗ್ರೂಪ್ ವರದಿ ಮಾಡಿದೆ. ಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಪ್ರಜ್ಞೆ, ಫಿಟ್‌ನೆಸ್ ಆಸಕ್ತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮನಸ್ಥಿತಿಯಿಂದ ಈ ವೇಗದ ಅಭಿವೃದ್ಧಿ ಉಂಟಾಗಿದೆ. ಈ ಟ್ರೆಂಡ್ ಗೆ ಪೂರಕವಾಗಿ ಬಂದಿರುವ ಹರ್ಬಲೈಫ್‌ ನ ‘ಹರ್ಬಲೈಫ್ 24’ ಸ್ಪೋರ್ಟ್ಸ್ ನ್ಯೂಟ್ರಿಷನ್ ಉತ್ಪನ್ನ ಶ್ರೇಣಿಯು ಕ್ರೀಡಾಪಟುಗಳಿಗೆ ಚೇತರಿಕೆ, ಹೈಡ್ರೇಷನ್ ಮತ್ತು ಅತ್ಯುತ್ತಮ ಪ್ರದರ್ಶನ ನೀಡಲು ಸಹಾಯ ಮಾಡಲೆಂದೇ ವಿನ್ಯಾಸಗೊಳಿಸಿದ ಉತ್ಪನ್ನಗಳನ್ನು ನೀಡುತ್ತದೆ.

ಹರ್ಬಲೈಫ್ ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ಕ್ರೀಡಾಪಟುಗಳು, ತಂಡಗಳು ಮತ್ತು ಲೀಗ್‌ ಗಳಿಗೆ ಪ್ರಾಯೋಜಕತ್ವ ಒದಗಿಸಿದೆ. ಅವರ ತರಬೇತಿ ಮತ್ತು ಸ್ಪರ್ಧೆಯ ಎಲ್ಲಾ ಹಂತಗಳಲ್ಲಿ ಗುಣಮಟ್ಟದ ಸ್ಪೋರ್ಟ್ಸ್ ನ್ಯೂಟ್ರಿಷನ್ ಉತ್ಪನ್ನಗಳನ್ನು ನೀಡಿ ಅವರಿಗೆ ಬೆಂಬಲ ನೀಡುತ್ತದೆ. ಭಾರತದಲ್ಲಿ ಹರ್ಬಲೈಫ್ ವಿರಾಟ್ ಕೊಹ್ಲಿ (ಕ್ರಿಕೆಟ್), ಸ್ಮೃತಿ ಮಂಧಾನ (ಕ್ರಿಕೆಟ್), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್), ಮಣಿಕಾ ಬಾತ್ರಾ (ಟೇಬಲ್ ಟೆನಿಸ್), ಮೇರಿ ಕೋಮ್ (ಬಾಕ್ಸಿಂಗ್), ಮತ್ತು ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ ಪಾಲಕ್ ಕೊಹ್ಲಿಯಂತಹ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ಒದಗಿಸಿದ್ದು, ಕ್ರೀಡಾಪಟುಗಳನ್ನು ಬೆಂಬಲಿಸುವುದನ್ನು ಮುಂದುವರೆಸಿದೆ. ಭಾರತೀಯ ಒಲಿಂಪಿಕ್ಸ್, ವಿಶೇಷ ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ತಂಡಗಳು, ಐಪಿಎಲ್, ಪ್ರೊ ಕಬಡ್ಡಿ, ಐರನ್‌ಮ್ಯಾನ್ 70.3 ಗೋವಾ 2024 ಸೇರಿದಂತೆ ಹಲವಾರು ಪ್ರಮುಖ ತಂಡಗಳು ಮತ್ತು ಕ್ರೀಡಾಕೂಟಗಳಿಗೆ ಹರ್ಬಲೈಫ್ ಪ್ರಾಯೋಜಕತ್ವ ಒದಗಿಸಿದೆ.

Leave a Reply

Your email address will not be published. Required fields are marked *