ದೇವನಹಳ್ಳಿ : ಜೀವನದಲ್ಲಿ ಸ್ವಲ್ಪ ನೇಮು-ಫೇಮು ಸಿಕ್ಕರೆ ಸಾಕು, ಕಲರ್ ಫುಲ್ ಆಗಿ ಸದಾ ಕಾಲ ಎಂಜಾಯ್ ಮಾಡ್ತಾ ಇರಬೇಕು ಅಂತಾ ಬಹಳಷ್ಟು ಮಂದಿ ಬಯಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ತಾವು ಮಾಡುವ ಹೆಸರಿನಿಂದ ಒಂದಷ್ಟು ಹಿಂದುಳಿದಿರುವ ಮಹಿಳೆಯರಿಗೆ ಪ್ರೇರಣೆಯಾಗಿ ಸಮಾಜಕ್ಕೆ ಏನಾದರೂ ಮಾಡ್ಬೇಕು ಅನ್ನೋ ಮಂದಿ ಬೆರಳೆಣಿಕೆಯಷ್ಟಾದರೂ ಸಿಗುತ್ತಾರೆ ಅನ್ನೋದು ಸಮಾಧಾನಕರ ಸಂಗತಿ.

ಈ ಫೋಟೋದಲ್ಲಿ ಧರೆಗಿಳಿದ ಅಪ್ಸರೆಯಂತೆ ಕಾಣುತ್ತಿರುವ ಈ ಸುಂದರ ಯುವತಿಯ ಹೆಸರು ಡಾ.ಈಬೀಷ್ಮಾ, ಕೇರಳದ ಕುಗ್ರಾಮ ಒಂದರಲ್ಲಿ ಜನಿಸಿ, ತಮಿಳುನಾಡಿನಲ್ಲಿ ಓದಿ, ಬೆಳೆದು, ವೈದ್ಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಅಲ್ಲದೆ ಇವರು ನ್ಯೂಟ್ರೀಷಿಯನ್ ತಜ್ಞರೂ ಸಹಾ ಹೌದು.

ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಹ ಇವರಿಗೆ ಮಾಡಲಿಂಗ್ ಹಾಗೂ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ವೃತ್ತಿಯ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಮಾಡಲಿಂಗ್‌ನಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಪುಣೆಯಲ್ಲಿ ಶ್ರೀ ಪಾರಿಷ್ ವೈದ್ಯಾ ಅವರ ನೇತೃತ್ವದಲ್ಲಿ ‘ತಾಜ್ ಇವೆಂಟ್ಸ್ ಅಂಡ್ ಪ್ರೊಡಕ್ಷನ್ಸ್’ ವತಿಯಿಂದ ಆಯೋಜಿಸಲಾಗಿದ್ದ ‘ತಾಜ್ ಮಿಸ್ ಇಂಡಿಯಾ 2024’ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆಯಿಂದ ‘ತಾಜ್ ಮಿಸ್ ಇಂಡಿಯಾ 2024’ ಆಗಿ ಹೊರಹೊಮ್ಮಿದ್ದಾರೆ.

ಕಳೆದ ಏಪ್ರಿಲ್ 2024ರಲ್ಲಿ, ರಾಜಸ್ಥಾನದ ಜೈಪುರದಲ್ಲಿ ನಡೆದ ಸ್ಪರ್ಧೆಯಲ್ಲಿ, ‘ವೋಗ್‌ಸ್ಟಾರ್ ಮಿಸ್ ಕೇರಳ’ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.

ಮಾಡಲಿಂಗ್ ಕ್ಷೇತ್ರದಲ್ಲಿಯೂ ಸಹ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಲ್ಲದೆ ಇವರು ಹಿಂದುಳಿದ ಮಹಿಳೆಯರನ್ನು ಪ್ರೇರೇಪಿಸುವ ಮತ್ತು ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ತಮ್ಮದೇ ಆದ ಕನಸನ್ನು ಹೊಂದಿದ್ದು “ನೀವು ನಿಮ್ಮ ಶ್ರೇಷ್ಠತೆಯನ್ನು ತೋರಿಸಿದರೆ ದೇವರು ಉಳಿದದ್ದನ್ನು ಮಾಡುವನು’ ಎಂಬ ದ್ಯೇಯ ವಾಕ್ಯದೊಂದಿಗೆ ಮುಂದೆ ಸಾಗುತ್ತಿದ್ದಾರೆ.

ಡಾ. ಈಬೀಷ್ಮಾ ಅವರು ಅಂತಾ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅಭಿಲಾಷೆಯನ್ನು ಹೊಂದಿದ್ದು, ಆರೋಗ್ಯ ಕಲ್ಯಾಣ ಮತ್ತು ಮಹಿಳಾ ಸಬಲಿಕರಣದ ಸಂದೇಶವನ್ನು ಹರಡುವ ಬಹುದೊಡ್ಡ ಸಂಕಲ್ಪವನ್ನು ಹೊಂದಿದ್ದಾರೆ. ಇವರ ಅಭಿಲಾಷೆ ಬಹುಬೇಗ ಈಡೇರಲಿ.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

Public power

R Hanumanthu

Kogilu layout

Yelahanka

9845085793

7349337989

Leave a Reply

Your email address will not be published. Required fields are marked *