
3,500 ಯುವ ಪ್ರತಿಭೆಗಳಿಗೆ ಭವಿಷ್ಯದ ಬೇಡಿಕೆಯ ತಾಂತ್ರಿಕ ಕೌಶಲ್ಯ ತರಬೇತಿ ಪೂರ್ಣಗೊಳ್ಳುವುದರ ಮೂಲಕ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ 2024 ಕಾರ್ಯಕ್ರಮ ಮುಕ್ತಾಯ
- ಸ್ಯಾಮ್ ಸಂಗ್ ನ ಪ್ರತಿಷ್ಠಿತ ಸಿಎಸ್ಆರ್ ಯೋಜನೆ ಆಗಿರುವ ಎಸ್ಐಸಿ ಕಾರ್ಯಕ್ರಮದ ಮೂಲಕ ಎಐ, ಐಓಟಿ, ಬಿಗ್ ಡೇಟಾ, ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಭಾರತೀಯ ಯುವಕ ಪೀಳಿಗೆಯನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡಲು ತರಬೇತಿ ನೀಡಲಾಗಿದೆ.
- ವಿವಿಧ ವಿಭಾಗಗಳ ಟಾಪರ್ ಗಳು ಈ ಕಾರ್ಯಕ್ರಮದ ರಾಷ್ಟ್ರ ಮಟ್ಟದ ಸಮಾರೋಪ ಸಮಾರಂಭದಲ್ಲಿ ರೂ. 1 ಲಕ್ಷ ನಗದು ಬಹುಮಾನ ಮತ್ತು ಸ್ಯಾಮ್‌ಸಂಗ್ ಉತ್ಪನ್ನಗಳನ್ನು ಪಡೆಯುತ್ತಿದ್ದಾರೆ.
- 2023ರಲ್ಲಿ ಈ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ 3,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು.
ಬೆಂಗಳೂರು, ಭಾರತ – ನವೆಂಬರ್ 12, 2024: ಸ್ಯಾಮ್‌ಸಂಗ್ ಇಂಡಿಯಾ ಸಂಸ್ಥೆಯು 2024ನೇ ಸಾಲಿನ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ (ಎಸ್ಐಸಿ) ಕಾರ್ಯಕ್ರಮದ ಅಡಿಯಲ್ಲಿ 3,500 ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಪೂರ್ಣಗೊಳಿಸಿದೆ.
ಭಾರತ ಸರ್ಕಾರದ #ಸ್ಕಿಲ್‌ಇಂಡಿಯಾ ಮತ್ತು #ಡಿಜಿಟಲ್‌ಇಂಡಿಯಾ ಯೋಜನೆಗಳಿಗೆ ಪೂರಕವಾಗಿ ಆಯೋಜಿಸಲಾಗಿರುವ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಯೋಜನೆಯು ಎಐ, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್ ನಂತಹ ಜಾಸ್ತಿ ಬೇಡಿಕೆಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಅವರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಗಮನಹರಿಸುತ್ತದೆ.
2024ರಲ್ಲಿ ಸ್ಯಾಮ್ ಸಂಗ್ 3,500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಉತ್ತರ ಪ್ರದೇಶ, ದೆಹಲಿ ಎನ್ ಸಿ ಆರ್, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ 12 ಎಸ್ಐಸಿ ಪ್ರಮಾಣೀಕರಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಕುರಿತು ಮಾತನಾಡಿದ ಸ್ಯಾಮ್‌ಸಂಗ್ ನೈರುತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಅವರು, “ಹೊಸ ತಂತ್ರಜ್ಞಾನಗಳ ಹೊಸ ಅಧ್ಯಾಯ ಆರಂಭವಾಗಿರುವ ಈ ಹೊತ್ತಿನಲ್ಲಿ ಎಐ ನಮ್ಮ ಜೀವನವನ್ನು ಬಾದಲಾಯಿಸುಲು ಸಿದ್ಧವಾಗಿದೆ. ಇಂಥಾ ಸಂದರ್ಭದಲ್ಲಿ ಈ ಕಾಲದ ಯುವ ಪೀಳಿಗೆ ಉತ್ತಮ ಭವಿಷ್ಯಕ್ಕಾಗಿ ಅವುಗಳಲ್ಲಿ ಪರಿಣತಿ ಹೊಂದುವುದು ಮತ್ತು ತಮ್ಮ ಸಾಮರ್ಥ್ಯ ಹೆಚ್ಚುಗೊಳಿಸುವುದು ಬಹಳ ಮುಖ್ಯವಾಗಿದೆ. ಈ ಕಾರ್ಯಕ್ರಮವು ಭಾರತದ ಬೆಳವಣಿಗೆಯ ಕಥೆಗೆ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತಮ ಪಾಲುದಾರರಾಗಿ, ಹೆಚ್ಚಿನ ಕೊಡುಗೆ ನೀಡುವ ಸಂಸ್ಥೆಯಾಗಿರುವ ತನ್ನ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.
ಇತ್ತೀಚೆಗೆ ಎಐ ಕೋರ್ಸ್ ಪೂರ್ತಿ ಮಾಡಿರುವ ಕಾಂಚನ್ ಲತಾ ಶ್ರೀವಾಸ್ತವ ಅವರು ಈ ಕಾರ್ಯಕ್ರಮದ ಕುರಿತು ಮಾತನಾಡಿ, “ಈ ಕೋರ್ಸ್ ನಾನು ಎಐ ಪ್ರಾಜೆಕ್ಟ್ ಗಳಿಗೆ ಸಿದ್ಧಳಾಗುವಂತೆ ಮಾಡಿದೆ ಮತ್ತು ಎಐ ಕ್ಷೇತ್ರದಲ್ಲಿ ಲಭ್ಯವಿರುವ ಅತ್ಯಾಕರ್ಷಕ ಅವಕಾಶಗಳ ಬಾಗಿಲು ತೆರೆದಿದೆ ಎಂದು ಹೇಳಿದರು.
ಈ ವರ್ಷ ಎಐ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಒಟ್ಟು 270 ಗಂಟೆಗಳ ಥಿಯರಿಟಿಕಲ್ ತರಬೇತಿಯನ್ನು ಪಡೆದರು ಮತ್ತು ನಂತರ 80 ಗಂಟೆಗಳ ಪ್ರಾಜೆಕ್ಟ್ ಕೆಲಸವನ್ನು ಪೂರ್ಣಗೊಳಿಸಿದರು
