ವರದಿ: ಮಂಜುನಾಥ. ವಿ. ಪಾರಂಡಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ದಾನಿಗಳಿಂದ ವಿತರಣೆ:ಕೆಜಿಎಫ್ ಪಾರಂಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಟ್ರಾಕ್ ಶೂಟ್ ವಿತರಿಸಿದ ಬೆಂಗಳೂರಿನ ನಿವಾಸಿಗಳಾದ ದಾನಿಗಳ ವಿಜಿ ಕುಮಾರ್ ಹಾಗೂ ರಕ್ಷಾ . ಈ ಸಂದರ್ಭದಲ್ಲಿ ಗಿಡಕ್ಕೆ ನೀರು ಹಾಕೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ .ರಾಜ ಶ್ರೀ. ನಮ್ಮ ಶಾಲೆಗೆ ದಾನಿಗಳ ಕೊಡುಗೆ ಅಪಾರ ಈಗಾಗಲೇ ನಮ್ಮ ಶಾಲೆಯಲ್ಲಿ ಶಾಸಕರ ಅನುದಾನದ ಅಡಿಯಲ್ಲಿ 25 ಲಕ್ಷದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ಅವರ ಈ ಕಾರ್ಯಕ್ಕೆ ನಾವು ಚಿರಋಣಿ. ನಮ್ಮ ಶಾಲೆಯ ಮಕ್ಕಳು ಹಾಕಿರುವ ಸಮವಸ್ತ್ರ ಹಾಗೂ ಟೈ ಶೂ ಎಲ್ಲಾ ದಾನಿಗಳು ನೀಡಿರುವುದು. ಅದೇ ರೀತಿ ಈಗ ನೀಡುತ್ತಿರುವುದು ಬೆಂಗಳೂರಿನ ನಿವಾಸಿಗರ ವಿಜಿ ಕುಮಾರ್ ಹಾಗೂ ರಕ್ಷಾ ದಂಪತಿಗಳು ಮಕ್ಕಳಿಗೆ ಟ್ರಾಕ್ ಸೂಟ್ ವಿತರಣೆ ಮಾಡಿದ್ದಾರೆ. ಹೀಗೆ ನಮಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿರುವ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಇದೇ ರೀತಿ ಇನ್ನು ಹೆಚ್ಚಿನ ದಾನಿಗಳು ನಮ್ಮ ಸರ್ಕಾರಿ ಶಾಲೆಗೆ ದಾನ ನೀಡುವ ಮೂಲಕ ತಮ್ಮ ಹೆಸರುಗಳನ್ನು ನಾಮಫಲಕಗಳಲ್ಲಿ ಪ್ರಕಟಿಸುತ್ತೇವೆ ಎಂದರು. ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ನಮ್ಮ ಶಾಲೆಯಲ್ಲಿ ಯಾವುದೇ ರಾಜಿ ಇಲ್ಲ ಬೆಳಗ್ಗೆ ಮಕ್ಕಳಿಗೆ ನೀಡಿರುವ ಹೋಂವರ್ಕ್ ವೀಕ್ಷಣೆ ಮಾಡುತ್ತೇವೆ. ಮಕ್ಕಳ ತಮ್ಮ ಪೋಷಕರು ಹೋಂವರ್ಕ್ ವೀಕ್ಷಣೆ ಮಾಡುತ್ತಾರೋ ಇಲ್ಲವೋ ಆದರೆ ನಾವು ಖಂಡಿತವಾಗಿ ವೀಕ್ಷಣೆ ಮಾಡಿ ಮಕ್ಕಳ ಶೈಕ್ಷಣಿಕ ಶಿಕ್ಷಣದ ಬಗ್ಗೆ ಗಮನಹರಿಸುತ್ತೇವೆ. ನಮ್ಮ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ಮುಖಂಡರಾದ ಸುಬ್ಬಾರೆಡ್ಡಿ ಮಾತನಾಡಿ ನಮ್ಮ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ರಾಜಶ್ರೀ ಮೇಡಂ ಆಗಮಿಸಿದಾಗ ನಿಂದಲೂ ನಮ್ಮ ಶಾಲೆ ಎಲ್ಲಾ ವಿಷಯದಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸಹ ಶಿಕ್ಷಕಿ ಶಿಲ್ಪ ಎಸ್ ಡಿಎಂಸಿ ಸದಸ್ಯರು. ಚೆನ್ನಪ್ಪ. ಜಯರಾಮ್ ರೆಡ್ಡಿ. ದುರ್ಗಾದೇವಿ. ಲಕ್ಷ್ಮಿ. ಶ್ರೀನಿವಾಸ್ ಮೊದಲಾದವರಿದ್ದರು

Leave a Reply

Your email address will not be published. Required fields are marked *