ಏ ವಿ ಪಬ್ಲಿಕ್ ಸ್ಕೂಲ್ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
ಯಲಹಂಕ ಮಾರುತಿ ನಗರ
ಎವಿ ಪಬ್ಲಿಕ್ ಸ್ಕೂಲ್ ಈ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು ಈ ಒಂದು ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶೇಷವಾಗಿ ಶಾಲೆಯ ಶಿಕ್ಷಕ ವೃಂದದವರಿಂದ ಮೊಬೈಲ್ ಬಳಕೆ ಎಷ್ಟು ಒಳ್ಳೆಯದು ಎಷ್ಟು ಕೆಟ್ಟದ್ದು ಎಂಬುದನ್ನು ಕಲೆಯ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರು ಈ ಒಂದು ಕಲೆಯ ಬಗ್ಗೆ ಮಕ್ಕಳು ಬಹಳ ಹರ್ಷ ವ್ಯಕ್ತಪಡಿಸಿದರು ಚಪ್ಪಾಳೆ ಹೊಡೆಯುತ್ತಾ ಖುಷಿಪಟ್ಟರು ಶಾಲೆಯ ಶಿಕ್ಷಕ ವೃಂದದವರಿಂದ ಕನ್ನಡ ರಾಜ್ಯೋತ್ಸವದ ಬಗ್ಗೆ ಮಕ್ಕಳ ದಿನಾಚರಣೆಯ ಬಗ್ಗೆ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರು ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ವಾಣಿ ಮೇಡಂ ಮತ್ತು ಸಮಾಜ ಸೇವಕರು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಇನ್ನು ಅನೇಕರು ಭಾಗವಹಿಸಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *