ಬದಲಾಗುತ್ತಿರುವ ಎಆರ್‌ಟಿ ಟ್ರೆಂಡ್‌ ಗಳ ಕುರಿತು ಸಂವಾದ ನಡೆಸಲು ಫರ್ಟಿಲಿಟಿ ಸಮಾವೇಶ ಆಯೋಜಿಸಿದ ನೋವಾ ಐವಿಎಫ್ ಫರ್ಟಿಲಿಟಿ

  • ಪ್ರಸ್ತುತ ನೋವಾ ಸಂಸ್ಥೆಯ ಫರ್ಟಿಲಿಟಿ ತಜ್ಞರು ಸೋಷಿಯಲ್ ಎಗ್ ಫ್ರೀಜಿಂಗ್ ಕುರಿತು ಅಂದ್ರೆ ವೈದ್ಯಕೀಯೇತರ ಉದ್ದೇಶಗಳಿಗೆ ಅಂಡಾಣುಗಳನ್ನು ಸಂರಕ್ಷಿಸುವ ಮತ್ತು ಸಂಗ್ರಹಿಸುವ ಕುರಿತು ತಿಂಗಳಲ್ಲಿ ಕನಿಷ್ಠ 10 ಪ್ರಶ್ನೆಗಳನ್ನಾದರೂ ಎದುರಿಸುತ್ತಾರೆ.

ಬೆಂಗಳೂರು, 1 ಡಿಸೆಂಬರ್ 2025: ಫರ್ಟಿಲಿಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯು ಬೆಂಗಳೂರು ಸೊಸೈಟಿ ಆಫ್ ಅಬ್‌ಸ್ಟಾಟ್ರಿಕ್ಸ್ & ಗೈನಕಾಲಜಿ (ಬಿಎಸ್‌ಓಜಿ) ಸಂಸ್ಥೆಯ ಸಹಭಾಗಿತ್ವದಲ್ಲಿ ಡಿಸೆಂಬರ್ 1ರಂದು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಫರ್ಟಿಲಿಟಿ ಸಮಾವೇಶವನ್ನು ಆಯೋಜಿಸಿತ್ತು. ಈ ಸಮಾವೇಶದಲ್ಲಿ ಸುಮಾರು 200-250 ಪ್ರತಿಷ್ಠಿತ ಪ್ರಸೂತಿ ತಜ್ಞರು, ಸ್ತ್ರೀರೋಗತಜ್ಞರು ಮತ್ತು ಫರ್ಟಿಲಿಟಿ ತಜ್ಞರು ಭಾಗವಹಿಸಿ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ಎಆರ್‌ಟಿ) ವಿಚಾರದಲ್ಲಿ ಬದಲಾಗುತ್ತಿರುವ ಟ್ರೆಂಡ್ ಗಳ ಕುರಿತು ಚರ್ಚೆ, ಸಂವಾದ ನಡೆಸಿದರು.

ಧೂಮಪಾನ, ಅತಿಯಾದ ಮದ್ಯಪಾನ, ಉದಾಸೀನಕರ ಜೀವನಶೈಲಿ ಮತ್ತು ಅಸಮರ್ಪಕ ನಿದ್ದೆ ಅಭ್ಯಾಸ ಇತ್ಯಾದಿಗಳು ನೇರವಾಗಿ ಬಂಜೆತಮ ಸಮಸ್ಯೆಗೆ ಸಂಬಂಧಿಸಿವೆ. ಈ ಅಭ್ಯಾಸಗಳು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುವ ಎಲ್ಲಾ ಸಾಧ್ಯತೆಗಳಿವೆ. ಅದರಿಂದ ಬಂಜೆತನ ಉಂಟಾಗಬಹುದಾಗಿದೆ. ಅಲ್ಲದೇ ಈಗೀಗ ಉದ್ಯೋಗದ ಕಾರಣಕ್ಕೆ ಅಥವಾ ಸೂಕ್ತ ಸಂಗಾತಿ ಸಿಗದೇ ಇದ್ದ ಕಾರಣಕ್ಕೆ ಮಗುವನ್ನು ಹೊಂದುವ ಪ್ರಕ್ರಿಯೆಯನ್ನು ತಡ ಮಾಡುವ, ಸ್ವಲ್ಪ ಸಮಯದ ಬಳಿಕ ಮಗು ಮಾಡಿಕೊಳ್ಳೋಣ ಎಂದು ಆಲೋಚಿಸುವ ಟ್ರೆಂಡ್ ಚಾಲ್ತಿಯಲ್ಲಿದೆ.

ಸಂದರ್ಭ ಹೀಗಿರುವಾಗ ಎಗ್ ಫ್ರೀಝಿಂಗ್ ಅಂದ್ರೆ ಅಂಡಾಣು ಘನೀಕರಣ ಪ್ರಕ್ರಿಯೆಯ ಕುರಿತು ಹೆಚ್ಚು ಜನರು ಅನುಮಾನ, ಪ್ರಶ್ನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯ ಸಂರಕ್ಷಿಸುವುದಕ್ಕೆ ಮಹಿಳೆಯ ಅಂಡಾಣುಗಳನ್ನು ಭವಿಷ್ಯದಲ್ಲಿ ಬಳಸುವ ಸಲುವಾಗಿ ಈಗಲೇ ಹೊರತೆಗೆದು ಹೆಪ್ಪುಗಟ್ಟಿಸಿ ಸಂಗ್ರಹಿಸಿ ಇಡುವ ಕ್ರಮವನ್ನು ಎಗ್ ಫ್ರೀಝಿಂಗ್ ಎನ್ನಲಾಗುತ್ತದೆ. ವಯಸ್ಸಾದ ಬಳಿಕೆ ಅಂಡಾಣುಗಳು ಶಕ್ತಿ ಕಳೆದುಕೊಳ್ಳುವುದರಿಂದ ಈ ಕ್ರಮವನ್ನು ಬಳಸಿ ಗುಣಮಟ್ಟದ ಅಂಡಾಣುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ. ಕೆಲವು ಮಹಿಳೆಯರು ವೈಯಕ್ತಿಕ ಅಥವಾ ವೈದ್ಯಕೀಯ ಕಾರಣಕ್ಕೆ ಮಾತೃತ್ವವನ್ನು ಮುಂದೂಡುತ್ತಾರೆ. ಅಂಥವರಿಗೆ ಈ ಕ್ರಮ ಸೂಕ್ತವಾಗುತ್ತದೆ. ಹಾರ್ಮೋನುಗಳ ಮೂಲಕ ಅಂಡಾಶಯದಲ್ಲಿ ಹಲವು ಅಂಡಾಣುಗಳನ್ನು ಪಕ್ವಗೊಳಿಸಿ ನಂತರ ಆ ಅಂಡಾಣುಗಳನ್ನು ಸರಳ ವಿಧಾನಗಳ ಮೂಲಕ ಹೊರತೆಗೆಯಲಾಗುತ್ತದೆ. ನಂತರ ಅವಶ್ಯ ಸಮಯದಲ್ಲಿ ಘನೀಕರಿಸಿಟ್ಟ ಅಂಡಾಣುಗಳನ್ನು ವೀರ್ಯದ ಜೊತೆ ಸೇರಿಸಿ ಫಲವತ್ತತೆ ಹೊಂದುವಂತೆ ಮಾಡಲಾಗುತ್ತದೆ ಮತ್ತು ಗರ್ಭಧಾರಣೆ ಹೊಂದಲು ಐವಿಎಫ್ ಕಾರ್ಯವಿಧಾನಕ್ಕೆ ಬಳಸಲಾಗುತ್ತದೆ.

ಈ ಕುರಿತು ಮಾತನಾಡಿದ ಬೆಂಗಳೂರಿನ ಬಸವೇಶ್ವರನಗರದ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ತಜ್ಞರಾದ ಡಾ. ಅವಿವಾ ಪಿಂಟೊ ರಾಡ್ರಿಗಸ್ ಅವರು, “ಎಗ್ ಫ್ರೀಝಿಂಗ್ ಅಥವಾ ಮೊಟ್ಟೆಯ ಘನೀಕರಣ ಕ್ರಮ ಸಾಮಾಜಿಕ ಕಾರಣಗಳಿಗೆ ಮಾಡಬಹುದಾದ ಒಂದು ಆಯ್ಕೆ ಮಾತ್ರವೇ ಅಲ್ಲ. ಬದಲಿಗೆ ವೈದ್ಯಕೀಯ ಕಾರಣಗಳಿಂದ ಗರ್ಭಧರಿಸದಿರದ ಮಹಿಳೆಯರಿಗೆ ಶಿಫಾರಸು ಮಾಡಬಹುದಾದ ಒಂದು ಉತ್ತಮ ವಿಧಾನವಾಗಿದೆ. ಕ್ಯಾನ್ಸರ್, ಎಂಡೊಮೆಟ್ರಿಯೊಸಿಸ್, ಆರಂಭಿಕ ಋತುಬಂಧದ ಆನುವಂಶಿಕ ಇತಿಹಾಸ ಹೊಂದಿರುವ ಅಥವಾ ಫರ್ಟಿಲಿಟಿ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಎಗ್ ಫ್ರೀಝಿಂಗ್ ವಿಧಾನವು ಬಹಳ ಮಹತ್ವದ್ದಾಗಿದೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆಯು ಒವೇರಿಯನ್ ರಿಸರ್ವ್ ಅಥವಾ ಮೀಸಲು ಅಂಡಾಶಯ (ಅಂಡಗಳ ಸಂಖ್ಯೆ ಮತ್ತು ಗುಣಮಟ್ಟ) ಅನ್ನು ಕಡಿಮೆ ಮಾಡಬಹುದು. ಎಗ್ ಫ್ರೀಝಿಂಗ್ ವಿಧಾನವು ಮಹಿಳೆಯರಿಗೆ ಆರಂಭಿಕ ಹಂತದಲ್ಲಿಯೇ ಆರೋಗ್ಯಕರ ಮೊಟ್ಟೆಗಳನ್ನು ಸಂಗ್ರಹಿಸಿ ತಮ್ಮ ಫರ್ಟಿಲಿಟಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭವಿಷ್ಯದಲ್ಲಿ ಪರಿಸ್ಥಿತಿ ಕೈಕೊಟ್ಟಾಗ ಅಥವಾ ಶಸ್ತ್ರಚಿಕಿತ್ಸೆ ಕಾರಣದಿಂದ ಅಂಡಾಶಯದ ಮೇಲೆ ಪರಿಣಾಮ ಉಂಟಾದಾಗ ಹೀಗೆ ವ್ಯತಿರಿಕ್ತ ಸನ್ನಿವೇಶಗಳಲ್ಲಿಯೂ ಗರ್ಭಧಾರಣೆ ಮಾಡುವ ಅವಕಾಶ ಒದಗಿಸುತ್ತದೆ. ಬಹಳಷ್ಟು ರೋಗಿಗಳಿಗೆ ಕೆಲವು ಚಿಕಿತ್ಸೆಗಳಿಂದ ಬಂಜೆತನ ಉಂಟಾಗಬಹುದು ಎಂಬ ವಿಚಾರ ತಿಳಿದಿರುವುದಿಲ್ಲ. ಅಂಥಾ ಸಂದರ್ಭದಲ್ಲಿ ವೈದ್ಯರು ಎಗ್ ಫ್ರೀಝಿಂಗ್ ವಿಧಾನವನ್ನು ಅವರಿಗೆ ಶಿಫಾರಸು ಮಾಡುವುದು ಬಹಳ ಮುಖ್ಯ” ಎಂದು ಹೇಳಿದರು.

ಬೆಂಗಳೂರಿನ ಕೋರಮಂಗಲದ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ಸ್ಪೆಷಲಿಸ್ಟ್ ಡಾ.ಮಹೇಶ್ ಕೋರೆಗೋಳ್ ಅವರು ಮಾತನಾಡಿ, “ಒಂದು ಅಧ್ಯಯನದ ಪ್ರಕಾರ ಪಾಶ್ಚಿಮಾತ್ಯ ಮಹಿಳೆಯರಿಗೆ ಹೋಲಿಸಿದರೆ ಭಾರತೀಯ ಮಹಿಳೆಯರ ಅಂಡಾಶಯಕ್ಕೆ 6 ವರ್ಷ ವೇಗವಾಗಿ ವಯಸ್ಸಾಗುತ್ತದೆ. ಮಹಿಳೆಯರಿಗೆ ವಯಸ್ಸಾದಂತೆ ಅವರ ಅಂಡಾಣುಗಳ ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಅದರಿಂದ ಮುಂದೆ ಗರ್ಭಿಣಿಯಾಗುವುದು ಕಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಹಿಳೆಯರು ತಮಗೆ ಸೂಕ್ತ ಸಂಗಾತಿ ಸಿಗದೇ ಇರುವುದರಿಂದ, ಉದ್ಯೋಗ ಕಾರಣದಿಂದ ಮತ್ತು ಗಂಡನಿಂದ ಬೇರೆಯಾಗುವ ಕಾರಣದಿಂದ ಹೀಗೆ ಹಲವು ಕಾರಣಗಳಿಂದ ತಮ್ಮ ಅಂಡಾಣುಗಳನ್ನು ಘನೀಕರಿಸುವ ಪ್ರಕ್ರಿಯೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಹೀಗೆ ಎಗ್ ಫ್ರೀಝಿಂಗ್ ವಿಧಾನವನ್ನು ಆರಿಸಿಕೊಳ್ಳುವವರಲ್ಲಿ ಬಹುತೇಕರು 30ನೇ ವಯಸ್ಸಿನ ಆಸುಪಾಸಿನಲ್ಲಿ ಇರುವವರೇ ಆಗಿದ್ದಾರೆ. ಮಹಿಳೆಯರು ತಮ್ಮ ದೈಹಿಕ ವಿಚಾರಗಳ ಕುರಿತು ಅರಿವು ಹೊಂದಿದ್ದಾರೆ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬುದಕ್ಕೆ ಈ ಹೊಸ ಟ್ರೆಂಡ್ ಪುರಾವೆಯಾಗಿದೆ” ಎಂದು ಹೇಳಿದರು.

ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯು ಫರ್ಟಿಲಿಟಿ ಕ್ಷೇತ್ರದಲ್ಲಿ ಸಮಗ್ರ ಚಿಕಿತ್ಸೆ ಒದಗಿಸುವ ಕೇಂದ್ರವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಸುಸಜ್ಜಿತ ಲ್ಯಾಬ್‌ ಗಳನ್ನು ಹೊಂದಿದೆ. ವಿಶೇಷವಾಗಿ ಫರ್ಟಿಲಿಟಿ ಚಿಕಿತ್ಸೆ ನೀಡುವ ವಿಚಾರದಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುತ್ತದೆ.

Leave a Reply

Your email address will not be published. Required fields are marked *