ಆಕ್ಸ್ಫರ್ಡ್ ಚಿಣ್ಣರ ಲೋಕದ ಅದ್ಭುತ ವಸ್ತು ಪ್ರದರ್ಶನ

ಯಲಹಂಕದ ಕೋಗಿಲು ರಸ್ತೆಯಲ್ಲಿರುವ ಆಕ್ಸ್ಫರ್ಡ್ ಶಾಲೆಯಲ್ಲಿ 30 11 2024 ಶನಿವಾರದಂದು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಕ್ಕಳು ತಯಾರಿಸಿದ ಕ್ರಿಸ್ಮಸ್ ನೆನಪಿಸುವಂತಹ ಕ್ರಿಸ್ತನ ಮನೆ, ಪಾರಂಪರಿಕ ಆಟಗಳಾದ ಗೋಲಿ, ಬುಗುರಿ, ಅಳಿಗುಣಿ ,ಲಗೋರಿ ಅಚ್ಚಿನ ಕಲ್ಲು ಮುಂತಾದ ಆಟಗಳನ್ನು ನೆನಪಿಸುವ ಆಟದ ಮನೆ,
ನಗರ ಚಿತ್ರಣ, ಹಳ್ಳಿಯ ಜೀವನ ಬಿಂಬಿಸುವ ಮಾದರಿಗಳು, ವಿವಿಧ ರಾಜ್ಯಗಳ ಉಡುಗೆ ತೊಡೆಗೆಗಳು, ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಕಲಾ ವೈಭವದ ಪಕ್ಷಿ ನೋಟ, ವಿವಿಧ ಭಾಷೆ, ವಾಸ್ತುಶಿಲ್ಪಗಳ ಪ್ರತಿಬಿಂಬ ರೂಪವಾಗಿತ್ತು. ಅಲ್ಲದೆ ಇತಿಹಾಸವನ್ನು ಬಿಂಬಿಸುವ ತಾಜ್ಮಹಲ್ ಕಲ್ಲಿನ ರಥ ಪಾರ್ಲಿಮೆಂಟ್ ಮುಂತಾದ ಐತಿಹಾಸಿಕ ಸ್ಮಾರಕಗಳ ಮಾದರಿಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಡಿನ ನಾನಾ ರೀತಿಯ ಮಾದರಿಗಳು ಹೆಚ್ಚು ಕಾಡು ಪ್ರಾಣಿಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದವು.
ಇತ್ತೀಚಿನ ದಿನಗಳಲ್ಲಿ ಅತ್ಯವಶ್ಯಕವಾಗಿರುವ ಕಂಪ್ಯೂಟರ್ ಮೊಬೈಲ್ ಫೋನ್ಗಳ ಮಾದರಿಗಳು,
ಗಣಿತದ ರೇಖಾ ವಿನ್ಯಾಸಗಳು ಅಂಕಿ ಸಂಖ್ಯೆಗಳ ಚಮತ್ಕಾರಗಳು ಗಣಿತ ವಿಭಾಗದಲ್ಲಿ ಕಂಡರೆ, ಭಯವನ್ನು ಹುಟ್ಟಿಸುವ ಭಯಾನಕ ಮನೆ ಮತ್ತಷ್ಟು ಜನರನ್ನು ಕುತೂಹಲದಲ್ಲಿ ಮುಳುಗಿಸಿತ್ತು.
ಹಿಂದಿ ವಿಭಾಗದಲ್ಲಿ ರಾಕೆಟ್ ಕಾಡಿನ ದೃಶ್ಯ ವಿವಿಧ ಆಟಗಳು ವಿವಿಧ ಕಥೆಗಳನ್ನು ಸಾರುವ ಮಾದರಿಗಳು ಮನಮೋಹಕವಾಗಿದ್ದವು.
ಅಷ್ಟೇ ಅಲ್ಲದೆ ಚಿತ್ರಕಲೆ ಮೂಡಿಸುವಲ್ಲಿ ಯಾವುದೇ ರೀತಿಯಲ್ಲೂ ಹಿಂದುಳಿದಿಲ್ಲ ಎಂಬುದನ್ನು ಸಾರುವಂತೆ ಮರಗಳು, ಕಾಡು ,ಕಾಡಿನ ಚಿತ್ರ ,ತಮ್ಮ ನೆಚ್ಚಿನ ನಾಯಕರ ಚಿತ್ರಗಳು ಕುಂಚದಲ್ಲಿ ಮೂಡಿದ್ದವು . ಎಲ್ಲದರ ಜೊತೆಗೆ
ಎಲ್ ಕೆ ಜಿ. ಯು ಕೆ ಜಿ. ಚಿಣ್ಣರು ತಯಾರಿಸಿದ ಮಾದರಿಗಳು ಜನರ ಮನಸೂರಿಗೊಂಡವು.
ಇಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಆಟಗಳು ಹಾಗೂ ವಿವಿಧ ರೀತಿಯ ತಿಂಡಿ ಪದಾರ್ಥಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪೋಷಕರು ಇತರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರದರ್ಶನ ಜ್ಞಾನಾರ್ಜನೆ, ಮನರಂಜನೆ ನೀಡುವುದರೊಂದಿಗೆ ಪ್ರೇಕ್ಷಕರನ್ನು ತೃಪ್ತಿಪಡಿಸುವಲ್ಲಿ ಯಶಸ್ವಿಯಾಯಿತು. ಎಂಬುದರಲ್ಲಿ ಎರಡು ಮಾತಿಲ್ಲ. ಒಟ್ಟಾರೆ ಚಿಣ್ಣರ ಅದ್ಭುತ ಲೋಕಕ್ಕೆ ಪ್ರೇಕ್ಷಕರನ್ನು ಕೊಂಡುಹೊಯ್ದಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆಕ್ಸ್ಫರ್ಡ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಶ್ರೀ ರಾಜು, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್, ಶ್ರೀಮತಿ ಶೋಭರಾಜ್ ಹಾಗೂ ಶ್ರೀ ಬಸವರಾಜ್ ನೆರವೇರಿಸಿದರು.

                Public power

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthu

Kogilu layout Yelahanka

9845085793

7349337989

Leave a Reply

Your email address will not be published. Required fields are marked *