
ಬವುಮಾಕಾನ್ಎಕ್ಸ್ಪೋ 2024ರಲ್ಲಿ ತನ್ನ ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ಅನಾವರಣಗೊಳಿಸಿದ ಟಾಟಾ ಮೋಟಾರ್ಸ್
ವಿವಿಧ ಕೈಗಾರಿಕೆಗಳಿಗಾಗಿ ಸಿದ್ಧಗೊಳಿಸಿರುವ ವಿವಿಧ ಶ್ರೇಣಿಯ ಹೊಸ ಕಾಲದ ಜೆನ್ ಸೆಟ್ ಗಳು, ಕೈಗಾರಿಕಾ ಎಂಜಿನ್ ಗಳು ಮತ್ತು ಆಕ್ಸಲ್ ಗಳನ್ನು ಪ್ರದರ್ಶಿಸಿದ ಕಂಪನಿ
ಬೆಂಗಳೂರು, 16 ಡಿಸೆಂಬರ್, 2024: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಮತ್ತು ಸಾರಿಗೆ ಉತ್ಪನ್ನ ಪೂರೈಕೆದಾರರಾದ ಟಾಟಾ ಮೋಟಾರ್ಸ್ ಬವುಮಾಕಾನ್ಎಕ್ಸ್ಪೋ 2024ರಲ್ಲಿ ತನ್ನ ಅತ್ಯಾಧುನಿಕ ಸಮಗ್ರ ಉತ್ಪನ್ನ ಶ್ರೇಣಿಯನ್ನು ಪ್ರದರ್ಶಿಸಿದೆ. ಈ ಕಾರ್ಯಕ್ರಮದಲ್ಲಿ 125 ವಿಕೆಸಿಇವಿಎ ಯಿಂದ ಹಿಡಿದು 25ವಿಕೆವಿಎವರೆಗಿನ ವಿವಿಧ ಶ್ರೇಣಿಯ ಸಿಪಿಸಿಬಿ IV+ ಮಾನದಂಡಗಳಿಗೆ ಅನುಗುಣವಾಗಿರುವ ಜೆನ್ ಸೆಟ್ ಗಳನ್ನು, 55-138 ಎಚ್ ಪಿ ಪವರ್ ನೋಡ್ ಗಳ ಸಿಇವಿ ಬಿಎಸ್ V ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿರುವ ಕೈಗಾರಿಕಾ ಎಂಜಿನ್ ಗಳನ್ನು, ಲೈವ್ ಆಕ್ಸಲ್ ಗಳನ್ನು ಮತ್ತು ಟ್ರೇಲರ್ ಆಕ್ಸಲ್ ಗಳು ಮತ್ತು ಅವುಗಳ ಘಟಕಗಳನ್ನು ಟಾಟಾ ಮೋಟಾರ್ಸ್ ಪ್ರದರ್ಶನ ಮಾಡಿತು. ವಸ್ತು ನಿರ್ವಹಣೆ, ನಿರ್ಮಾಣ ಉಪಕರಣಗಳು, ಕೈಗಾರಿಕಾ ಉತ್ಪನ್ನಗಳು ಮತ್ತು ಸರಕು ಸಾಗಾಣಿಕಾ ವಿಭಾಗಗಳ ಹೊಸ ಕಾಲದ ಅಗತ್ಯಗಳನ್ನು ಪೂರೈಸಲು ಮತ್ತು ಹೆಚ್ಚಿನ ದಕ್ಷತೆ ಹಾಗೂ ಬಾಳಿಕೆ ಒದಗಿಸುವಂತೆ ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ
ಬವುಮಾಕಾನ್ಎಕ್ಸ್ಪೋ 2024ರಲ್ಲಿ ಟಾಟಾ ಮೋಟಾರ್ಸ್ ಪೆವಿಲಿಯನ್ ಅನ್ನು ಉದ್ಘಾಟಿಸಿ ಮಾತನಾಡಿದ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬಿಡಿಭಾಗಗಳು ಮತ್ತು ವಾಹನೇತರ ವ್ಯಾಪಾರ ವಿಭಾಗದ ಮುಖ್ಯಸ್ಥರಾದ ಶ್ರೀ ವಿಕ್ರಮ್ ಅಗರವಾಲ್ ಅವರು, ” ಗ್ರಾಹಕರು ಬಯಸುವ ದೃಢವಾದ ಮತ್ತು ಬಾಳಿಕೆ ಬರುವ ತಂತ್ರಜ್ಞಾನಗಳುಳ್ಳ ಟಾಟಾ ಮೋಟಾರ್ಸ್ ನ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲು ಬವುಮಾಕಾನ್ಎಕ್ಸ್ಪೋ 2024 ಸೂಕ್ತವಾದ ವೇದಿಕೆಯಾಗಿದೆ. ನಮ್ಮ ಗ್ರಾಹಕರ ಬೇಡಿಕೆಗೆ ತಕ್ಕಂತೆ, ಗ್ರಾಹಕರ ಅಭಿಪ್ರಾಯಗಳನ್ನು ಪಡೆದು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುತ್ ಉತ್ಪನ್ನಗಳಾದ ಜೆನ್ ಸೆಟ್ ಗಳು, ಸಿಇವಿ ಬಿಎಸ್ V ಎಮಿಷನ್ ಮಾನದಂಡಗಳಿಗೆ ಪೂರಕವಾಗಿ ಸಿದ್ಧವಾಗಿರುವ ಕೈಗಾರಿಕಾ ಎಂಜಿನ್ ಗಳು ಮತ್ತು ಲೈವ್ ಆಕ್ಸಲ್ ಗಳನ್ನು ಹಾಗೂ ಸರಕು ಸಾಗಾಣಿಕಾ ವಿಭಾಗವನ್ನು ಸದೃಢಗೊಳಿಸುವ ಟ್ರೈಲರ್ ಆಕ್ಸಲ್ ಗಳು ಮತ್ತು ಅವುಗಳ ಘಟಕಗಳನ್ನು ಒದಗಿಸುವ ಮೂಲಕ ಭಾರತದ ಗ್ರಾಹಕರ ಬೆಳೆಯುತ್ತಿರುವ ಅಗತ್ಯಗಳಿಗೆ ತಕ್ಕಂತೆ ನಮ್ಮ ಪೋರ್ಟ್ ಫೋಲಿಯೋವನ್ನು ವಿಸ್ತರಿಸುತ್ತಿದ್ದೇವೆ” ಎಂದು ಹೇಳಿದರು.
ಟಾಟಾ ಮೋಟಾರ್ಸ್ ಉತ್ಪನ್ನಗಳು ಅವುಗಳ ಹೆಚ್ಚಿನ ಬಾಳಿಕೆ, ದಕ್ಷತೆ ಮತ್ತು ಕಾರ್ಯಕ್ಷಮತೆಯಿಂದ ವಿಶಿಷ್ಟವಾಗಿವೆ. ವ್ಯಾಪಕವಾದ ಸಂಶೋಧನೆಯ ಮೂಲಕ ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಅತ್ಯಾಧುನಿಕ ತಯಾರಿಕಾ ಘಟಕಗಳಲ್ಲಿ ತಯಾರಿಸಲ್ಪಟ್ಟಿದೆ. ಈ ಉತ್ಪನ್ನಗಳಿಗೆ ದೇಶಾದ್ಯಂತ ಇರುವ 2500 ಅಧಿಕೃತ ಸೇವಾ ಮಳಿಗೆಗಳಲ್ಲಿ ನೆರವು ದೊರೆಯಲಿದೆ. ಕೈಗಾರಿಕಾ ವಿಭಾಗವು ಅಪೇಕ್ಷಿಸುವ ಗುಣಗಳುಳ್ಳ ಹೊಸ, ಉನ್ನತ-ಕಾರ್ಯಕ್ಷಮತೆಯ ಉತ್ಪನ್ನಗಳನ್ನು ಒದಗಿಸುವ ಮೂಲಕ ಭಾರತದ ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಗೆ ನೆರವಾಗಲು ಕಂಪನಿಯು ಬದ್ಧವಾಗಿದೆ.