



ಆಕ್ಸ್ಫರ್ಡ್ ಆವರಣದಲ್ಲಿ ಕ್ರಿಸ್ಮಸ್ ಸಂಭ್ರಮ
ಯಲಹಂಕದ ಕೋಗಿಲಿನ ಆಕ್ಸ್ಫರ್ಡ್ ಆಂಗ್ಲ ಶಾಲೆಯಲ್ಲಿ 24. 12 .24 .ಮಂಗಳವಾರದಂದು ಕ್ರಿಸ್ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ರವರು
ಪ್ರಾರ್ಥನೆ ಮನುಷ್ಯನಲ್ಲಿ ಭರವಸೆ ಮೂಡಿಸಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ನುಡಿದರು.
ಮುಂದುವರೆದು. ಪ್ರಯತ್ನದೊಂದಿಗೆ ದೇವರಲ್ಲಿನ ನಂಬಿಕೆ, ಪ್ರಾರ್ಥನೆಗಳು ಮಾನವನ ಜೀವನದಲ್ಲಿ ಬಹು ಮುಖ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ರಾಜು.ಶ್ರೀಮತಿ ಸುಜಾತ, ಶ್ರೀಮತಿ ಶೋಭಾ, ಶ್ರೀ ಪ್ರಕಾಶ್, ಶ್ರೀ ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಂದ ಕ್ರಿಸ್ ಮಸ್ ಕುರಿತ ಹಾಡು ನಾಟಕ ಹಾಗೂ ನೃತ್ಯ ಮುಂತಾದ. ಮನರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳು ನೃತ್ಯವನ್ನು ಮಾಡಿದ್ದು ವಿಶೇಷವಾಗಿತ್ತು.