

ಯಲಹಂಕ ದಿನಪತ್ರಿಕೆ ವಿತರಕರ ಸಂಘದಿಂದ ಹೊಸ ವರ್ಷದ ಸಂಭ್ರಮಾಚರಣೆ :
ಯಲಹಂಕ : ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಪದಾಧಿಕಾರಿಗಳು 2025ರ ಹೊಸ ವರ್ಷವನ್ನು ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ವಿತರಿಸುವ ಮೂಲಕ ಸಂಭ್ರಮದಿಂದ ಸ್ವಾಗತಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷರಾದ ಶಂಕರ್, ಖಜಾಂಚಿ ವೀರಭದ್ರ ವೈ.ಸಿ., ಉಮೇಶ್, ಶಶಿ, ವೀರೇಶ್, ನಾಗಾರ್ಜುನ, ದೇವರಾಜ್ ಪ್ರದೀಪ್, ವೆಂಕಟೇಶ್ ಮೂರ್ತಿ, ಪವನ್, ಚರಣ್, ಕುಮಾರ್ ಸೇರಿದಂತೆ ದಿನಪತ್ರಿಕೆ ಹಾಕುವ ಹುಡುಗರಿದ್ದು, ಎಲ್ಲಾ ಪತ್ರಿಕಾ ಕಚೇರಿಗಳ ವ್ಯವಸ್ಥಾಪಕರು, ವರದಿಗಾರರು ಸೇರಿದಂತೆ ದಿನಪತ್ರಿಕೆಗಳ ಎಲ್ಲಾ ಪ್ರತಿನಿಧಿಗಳಿಗೆ ಶುಭವಾಗಲೆಂದು ಹಾರೈಸಿದರು.