ನಿವೇದಿ ಸಂಸ್ಥೆಯಲ್ಲಿ ‘ಫ್ರಾನ್ಸ್ ರೆಫರೆನ್ಸ್ ಲ್ಯಾಬೋರೇಟರಿ’ ಉದ್ಘಾಟನೆ :

ಯಲಹಂಕ : ಭಾರತದಲ್ಲಿ ಲೆಪ್ಟೋಸ್ಪೈರೋಸಿಸ್ ರೋಗ ನಿರ್ಣಯ ಮತ್ತು ನಿಯಂತ್ರಣ ಮಾಡುವ ಸಲುವಾಗಿ ಯಲಹಂಕದ ರಾಮಗೊಂಡನಹಳ್ಳಿ ಇರುವ ನಿವೇದಿ ಸಂಸ್ಥೆಯಲ್ಲಿ ಅಳವಡಿಸಲಾಗಿದ್ದ ನೂತನ ‘ಫ್ರಾನ್ಸ್ ರೆಫರೆನ್ಸ್ ಲ್ಯಾಬೋರೇಟರಿ’ಯನ್ನು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ ನ ಮಹಾ ನಿರ್ದೇಶಕ ಡಾ.ಹಿಮಾಂಶು ಪಾಠಕ್ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಲೆಪ್ಟಾಸ್ಪೈರೋಸಿಸ್ ಒಂದು ಪ್ರಾಣಿ ಜನ್ಯ ರೋಗವಾಗಿದ್ದು, ಪ್ರಾಣಿಗ ಳಿಂದ ಮನುಷ್ಯರಿಗೆ ಹರಡುತ್ತದೆ. ಇಂದು ಉದ್ಘಾಟಿಸಿರುವ ಈ ಅತ್ಯಾಧುನಿಕ ಪ್ರಯೋಗಾಲಯವು ಭಾರತಾದ್ಯಂತ ಲೆಪ್ಟಾಸ್ಪೈರೋಸಿಸ್ ರೋಗದ ಕಣ್ಗಾವಲು ಮತ್ತು ರೋಗವನ್ನು ಸಮರ್ಥವಾಗಿ ನಿಯಂತ್ರಣದಲ್ಲಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲೆಪ್ಟಾಸ್ಪೈರೋಸಿಸ್ ಗಾಗಿ ವಿಶ್ವದಾದ್ಯಂತ ಕೇವಲ 5 ಡಬ್ಲ್ಯು.ಓ.ಎ.ಎಚ್.ರೆಫರೆನ್ಸ್ ಲ್ಯಾಬೋರೇಟರಿಗಳಿದ್ದು, ಅವುಗಳಲ್ಲಿ ಇಲ್ಲಿನ ಪ್ರಯೋಗಾಲ ಯವು ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ. ಈ ಪ್ರಯೋಗಾಲಯವು ಐಎಸ್ಓ 17025: 2017 ಮಾನ್ಯತೆ ಪಡೆದಿರುವ ಪ್ರಯೋಗಾಲಯ ವಾಗಿದೆ ಎಂದು ವಿವರಿಸಿದರು.

ಇದೇ ವೇಳೆ ಪ್ರಾಣಿಗಳ ಆರೋಗ್ಯ ಸಂಶೋಧನೆ ಮತ್ತು ರೋಗ ನಿರ್ವಹಣೆಯನ್ನು ಮುನ್ನಡೆಸುವ ಗುರಿ ಹೊಂದಿರುವ ನಿವೇದಿಯ ಮೂಲಸೌಕರ್ಯಕ್ಕೆ ಹೂಫ್ ಮತ್ತು ಹೆಲ್ತ್‌ ಪ್ರವೇಶದ್ವಾರವನ್ನು ಸಹ ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ನಿವೇದಿ ನಿರ್ದೇಶಕರಾದ ಡಾ.ಬಿ.ಆರ್. ಗುಲಾಟಿ, ಐ.ವಿ.ಆರ್.ಐ.ನ ನಿರ್ದೇಶಕರಾದ ಡಾ.ಪಲ್ಲಭ್ ಚೌಧರಿ, ಪ್ರಧಾನ ವಿಜ್ಞಾನಿಗಳಾದ ಡಾ.ರಾಜೇಶ್ವರಿ ಶೋಮ್, ಡಾ.ಎಸ್.ಎಸ್.ಪಾಟೀಲ್, ಡಾ.ಕೆ.ಪಿ.ಸುರೇಶ್, ಡಾ.ವಿ.ಬಾಲಮುರುಗನ್, ಡಾ.ಸತೀಶ್ ಶಿವಚಂದ್ರ, ಡಾ.ಶಿವಶರಣಪ್ಪ, ಡಾ.ಜಗದೀಶ್ ಹಿರೇಮಠ್, ಡಾ.ನಾರಾಯಣ್ ಜಿ., ವಿಜ್ಞಾನಿಗಳಾದ ಡಾ.ಸತೀಶ್ ಗೌಡ ಸಿ.ಎಸ್., ಡಾ.ಚೇತನ್ ಕುಮಾರ್ ಹಾಗೂ ಆಡಳಿತಾಧಿಕಾರಿ ಮುರಳೀಧರನ್ ಮತ್ತು ಹಣಕಾಸು ಅಧಿಕಾರಿ ಸಾದಿಕ್ ಅಲಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *